ಆಗ ನೀರಜ್ ಚೋಪ್ರಾ, ಅರ್ಷದ್ ನದೀಮ್ ತಮ್ಮ ಪಕ್ಕಕ್ಕೆ ಕರೆದರು. ಭಾರತದ ತ್ರಿವರ್ಣ ಧ್ವಜದ ಜೊತೆಗೆಯೇ ಇಬ್ಬರು ಕ್ಯಾಮೆರಾಗೆ ಪೋಸ್ ನೀಡಿದರು. ವಿಶೇಷ ಅಂದರೆ, ಬದ್ಧವೈರಿ ದೇಶದ ಆಟಗಾರನಾದರೂ, ಚೋಪ್ರಾ ಕರೆದ ತಕ್ಷಣವೇ ಆಗಮಿಸಿದ ನದೀಮ್, ತಿರಂಗಾ ಬಳಿ ನಿಂತು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದು ವಿಶೇಷವಾಗಿತ್ತು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಫೈನಲ್ಗೂ ಮುನ್ನ ತುಂಬಾ ಅದ್ಭುತ ಸ್ನೇಹಿತರೂ ಆಗಿರುವ ಅವರೀಗ 2024ರ ಪ್ಯಾರಿಸ್ ಒಲಿಂಪಿಕ್ಸ್ ಮೇಲೆ ಕಣ್ಣಿಟ್ಟಿದ್ದಾರೆ. ಅವರನ್ನು ಕರೆದ ನೀರಜ್ ಚೋಪ್ರಾಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.