ದಿನೇಶ್ ಕಾರ್ತಿಕ್ ಸ್ಥಾನದಲ್ಲಿ ಧೋನಿಗೆ ಅವಕಾಶ
ಅಂದು ಭಾರತ ತಂಡಕ್ಕೆ ಪ್ರಭಾವಶಾಲಿ ವಿಕೆಟ್ ಕೀಪರ್ಗಳ ಕೊರತೆ ಕಾಡುತ್ತಿತ್ತು. ರಾಹುಲ್ ದ್ರಾವಿಡ್, ಪಾರ್ಥಿವ್ ಪಟೇಲ್, ಅಜಯ್ ರಾತ್ರಾ, ದಿನೇಶ್ ಕಾರ್ತಿಕ್, ನಮನ್ ಓಜಾ ಸೇರಿದಂತೆ ಹಲವರು ತಂಡಕ್ಕೆ ಬಂದರು ಹೋದರು. ದಿನೇಶ್ ಕಾರ್ತಿಕ್ ತಂಡದಲ್ಲಿ ಹೆಚ್ಚು ದಿನ ಉಳಿಯುವ ಅವಕಾಶ ಹೊಂದಿದ್ದರು. ಆದರೆ ಮ್ಯಾನೇಜ್ಮೆಂಟ್ ನಂಬಿಕೆ ಉಳಿಸಿಕೊಳ್ಳುವಲ್ಲಿ ವಿಫಲರಾದರು. ಡಿಕೆ ಅವರ ಸತತ ವೈಫಲ್ಯದಿಂದ ಅವಕಾಶ ಪಡೆದ ಧೋನಿ, ಮಿಂಚಿದರು. ಅತ್ತ ವಿಕೆಟ್ ಕೀಪರ್ ಆಗಿ, ಮತ್ತೊಂದೆಡೆ ನಾಯಕನಾಗಿ ದೇಶದ ಕೀರ್ತಿ ಪತಾಕೆ ಹಾರಿಸಿದರು. ಪ್ರಸ್ತುತ ರಿಷಭ್ ಪಂತ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಕೆಎಲ್ ರಾಹುಲ್, ಜಿತೇಶ್ ಶರ್ಮಾ ಸೇರಿದಂತೆ ಹಲವರು ವಿಕೆಟ್ ಕೀಪರ್ಗಳಾಗಿದ್ದಾರೆ ಅಂದರೆ, ಅದಕ್ಕೆ ಧೋನಿಯೇ ಕಾರಣ.