ದೆಹಲಿ ಮಳೆ: ಮಳೆಯ ನಡುವೆ ರೈಲು ನಿಲ್ದಾಣದಲ್ಲಿ ವಿದ್ಯುದಾಘಾತದಿಂದ ಮಹಿಳೆ ಸಾವು | Woman Dies at New Delhi Railway Station After Getting Electrocuted Amid Rain

India

oi-Mamatha M

|

Google Oneindia Kannada News

ನವದೆಹಲಿ, ಜೂನ್. 25: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರ ರಾತ್ರಿಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನೀರಿನ ಸೆಳೆತದ ನಡುವೆ ವಿದ್ಯುತ್ ಸ್ಪರ್ಶಗೊಂಡು ಮಹಿಳೆಯೊಬ್ಬರು ಭಾನುವಾರ ನವದೆಹಲಿ ರೈಲು ನಿಲ್ದಾಣದಲ್ಲಿ ಸಾವನ್ನಪ್ಪಿದ್ದಾರೆ. ಪೂರ್ವ ದೆಹಲಿಯ ಪ್ರೀತ್ ವಿಹಾರ್ ನಿವಾಸಿ ಸಾಕ್ಷಿ ಅಹುಜಾ ಮೃತ ಮಹಿಳೆ.

ಸಾಕ್ಷಿ ಅಹುಜಾ ಅವರು ಇಬ್ಬರು ಮಹಿಳೆಯರು ಮತ್ತು ಮೂವರು ಮಕ್ಕಳೊಂದಿಗೆ ಬೆಳಗ್ಗೆ 5:30 ರ ಸುಮಾರಿಗೆ ದೆಹಲಿ ರೈಲು ನಿಲ್ದಾಣಕ್ಕೆ ಬಂದಿದ್ದರು. ಕೊಚ್ಚೆಗುಂಡಿಗಳನ್ನು ತಪ್ಪಿಸಲು ಹೋಗಿ ಆಕೆ ವಿದ್ಯುತ್ ಕಂಬವನ್ನು ಹಿಡಿದಿಟ್ಟುಕೊಂಡಿದ್ದಾರೆ. ಈ ವೇಳೆ ಭಾರೀ ಪ್ರಮಾಣದ ವಿದ್ಯುತ್ ಆಕೆಗೆ ತಗುಲಿದೆ. ಸ್ಥಳದಲ್ಲಿದ್ದವರು ಆಕೆಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದು ಜೀವ ಉಳಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Woman Dies at New Delhi Railway Station After Getting Electrocuted Amid Rain

ನವದೆಹಲಿ ರೈಲು ನಿಲ್ದಾಣದ ನಿರ್ಗಮನ ಸಂಖ್ಯೆ ಒಂದರ ಬಳಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸ್ಥಳಕ್ಕೆ ತಲುಪಿದಾಗ ಮಹಿಳೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವುದನ್ನು ಕಂಡುಬಂದಿದ್ದಾರೆ. “ತಕ್ಷಣ, ಅವರು ಗಾಯಗೊಂಡ ಸಾಕ್ಷಿ ಅಹುಜಾ ಅವರ ಸಹೋದರಿ ಮಾಧ್ವಿ ಚೋಪ್ರಾ ಅವರೊಂದಿಗೆ ಅವರನ್ನು ಎಲ್‌ಹೆಚ್‌ಎಂಸಿ (ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜು) ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು” ಎಂದು ಪೊಲೀಸರು ತಿಳಿಸಿದ್ದಾರೆ.

India Monsoon: 62 ವರ್ಷಗಳ ನಂತರ ಒಂದೇ ದಿನ ಈ 2 ನಗರಗಳಲ್ಲಿ ಮುಂಗಾರು ಸಕ್ರಿಯIndia Monsoon: 62 ವರ್ಷಗಳ ನಂತರ ಒಂದೇ ದಿನ ಈ 2 ನಗರಗಳಲ್ಲಿ ಮುಂಗಾರು ಸಕ್ರಿಯ

ಸಂತ್ರಸ್ತೆಯ ಸಹೋದರಿ, ಮಾಧ್ವಿ ಚೋಪ್ರಾ, ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯವನ್ನು ಆರೋಪಿಸಿ ದೂರು ದಾಖಲಿಸಿದ್ದಾರೆ. ಅದರ ಆಧಾರದ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಕ್ಷಿ ಅಹುಜಾ ಅವರ ತಂದೆ ಲೋಕೇಶ್ ಕುಮಾರ್ ಚೋಪ್ರಾ ಕೂಡ ಸಂಬಂಧಪಟ್ಟ ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ದೂಷಿಸಿದ್ದಾರೆ.

“ನಾವು ಚಂಡೀಗಢಕ್ಕೆ ಹೋಗುತ್ತಿದ್ದೆವು. ನನ್ನ ಮಗಳು ಸಾಕ್ಷಿ ಅಹುಜಾ ವಿದ್ಯುದಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಪಡೆದಾಗ ನಾನು ಪಾರ್ಕಿಂಗ್ ಪ್ರದೇಶದಲ್ಲಿದ್ದೆ. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇದು ಸಂಭವಿಸಿದೆ” ಎಂದು ಅವರು ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ. ದೃಶ್ಯಗಳಲ್ಲಿ ಕಂಬದ ಕೆಳಭಾಗದಲ್ಲಿ ವಿದ್ಯುತ್ ತಂತಿಗಳನ್ನು ಬಿದ್ದಿರುವುದು ಕಾಣಿಸಿದ್ದು, ಇದು ಅಪಘಾತಕ್ಕೆ ಕಾರಣವೆಂದು ಶಂಕಿಸಲಾಗಿದೆ.

ಘಟನೆಯ ಕುರಿತು ರೈಲ್ವೆ ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಾಗಿದ್ದು, ನಿರ್ಲಕ್ಷ್ಯಕ್ಕೆ ಯಾರು ಹೊಣೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದೆಹಲಿಯಲ್ಲಿ 5 ಸೆಂ.ಮೀ ಗರಿಷ್ಠ ಮಳೆ ದಾಖಲಾಗಿದ್ದು, ಮುಂದಿನ ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಡಾ.ಮೃತ್ಯುಂಜಯ್ ಮೊಹಾಪಾತ್ರ ತಿಳಿಸಿದ್ದಾರೆ.

English summary

Delhi Rains: Woman dies at new delhi railway station after getting electrocuted amid rain. know more.

Story first published: Sunday, June 25, 2023, 16:02 [IST]

Source link