“ದಿ ಕೇರಳ ಸ್ಟೋರಿ’ ಸಕ್ಸಸ್ ತಡೆಯೋಕೆ ಯಾರಿಂದಲೂ ಸಾಧ್ಯವಾಗಲಿಲ್ಲ”: ಪರೋಕ್ಷವಾಗಿ ಕಮಲ್‌ಗೆ ಕುಟುಕಿದ ಅದಾ | Adah Sharma Opens up on Kamal Haasan, Naseeruddin’s comments about Kerala Story

bredcrumb

Bollywood

oi-Narayana M

|


ವರ್ಷದ
ಸೂಪರ್
ಹಿಟ್
ಸಿನಿಮಾಗಳಲ್ಲಿ
‘ದಿ
ಕೇರಳ
ಸ್ಟೋರಿ’
ಸಿನಿಮಾ
ಕೂಡ
ಇದೆ.
ಭಾರೀ
ವಿರೋಧದ
ನಡುವೆಯೂ

ಸಿನಿಮಾ
ಬಾಕ್ಸಾಫೀಸ್
ಶೇಕ್
ಮಾಡಿತ್ತು.
ಅದಾ
ಶರ್ಮಾ
ಬಿಟ್ಟರೆ
ಚಿತ್ರದಲ್ಲಿ
ಸ್ಟಾರ್
ನಟರು
ಯಾರು
ಇರಲಿಲ್ಲ.
ಕಮಲ್
ಹಾಸನ್,
ನಸೀರುದ್ದೀನ್
ಶಾ
ಸೇರಿದಂತೆ
ಹಲವರು

ಸಿನಿಮಾ
ಬಗ್ಗೆ
ವಿರೋಧ
ವ್ಯಕ್ತಪಡಿಸಿದ್ದರು.

‘ದಿ
ಕೇರಳ
ಸ್ಟೋರಿ’
ಚಿತ್ರವನ್ನು
ಪಶ್ಚಿಮ
ಬಂಗಾಳ
ಸರ್ಕಾರ
ನಿಷೇಧಿಸಿತ್ತು.
ತಮಿಳುನಾಡಿನಲ್ಲಿ
ಪ್ರದರ್ಶಕರು
ಸಿನಿಮಾ
ಪ್ರದರ್ಶನಕ್ಕೆ
ಹಿಂದೇಟು
ಹಾಕಿದ್ದರು.
ಆದರೆ
ಹರ್ಯಾಣ,
ಮಧ್ಯಪ್ರದೇಶ
ಹಾಗೂ
ಉತ್ತರ
ಪ್ರದೇಶ
ಸರ್ಕಾರಗಳು
ತೆರಿಗೆ
ವಿನಾಯಿತಿ
ಘೋಷಿಸಿದ್ದವು.
ನೈಜ
ಘಟನೆ
ಆಧರಿತ
ಸಿನಿಮಾ
ಎಂದು
ಹೇಳಲಾದ
‘ದಿ
ಕೇರಳ
ಸ್ಟೋರಿ’
ಬಗ್ಗೆ
ಭಾರೀ
ಚರ್ಚೆ
ಆಗಿತ್ತು.
ಸದ್ಯ
ಇನ್ನು
ಸಿನಿಮಾ
ಓಟಿಟಿಗೂ
ಬಂದಿಲ್ಲ.
ಸಿನಿಮಾ
ಓಟಿಟಿ
ಪ್ರಸಾರಕ್ಕೆ
ಯಾವುದೇ
ಡಿಜಿಟಲ್
ಸಂಸ್ಥೆ
ಮುಂದೆ
ಬರ್ತಿಲ್ಲ
ಎನ್ನಲಾಗ್ತಿದೆ.

ಕೇರಳದಲ್ಲಿ
ಬಲವಂತವಾಗಿ
ಯುವತಿಯರನ್ನು
ಮುಸ್ಲಿಂ
ಧರ್ಮಕ್ಕೆ
ಮತಾಂತರ
ಮಾಡಿ
ಅವರನ್ನು
ಭಯೋತ್ಪಾದನೆ
ಚಟುವಟಿಗಳಿಗೆ
ದೂಡುತ್ತಿದ್ದಾರೆ
ಎನ್ನಲಾಗುವ
ವಿಚಾರದ
ಬಗ್ಗೆ
‘ದಿ
ಕೇರಳ
ಸ್ಟೋರಿ’
ಚಿತ್ರದಲ್ಲಿ
ಚರ್ಚಿಸಲಾಗಿದೆ.
ಸುದಿಪ್ತೋ
ಸೇನ್

ಚಿತ್ರಕ್ಕೆ
ಆಕ್ಷನ್
ಕಟ್
ಹೇಳಿದ್ದಾರೆ.

ಸಿನಿಮಾದಿಂದ
ಅದಾ
ಶರ್ಮ
ಭರ್ಜರಿ
ಕಂಬ್ಯಾಕ್
ಮಾಡಿದ್ದಾರೆ.
ಇದೀಗ
ಸಿನಿಮಾ
ಗೆಲುವಿನ
ಬಗ್ಗೆ
ಜಾಗರಣ್​ಗೆ
ನೀಡಿದ
ಸಂದರ್ಶನದಲ್ಲಿ
ಮಾತನಾಡಿದ್ದಾರೆ.

Adah Sharma Opens up on Kamal Haasan, Naseeruddins comments about Kerala Story

ಅದಾ
ಶರ್ಮಾ
ಮಾತನಾಡಿ”ನಮ್ಮ
ಭಾರತ
ದೇಶದಲ್ಲಿ
ವಾಕ್
ಸ್ವಾತಂತ್ರ್ಯ
ಇದೆ.
ಸಿನಿಮಾ
ನೋಡದೆ
ಕೂಡ
ಅದರ
ಬಗ್ಗೆ

ದೇಶದಲ್ಲಿ
ಅಪಪ್ರಚಾರ
ಮಾಡಬಹುದು.
ಅದೇ
ರೀತಿ
ಜನರು
ಸಿನಿಮಾ
ನೋಡದಂತೆ
ತಡೆಯಬಹುದು.
ಯಾರು
ಯಾರ
ಕುರಿತು
ಏನು
ಬೇಕಾದರೂ
ಹೇಳಿಕೆ
ನೀಡಬಹುದು.

ರೀತಿ
ಹೇಳಿಕೆ
ನೀಡಿದ
ಬಳಿಕ
ಕೂಡ
ಅವರು
ಇಲ್ಲಿ
ನಿಶ್ಚಿಂತೆಯಿಂದ
ಬದುಕಬಹುದು.
ಇದೇ
ಭಾರತದ
ಸೌಂದರ್ಯ.
ನಾನು
ನನ್ನ
ದೇಶವನ್ನು
ಪ್ರೀತಿಸುತ್ತೇನೆ.
ವಿಭಿನ್ನ
ಸಿದ್ಧಾಂತಗಳನ್ನು
ಹೊಂದಿರುವ
ಜನರು
ಇಲ್ಲಿ
ಸಹಬಾಳ್ವೆ
ಮಾಡಬಹುದು.”

“ಅಂತಹ
ಪ್ರಸಿದ್ಧ
ನಟರು
ನಮ್ಮ
ಚಿತ್ರದ
ಬಗ್ಗೆ
ತಮ್ಮ
ನಿಲುವನ್ನು
ಸ್ಪಷ್ಟಪಡಿಸಿದ
ನಂತರವೂ,
ಪ್ರೇಕ್ಷಕರು
ಭಯೋತ್ಪಾದನೆಯ
ವಿರುದ್ಧ
ನಿಂತಿರುವ
ಚಲನಚಿತ್ರವನ್ನು
ಬೆಂಬಲಿಸಲು
ಚಿತ್ರಮಂದಿರಗಳಿಗೆ
ಹೋಗಲು
ನಿರ್ಧರಿಸಿದ್ದು
ಅದ್ಭುತ”
ಎಂದು
ಅದಾ
ಶರ್ಮಾ
ಹೇಳಿದ್ದಾರೆ.

ಹಿಂದೆ
ಎರಡು
ಬಾರಿ
ನಟ
ಕಮಲ್
ಹಾಸನ್
‘ದಿ
ಕೇರಳ
ಸ್ಟೋರಿ’
ಚಿತ್ರದ
ಬಗ್ಗೆ
ಮಾತನಾಡಿದ್ದರು.

Adah Sharma Opens up on Kamal Haasan, Naseeruddins comments about Kerala Story


ಹಿಂದೆ
ಕಮಲ್
ಹಾಸನ್
ಮಾತನಾಡಿ
“ದಿ
ಕೇರಳ
ಸ್ಟೋರಿ’
ಪ್ರೊಪೊಗಾಂಡ
ಸಿನಿಮಾ.
ನಾನು
ಅದರ
ವಿರುದ್ಧವಾಗಿದ್ದೇನೆ.
ಸಿನಿಮಾ
ಟೈಟಲ್
ಕೆಳಗೆ
ಸತ್ಯ
ಘಟನೆ
ಅಂತ
ಬರೆದರೆ
ಸಾಕಾಗುವುದಿಲ್ಲ.
ಅದು
ನಿಜಕ್ಕೂ
ಸತ್ಯ
ಘಟನೆಯೇ
ಆಗಿರಬೇಕು.
ಆದರೆ

ಚಿತ್ರದಲ್ಲಿನ
ವಿಷಯ
ನಿಜವಲ್ಲ”
ಎಂದು
ಹೇಳಿದ್ದರು.

ಬಳಿಕ
ಮತ್ತೊಮ್ಮೆ
ಒಂದು
ವೇಳೆ
ನಿಮಗೆ
ಇಂತಹ
ಸಿನಿಮಾ
ಬ್ಯಾನ್
ಮಾಡುವ
ಅವಕಾಶ
ಕೊಟ್ಟರೆ
ಬ್ಯಾನ್
ಮಾಡ್ತೀರಾ?
ಎನ್ನುವ
ಪ್ರಶ್ನೆಗೆ
“ನಾನು
ಯಾವುದೇ
ಸಿನಿಮಾ
ನಿಷೇಧಕ್ಕೆ
ಒಪ್ಪಲ್ಲ.
ಆದರೆ
ಸಿನಿಮಾ
ಹಾಗೂ

ಸಿನಿಮಾ
ಉದ್ದೇಶ
ಏನು
ಎನ್ನುವುದನ್ನು
ಜನರಿಗೆ
ಅರ್ಥಮಾಡಿಸಲು
ನಾನು
ಪ್ರಯತ್ನಿಸುತ್ತೇನೆ”
ಎಂದು
ಕಮಲ್
ಹಾಸನ್
ಅಭಿಪ್ರಾಯ
ವ್ಯಕ್ತಪಡಿಸಿದ್ದರು.

English summary

Adah Sharma Opens up on Kamal Haasan, Naseeruddin’s comments about Kerala Story. She says Famous Actors Could Not Stop to audience go to watch movie. know more.

Friday, July 14, 2023, 10:14

Story first published: Friday, July 14, 2023, 10:14 [IST]

Source link