ಸ್ವತಃ ಸಾಕ್ಷಿ ಸಿಂಗ್ ಪ್ರಕಟಿಸಿರುವ ಕಾರಣ, ಮಹೇಂದ್ರ ಸಿಂಗ್ ಧೋನಿ ಮುಂದಿನ ವರ್ಷದ ಐಪಿಎಲ್ ಆಡುವುದು ಖಚಿತವಾಗಿದೆ. ಧೋನಿಗೆ ಸಂಬಂಧಿಸಿದ ಪ್ರತಿ ವಿಷಯವನ್ನೂ ನಿರ್ಧರಿಸುವುದು ಸಾಕ್ಷಿಯೇ ಎಂಬುದು ವಿಶೇಷ. 2020, 2022ರ ಆವೃತ್ತಿ ಸಿಎಸ್ಕೆ ಅಟ್ಟರ್ ಫ್ಲಾಪ್ ಆಗಿದ್ದ ಸಂದರ್ಭದಲ್ಲಿ ಮೊದಲಿಗೆ ಪ್ರತಿಕ್ರಿಯಿಸಿದ್ದು ಕೂಡ ಸಾಕ್ಷಿ ಅವರೇ. ಒಂದು ವೇಳೆ ಧೋನಿ ನಿವೃತ್ತಿ ಪಡೆದು ಸಿನಿಮಾ ಕ್ಷೇತ್ರಕ್ಕೆ ಬಂದರೂ, ಅಭಿಮಾನಿಗೆ ಇನ್ನೂ ಖುಷಿಯ ವಿಚಾರ. ಮೈದಾನದಲ್ಲಿ ಅಲ್ಲದಿದ್ದರೂ, ತೆರೆಯ ಮೇಲೆ ಅವರನ್ನು ಕಣ್ತುಂಬಿಕೊಳ್ಳಬಹುದು ಎಂಬುದು ಅಭಿಮಾನಿಗಳ ಆಶಯ.