Bengaluru
oi-Shankrappa Parangi
ಬೆಂಗಳೂರು, ಜುಲೈ 27: ಕೇಂದ್ರ ಸರ್ಕಾರದ ನವದೆಹಲಿ ಸುಗ್ರಿವಾಜ್ಞೆ ವಿರುದ್ಧ ತಮ್ಮ ಜೊತೆ ಹೋರಾಡುವಂತೆ ರಾಜ್ಯದ ಅಮ್ ಆದ್ಮಿ ಪಕ್ಷದ ಮುಖಂಡರು ಬುಧವಾರ ಮಾಜಿ ಪ್ರಧಾನಿ ಜೆಡಿಎಸ್‌ನ ಎಚ್‌ಡಿ ದೇವೇಗೌಡ ಅವರಿಗೆ ಮನವಿ ಮಾಡಿದರು.
ಬುಧವಾರ ಸಂಜೆ ಮಾಜಿ ಪ್ರಧಾನಮಂತ್ರಿ ಮತ್ತು ಜೆಡಿಎಸ್ ವರಿಷ್ಠ HD ದೇವೇಗೌಡ ಅವರನ್ನು ಅವರ ಮನೆಯಲ್ಲಿ ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹಾಗೂ ಇತರ ನಾಯಕರು ಸೌಹಾರ್ದಯುತವಾಗಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಇದೇ ವೇಳೆ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ, ಸಂವಿಧಾನವನ್ನು ಹಾಗೂ ದೇಶದ ಒಕ್ಕೂಟ ವ್ಯವಸ್ಥೆಯನ್ನು ಉಳಿಸಲು ದೆಹಲಿ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಬಿಜೆಪಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ. ಈ ಸುಗ್ರಿವಾಜ್ಞೆಗೆ ರಾಜ್ಯ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಬೇಕೆಂದು ಮುಖ್ಯಮಂತ್ರಿ ಚಂದ್ರು ಮನವಿ ಅವರು ಎಚ್‌ಡಿ ದೇವೇಗೌಡರಲ್ಲಿ ಮನವಿ ಮಾಡಿದರು.
ಕೇಂದ್ರ ಸರ್ಕಾರವು ದುರುದ್ದೇಶದಿಂದ ದೇಹಲಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು, ದ್ವೇಷ ರಾಜಕಾರಣ ಮಾಡಲು ಹೀಗೆ ಸುಗ್ರೀವಾಜ್ಞೆ ಹೊರಡಿಸಿದೆ ಎಂದು ಕರ್ನಾಟಕ ಹಾಗೂ ದೆಹಲಿ ನಾಯಕರು ಕಿಡಿ ಕಾರುತ್ತಲೇ ಬಂದಿದ್ದಾರೆ.
ಸುಗ್ರೀವಾಜ್ಞೆ ವಿರೋಧಿಸುವಂತೆ ವಿಪಕ್ಷಗಳ ಸಂಘಟನೆ
ಈ ಸುಗ್ರೀವಾಜ್ಞೆ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಕೇಂದ್ರ ವಿರೋಧಪಕ್ಷಗಳ ನಾಯಕರನ್ನು ಸಂಘಟಿಸಿದರು. ತಾವೆಲ್ಲರು ಮುಂಗಾರು ಅಧಿವೇಶನದಲ್ಲಿ (Monsoon Session 2023) ಈ ಸುಗ್ರೀವಾಜ್ಞೆಗೆ ವಿರೋಧ ವ್ಯಕ್ತಪಡಿಸುವಂತೆ ಮನವಿ ಮಾಡಿದ್ದರು. ವಿಪಕ್ಷಗಳ ನಾಯಕರಾದ ಅಖಿಲೇಶ್ ಯಾದವ್, ನಿತಿಶ್ ಕುಮಾರ್, ಮಾಯಾವತಿ, ಸೇರಿದಂತೆ ಅನೇಕರ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿದ್ದರು.
ಇದರಿಂದ ಆಮ್ ಆದ್ಮಿ ಪಕ್ಷದ ದೆಹಲಿ ಸಿಎಂ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಸಹ ತಂತ್ರ ಹೆಣೆದಿದ್ದರು. ಆದರೆ ಅವರ ಈ ಸುಗ್ರೀವಾಜ್ಞೆಯ ಮನವಿಗೆ ಆರಂಭದಲ್ಲಿ ಕಾಂಗ್ರೆಸ್ ಬೆಂಬಲ ನೀಡುವಲ್ಲಿ ಮೌನ ವಹಿಸಿತ್ತು. ಹೀಗಾಗಿ ವಿಪಕ್ಷಗಳ ಒಂದು ಸಭೆಗೆ ಎಎಪಿ ಗೈರಾಗಿತ್ತು. ತದನಂತರ ಬೆಂಗಳೂರಿನಲ್ಲಿ ವಿಪಕ್ಷಗಳ ಸಭೆ ನಡೆಯುವ ಹೊತ್ತಿಗೆ ಕಾಂಗ್ರೆಸ್ ಮೌನ ಮುರಿಯಿತು. ಈ ಮೂಲಕವು ಕೇಂದ್ರ ವಿಪಕ್ಷಗಳು ಬಿಜೆಪಿ ವಿರುದ್ಧ ಸೆಟೆದು ನಿಂತಿವೆ.
ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರ ನಿವಾಸದ ಭೇಟಿ ಸಂದರ್ಭದಲ್ಲಿ ಪಕ್ಷದ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಪೃಥ್ವಿ ರೆಡ್ಡಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಟಿ. ನಾಗಣ್ಣ, ಸಂವಹನ ಉಸ್ತುವಾರಿ ಬ್ರಿಜೇಶ್ ಕಾಳಪ್ಪ, ಜಗದೀಶ್ ವಿ ಸದಂ, ದರ್ಶನ್ ಜೈನ್, ಬಸವರಾಜ್ ಸೇರಿದಂತೆ ಪಕ್ಷದ ಅನೇಕ ಮುಖಂಡರು ಉಪಸ್ಥಿತರಿದ್ದರು.
English summary
Request from karnataka AAP leaders to former PM JDS HD Deve Gowda to fight against New Delhi ordinance.
Story first published: Thursday, July 27, 2023, 7:08 [IST]