ದೇಶದ ಜನರಿಗೇನು ತಲೆಕೆಟ್ಟಿದೆ ಎಂದುಕೊಂಡಿದ್ದೀರಾ? ಬಿಜೆಪಿ ನಾಯಕರು ಪ್ರಮೋಟ್‌ ಮಾಡಿದ್ದ ‘ಆದಿಪುರುಷ್‌’ ತಂಡವನ್ನು ಜಾಡಿಸಿದ ಕೋರ್ಟ | Adipurush dialogue controversy: Allahabad High Court slams Film Makers

India

oi-Ravindra Gangal

|

Google Oneindia Kannada News

ಲಖನೌ, ಜೂನ್‌ 27: ‘ಆದಿಪುರುಷ’ ಚಿತ್ರದ ಸಂಭಾಷಣೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿರುವ ಅಲಹಾಬಾದ್ ಹೈಕೋರ್ಟ್ ಇಂದು ಚಿತ್ರ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿದೆ.

ಈ ಪ್ರಕರಣದಲ್ಲಿ ಸಹ ಲೇಖಕ ಮನೋಜ್ ಮುಂತಶಿರ್ ಶುಕ್ಲಾ ಅವರನ್ನು ಕಕ್ಷಿದಾರರನ್ನಾಗಿ ಮಾಡುವಂತೆ ನ್ಯಾಯಾಲಯ ಸೂಚಿಸಿದ್ದು, ಒಂದು ವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ನೋಟಿಸ್ ಜಾರಿ ಮಾಡಿದೆ.

Adipurush dialogue controversy: Allahabad High Court slams Film Makers

ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಪೌರಾಣಿಕ ಸಾಹಸಮಯ ಚಿತ್ರ ಎಂದು ಹೇಳಿಕೊಳ್ಳುವ ‘ಆದಿಪುರುಷ’ವನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ.

‘ಚಿತ್ರದಲ್ಲಿನ ಸಂಭಾಷಣೆಗಳ ಸ್ವರೂಪವು ಒಂದು ದೊಡ್ಡ ಸಮಸ್ಯೆಯಾಗಿದೆ. ರಾಮಾಯಣವು ನಮಗೆ ಒಂದು ಮಾದರಿಯಾಗಿದೆ. ಜನರು ಮನೆಯಿಂದ ಹೊರಡುವ ಮೊದಲು ರಾಮಚರಿತಮಾನಗಳನ್ನು ಓದುತ್ತಾರೆ” ಎಂದು ಅದು ಕೋರ್ಟ್‌ ಹೇಳಿದೆ.

ಸೆನ್ಸಾರ್ ಮಂಡಳಿ ಎಂದು ಕರೆಯಲ್ಪಡುವ ಚಲನಚಿತ್ರ ಪ್ರಮಾಣೀಕರಣ ಪ್ರಾಧಿಕಾರವು ತನ್ನ ಜವಾಬ್ದಾರಿಯನ್ನು ಪೂರೈಸಿದೆಯೇ ಎಂದು ಅಲಹಾಬಾದ್ ಹೈಕೋರ್ಟ್ ಪ್ರಶ್ನಿಸಿದೆ.

Adipurush dialogue controversy: Allahabad High Court slams Film Makers

‘ಸಿನಿಮಾ ನೋಡಿದ ಜನರು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದಿರುವುದು ಒಳ್ಳೆಯದು. ಹನುಮಂತ ಮತ್ತು ಸೀತೆಯನ್ನು ಅವಹೇಳನಕಾರಿಯಾಗಿ ತೋರಿಸಲಾಗಿದೆ. ಈ ವಿಷಯಗಳನ್ನು ಮೊದಲಿನಿಂದಲೂ ತೆಗೆದುಹಾಕಬೇಕಾಗಿತ್ತು. ಅಂತಹ ಚಲನಚಿತ್ರಗಳನ್ನು ವೀಕ್ಷಿಸುವುದು ತುಂಬಾ ಕಷ್ಟ’ ಎಂದು ನ್ಯಾಯಾಲಯವು ಹೇಳಿದೆ.

ಇದು ಅತ್ಯಂತ ಗಂಭೀರ ವಿಷಯ ಎಂದು ಹೇಳಿರುವ ಅವರು, ಸೆನ್ಸಾರ್ ಮಂಡಳಿ ಈ ಬಗ್ಗೆ ಏನು ಮಾಡಿದೆ ಎಂದು ಪ್ರಶ್ನಿಸಿದೆ.

ಚಿತ್ರದಿಂದ ಆಕ್ಷೇಪಾರ್ಹ ಸಂಭಾಷಣೆಗಳನ್ನು ತೆಗೆದುಹಾಕಲಾಗಿದೆ ಎಂದು ಡೆಪ್ಯುಟಿ ಸಾಲಿಸಿಟರ್ ಜನರಲ್ ನ್ಯಾಯಾಲಯಕ್ಕೆ ತಿಳಿಸಿದ್ದು, ಸೆನ್ಸಾರ್ ಮಂಡಳಿಯು ಏನು ಮಾಡುತ್ತಿದೆ ಎಂದು ಡೆಪ್ಯೂಟಿ ಎಸ್‌ಜಿಯನ್ನು ನ್ಯಾಯಾಲಯ ಕೇಳಿದೆ.

‘ಜನರು, ದೇಶವಾಸಿಗಳು ಮತ್ತು ಯುವಕರನ್ನು ಬುದ್ಧಿಹೀನರು ಎಂದು ಚಿತ್ರ ತಯಾರಕರು ಪರಿಗಣಿಸಿದ್ದಾರೆಯೇ? ನೀವು ಭಗವಾನ್ ರಾಮ, ಲಕ್ಷ್ಮಣ, ಹನುಮಂತ ದೇವರನ್ನು ತೋರಿಸುತ್ತೀರಿ. ಅದು ರಾಮಾಯಣವಲ್ಲ ಎಂಬುದಾಗಿ ಹೇಳುತ್ತೀರಿ’ ಎಂದು ಕೋರ್ಟ್‌ ಹರಿಹಾಯ್ದಿದೆ.

ಜನರು ಥಿಯೇಟರ್‌ಗಳಿಗೆ ಹೋಗಿ ಚಿತ್ರವನ್ನು ಸ್ಥಗಿತಗೊಳಿಸುವ ಯತ್ನ ಮಾಡುತ್ತಿದ್ದಾರೆ ಎಂದು ನಾವು ಸುದ್ದಿಯಲ್ಲಿ ನೋಡಿದ್ದೇವೆ. ಆದರೆ, ಇನ್ನೂ ಯಾರೂ ಸಿನಿಮಾ ಮಂದಿರವನ್ನು ಧ್ವಂಸಗೊಳಿಸುವ ಪ್ರಯತ್ನ ಮಾಡಿಲ್ಲ. ಇದು ಒಳ್ಳೆಯದು’ ಎಂದು ಕೋರ್ಟ್‌ ಹೇಳಿದೆ.

English summary

Adipurush dialogue controversy

Story first published: Tuesday, June 27, 2023, 23:18 [IST]

Source link