ಇಗಾ ಸ್ವಿಯಾಟೆಕ್ ಅವರಿಗಿದು ಫ್ರೆಂಚ್ ಓಪನ್ನಲ್ಲಿ ಹ್ಯಾಟ್ರಿಕ್ ಪ್ರಶಸ್ತಿ ಮತ್ತು ವೃತ್ತಿ ಜೀವನದ 5ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಇದಾಗಿದೆ. ಫ್ರೆಂಚ್ ಓಪನ್ನಲ್ಲಿ 4 ಮತ್ತು ಯುಎಸ್ ಓಪನ್ನಲ್ಲೂ ಒಂದು ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಸ್ವಿಯಾಟೆಕ್ ಅವರ ಸ್ಫೋಟಕ ಆಟದೆದರು ಪಾವೊಲಿನಿ ಆಟ ಸಂಪೂರ್ಣ ಮಂಕಾಯಿತು. ಯಾವುದೇ ಕ್ಷಣದಲ್ಲೂ ಪೈಪೋಟಿ ನೀಡದ ಕಾರಣ ಪಾವೊಲಿನಿ 6-2, 6-1 ನೇರ ಸೆಟ್ಗಳಿಂದ ಹೀನಾಯ ಸೋಲು ಅನುಭವಿಸಿದರು. 68 ನಿಮಿಷದಲ್ಲಿ ಈ ಪಂದ್ಯ ಅಂತ್ಯಗೊಂಡಿತು.