Sports
oi-Naveen Kumar N

ಮಹೇಂದ್ರ ಸಿಂಗ್ ಧೋನಿ ಜುಲೈ 7ರಂದು 42ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕರಾಗಿರುವ ಧೋನಿ ಅನೇಕ ದಾಖಲೆಗಳನ್ನು ಬರೆದಿದ್ದಾರೆ. ಕ್ರಿಕೆಟ್‌ಗೆ ಕಾಲಿಟ್ಟಾಗಿನಿಂದ ಧೋನಿ ಮುಟ್ಟಿದ್ದೆಲ್ಲಾ ಚಿನ್ನವಾಗಿದೆ. ಟಿ20 ವಿಶ್ವಕಪ್, ಏಕದಿನ ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಏಕೈಕ ನಾಯಕ ಧೋನಿ.
ಧೋನಿ ನಾಯಕತ್ವದಲ್ಲಿ ಭಾರತವು 2007 ರ ಟಿ20 ವಿಶ್ವಕಪ್, 2011 ಏಕದಿನ ವಿಶ್ವಕಪ್ ಮತ್ತು 2013 ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತು. 2010 ಮತ್ತು 2016 ರ ಏಷ್ಯಾಕಪ್‌ಗಳಲ್ಲಿ ಭಾರತ ಧೋನಿ ನಾಯಕತ್ವದಲ್ಲಿ ಚಾಂಪಿಯನ್ ಆಗಿತ್ತು.

ವಿಕೆಟ್ ಹಿಂದೆ ನಿಂತು ಎಂತಹದ್ದೇ ಸಂದರ್ಭದಲ್ಲೂ ತಂಡವನ್ನು ಗೆಲ್ಲಿಸುವ ತಾಕತ್ತು, ಮಿಂಚಿನ ಸ್ಟಂಪಿಂಗ್, ಬೌಲರ್ ಗಳಿಂದ ಅದ್ಭುತ ಪ್ರದರ್ಶನ ಕೊಡಿಸುವ ವಿಚಾರದಲ್ಲಿ ಧೋನಿಗೆ ಧೋನಿಯೇ ಸಾಟಿ. ತಮ್ಮ 41ನೇ ವಯಸ್ಸಿನಲ್ಲೂ ಯುವ ಬೌಲಿಂಗ್ ಪಡೆಯನ್ನು ಕಟ್ಟಿಕೊಂಡು, 2023ರ ಐಪಿಎಲ್ ಟ್ರೋಫಿ ಗೆದ್ದು, 5ನೇ ಬಾರಿ ಸಿಎಸ್‌ಕೆ ತಂಡವನ್ನು ಚಾಂಪಿಯನ್ ಮಾಡಿದ್ದು ಇದೇ ಕೂಲ್ ಕ್ಯಾಪ್ಟನ್.
2023ರ ಐಪಿಎಲ್ ಧೋನಿಗೆ ಕೊನೆಯ ಆವೃತ್ತಿ ಅವರು ನಿವೃತ್ತಿಯಾಗ್ತಾರೆ ಎನ್ನುವ ಒಂದು ಸುದ್ದಿಯೇ ಸಾಕಿತ್ತು, ಧೋನಿಯ ಮೇಲೆ ಇಡೀ ದೇಶದಲ್ಲಿ ಇರುವ ಅಭಿಮಾನ ಗೊತ್ತಾಗಲು. ಯಾವುದೇ ಸ್ಟೇಡಿಯಂನಲ್ಲಿ ಸಿಎಸ್‌ಕೆ ತಂಡ ಆಡಿದರೂ, ಅಲ್ಲಿ ಧೋನಿ ಅಭಿಮಾನಿಗಳು ಹಾಜರಾಗುತ್ತಿದ್ದರು, ಧೋನಿ… ಧೋನಿ.. ಎಂದು ಕಿರುಚಿ ಸಂಭ್ರಮಿಸಿದ್ದರು.
ಮೊಣಕಾಲು ನೋವಿದ್ದರೂ ಲೆಕ್ಕಿಸದೇ ವಿಕೆಟ್ ಹಿಂದೆ ನಿಂತು ತಂಡವನ್ನು ಮುನ್ನಡೆಸಿದ ಧೋನಿ ತಮ್ಮ ತಂಡಕ್ಕೆ ಮತ್ತೊಂದು ಕಪ್ ಗೆದ್ದು ಕೊಟ್ಟರು. ಇಂತಹ ಧೋನಿ ಮತ್ತೊಂದು ಐಪಿಎಲ್ ಆಡಲಿ, ಅವರ ಮಿಂಚಿನ ಸ್ಟಂಪಿಂಗ್, ಅದ್ಭುತ ಬ್ಯಾಟಿಂಗ್ ನೋಡಬೇಕು ಎನ್ನುವುದು ಕೋಟ್ಯಂತರ ಅಭಿಮಾನಿಗಳ ಹಾರೈಕೆ, ಇಂತಹ ಅಭಿಮಾನಿಗಳಿಗೆ ರವೀಂದ್ರ ಜಡೇಜಾ ಖುಷಿ ಪಡುವ ಸುದ್ದಿಯನ್ನು ಕೊಟ್ಟಿದ್ದಾರೆ. ಅದು ತಮ್ಮ ಕೂಲ್ ಕ್ಯಾಪ್ಟನ್ ಹುಟ್ಟುಹಬ್ಬದಂದೇ.
My go to man since 2009 to till date and forever. Wishing you a very happy birthday mahi bhai.🎂see u soon in yellow💛 #respect pic.twitter.com/xuHcb0x4lS
— Ravindrasinh jadeja (@imjadeja) July 7, 2023
ಮುಂದಿನ ಐಪಿಎಲ್‌ನಲ್ಲಿ ಆಡುತ್ತಾರೆ ಧೋನಿ
ಹೌದು, ಮತ್ತೊಮ್ಮೆ ಧೋನಿ ಹಳದಿ ಜೆರ್ಸಿಯಲ್ಲಿ ಮೈದಾನಕ್ಕಿಳಿಯುವುದು ಖಚಿತವಾಗಿದೆ. ರವೀಂದ್ರ ಜಡೇಜಾ ಅವರೇ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ತಮ್ಮ ನಾಯಕನಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿ ಮಾಡಿರುವ ಟ್ವೀಟ್‌ನಲ್ಲಿ ಧೋನಿ ಮುಂದಿನ ಐಪಿಎಲ್‌ನಲ್ಲಿ ಆಡುವ ಸುಳಿವು ಕೊಟ್ಟಿದ್ದಾರೆ.
“2009ರಿಂದ ಇದುವರೆಗೂ ಮತ್ತು ಮುಂದೆಯೂ ಧೋನಿ ಜೊತೆ ಇರುತ್ತಾರೆ. ಜನ್ಮ ದಿನದ ಶುಭಾಶಯಗಳು ಸಹೋದರ. ಹಳದಿ ಜೆರ್ಸಿಯಲ್ಲಿ ನಿಮ್ಮನ್ನು ನೋಡಲು ಕಾಯುತ್ತಿದ್ದೇನೆ” ಎಂದು ಟ್ವೀಟ್ ಮಾಡಿದ್ದು, 2024ರ ಐಪಿಎಲ್‌ನಲ್ಲಿ ಧೋನಿ ಆಡಲಿದ್ದಾರೆ ಎಂದು ಹೇಳಿದ್ದಾರೆ.
ಶುಭ ಹಾರೈಸಿದ ಹಲವು ಆಟಗಾರರು
ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿ, “ಹುಟ್ಟುಹಬ್ಬದ ಶುಭಾಶಯಗಳು ನನ್ನ ನೆಚ್ಚಿನ ಎಂಎಸ್ ಧೋನಿ” ಎಂದು ಶೀರ್ಷಿಕೆ ನೀಡಿ ಧೋನಿ ಜೊತೆಗಿನ ಫೋಟೊವನ್ನು ಹಂಚಿಕೊಂಡಿದ್ದಾರೆ.
“ದೇವರು ನಿಮಗೆ ಅಂತ್ಯವಿಲ್ಲದ ಆಶೀರ್ವಾದಗಳನ್ನು ನೀಡಲಿ. ಜನ್ಮದಿನದ ಶುಭಾಶಯಗಳು. ಜನ್ಮದಿನದ ಶುಭಾಶಯಗಳು ಸಹೋದರ ಧೋನಿ” ಎಂದು ವೇಗಿ ಮೊಹಮ್ಮದ್ ಶಮಿ ಬರೆದಿದ್ದಾರೆ.
ಏತನ್ಮಧ್ಯೆ, ಮಾಜಿ ಸಹ ಆಟಗಾರ ಸುರೇಶ್ ರೈನಾ ಕೂಟ ಟ್ವಿಟ್ ಮಾಡಿ, “ನನ್ನ ಅಣ್ಣ ಎಂಎಸ್ ಧೋನಿಗೆ ಜನ್ಮದಿನದ ಶುಭಾಶಯಗಳು! ಪಿಚ್ ಹಂಚಿಕೊಳ್ಳುವುದರಿಂದ ಹಿಡಿದು ನಮ್ಮ ಕನಸುಗಳನ್ನು ಹಂಚಿಕೊಳ್ಳುವವರೆಗೆ, ನಾವು ಸೃಷ್ಟಿಸಿದ ಬಂಧವು ಅವಿನಾಭಾವವಾಗಿದೆ. ನಾಯಕನಾಗಿ ಮತ್ತು ಸ್ನೇಹಿತನಾಗಿ ನಿಮ್ಮ ಶಕ್ತಿ, ನನ್ನ ಮಾರ್ಗದರ್ಶಕ ಬೆಳಕಾಗಿದ್ದೇನೆ. ಮುಂಬರುವ ವರ್ಷವು ನಿಮಗೆ ಸಂತೋಷ, ಯಶಸ್ಸು ಮತ್ತು ಉತ್ತಮ ಆರೋಗ್ಯವನ್ನು ತರಲಿ” ಎಂದು ಹಾರೈಸಿದ್ದಾರೆ.
English summary
Ravindra Jadeja’s birthday message to MS Dhoni hints at his potential IPL comeback, expressing anticipation of seeing him in the yellow jersey again.
Story first published: Friday, July 7, 2023, 11:56 [IST]