ಸರ್ವಾಧಿಕಾರಿ ಮಾತನಾಡುತ್ತಿದ್ದಂತೆ ಅಲ್ಲಿ ಸಂಪೂರ್ಣ ಮೌನ. ಸುತ್ತಮುತ್ತಲಿನ ನಾಜಿಗಳು, ಧ್ಯಾನ್ ಚಂದ್ ಮುಖವನ್ನು ದಿಟ್ಟಿಸಿ ನೋಡುತ್ತಿದ್ದರು. ನಿರೀಕ್ಷೆಯಿಂದ ಉತ್ತರಕ್ಕಾಗಿ ಕಾಯುತ್ತಿದ್ದರು. ಅವರು ಉತ್ತರಿಸಿದ್ದು ಹೀಗಿತ್ತು. ದಯವಿಟ್ಟು ಕ್ಷಮಿಸಿ, ನಿಮ್ಮ ಗೌರವಕ್ಕೆ ಅಭಾರಿ. ನಾನು ಭಾರತೀಯ. ಭಾರತವೇ ನನ್ನ ಮನೆ. ನನ್ನ ಸ್ವಂತ ಜನರ ನಡುವೆ ಬಡ ಕಾರ್ಪೋರಲ್ ಆಗಿಯೇ ಉಳಿಯುತ್ತೇನೆ. ಅದೇ ನನಗೆ ಸಂತೋಷ ಎಂದು ಜಗತ್ತೇ ಹೆದರುತ್ತಿದ್ದ ಹಿಟ್ಲರ್ ಮುಂದೆ ಧ್ಯಾನ್ ಧೈರ್ಯದಿಂದ ಹೇಳಿ, ಅವರು ಕೊಟ್ಟಿದ್ದ ಆಫರ್ ಅನ್ನು ನಯವಾಗಿ ತಿರಸ್ಕರಿಸಿದ್ದರು. ಈ ಉತ್ತರ ಬೆನ್ನಲ್ಲೇ, ಹಿಟ್ಲರ್ ತಲೆ ಅಲ್ಲಾಡಿಸುತ್ತಾ ಅಲ್ಲಿಂದ ಹೊರಟು ಹೋದರು.