“ದಳಪತಿ ವಿಜಯ್ ನನ್ನನ್ನು ಬೆದರಿಸುತ್ತಿದ್ದಾನೆ.. ಕೂಡಲೇ ಆತನನ್ನು ಬಂಧಿಸಿ”: ರಾಜೇಶ್ವರಿ ಪ್ರಿಯಾ | Rajeshwari Priya Filed a complaint against Leo Actor Vijay

bredcrumb

Tamil

oi-Narayana M

|

ಲೋಕೇಶ್
ಕನಕರಾಜ್
ನಿರ್ದೇಶನದ
ತಮಿಳಿನ
‘ಲಿಯೋ’
ಸಿನಿಮಾ
ಭಾರೀ
ನಿರೀಕ್ಷೆ
ಹುಟ್ಟಾಕ್ಕಿದೆ.
ಇತ್ತೀಚೆಗೆ
ದಳಪತಿ
ವಿಜಯ್
ಹುಟ್ಟುಹಬ್ಬದ
ಸಂಭ್ರಮದಲ್ಲಿ
‘ನಾ
ರೆಡಿ’
ಎನ್ನುವ
ಸಿನಿಮಾ
ಹಾಡು
ರಿಲೀಸ್
ಆಗಿ
ಸದ್ದು
ಮಾಡಿತ್ತು.
ನಂತರ
ಹಾಡು
ವಿವಾದ
ಸೃಷ್ಟಿಸಿ
ಒಂದಷ್ಟು
ಸಾರ್ವಜನಿಕ
ಹಿತಾಸಕ್ತಿ
ಅರ್ಜಿಗಳು
ದಾಖಲಾಗಿದ್ದವು.
ಇದು
ಕಾಲಿವುಡ್‌
ಅಂಗಳದಲ್ಲಿ
ಭಾರೀ
ಚರ್ಚೆ
ಹುಟ್ಟಾಕ್ಕಿತ್ತು.

ಸಾಮಾಜಿಕ
ಕಾರ್ಯಕರ್ತ
ಸೆಲ್ವಂ
ಎಂಬುವವರು
‘ನಾ
ರೆಡಿ’
ಹಾಡಿನಲ್ಲಿ
ಡ್ರಗ್ಸ್
ವೈಭವೀಕರಣ
ಹಾಗೂ
ರೌಡಿಸಂ
ಅನ್ನು
ಹೊಗಳಲಾಗಿದೆ,
ಹಾಗಾಗಿ
ಚಿತ್ರತಂಡದ
ವಿರುದ್ಧ
ಮಾದಕ
ದ್ರವ್ಯ
ನಿಯಂತ್ರಣ
ಕಾಯಿದೆ’
ಅಡಿಯಲ್ಲಿ
ಕ್ರಮ
ತೆಗೆದುಕೊಳ್ಳಬೇಕೆಂದು
ದೂರು
ದಾಖಲಿಸಿದ್ದರು.

ಹಾಡಿನ
ಬಗ್ಗೆ
‘ಆಲ್‌
ಪೀಪಲ್ಸ್
ಪೊಲಿಟಿಕಲ್
ಪಾರ್ಟಿ’
ನಾಯಕಿ
ರಾಜೇಶ್ವರಿ
ಪ್ರಿಯಾ
ಕೂಡ
ಆಕ್ರೋಶ
ವ್ಯಕ್ತಪಡಿಸಿದ್ದರು.
ಇಂತಹ
ಹಾಡಿನ
ಮೂಲಕ
ಸಮಾಜಕ್ಕೆ
ಕೆಟ್ಟ
ಸಂದೇಶ
ರವಾನೆಯಾಗುತ್ತದೆ.

ಸಂಬಂಧ
ಕ್ರಮ
ಕೈಗೊಳ್ಳಬೇಕು
ಎಂದು
ಮನವಿ
ಮಾಡಿದ್ದರು.

Rajeshwari Priya Filed a complaint against Leo Actor Vijay

ಸುದ್ದಿಗೋಷ್ಠಿಗಳನ್ನು
ನಡೆಸಿ
ರಾಜೇಶ್ವರಿ
ಪ್ರಿಯಾ
ನಟ
ವಿಜಯ್
ವಿರುದ್ಧ
ಸಾಕಷ್ಟು
ಆರೋಪಗಳನ್ನು
ಮಾಡಿದ್ದರು.
ಇದೇ
ವಿಚಾರಕ್ಕೆ
ಸಂಬಂಧಿಸಿ
ವಿಜಯ್
ತನ್ನ
ಅಭಿಮಾನಿಗಳನ್ನು
ರೊಚ್ಚಿಗೆಬ್ಬಿಸಿ
ತಮ್ಮನ್ನು
ಬೆದರಿಸುತ್ತಿದ್ದಾರೆ
ಎಂದು
ಪ್ರಿಯಾ
ಇದೀಗ
ಆರೋಪಿಸಿದ್ದಾರೆ.
ಸೋಶಿಯಲ್
ಮೀಡಿಯಾದಲ್ಲಿ
ತಮ್ಮನ್ನು
ಬೇಕಂತಲೇ
ಕೆಟ್ಟ
ಕೆಟ್ಟ
ಪದಗಳಿಂದ
ಬೈದು
ಟ್ರೋಲ್
ಮಾಡಲಾಗ್ತಿದೆ
ಎಂದು
ಆಕ್ರೋಶ
ವ್ಯಕ್ತಪಡಿಸಿದ್ದಾರೆ.

ಡ್ರಗ್ಸ್ ಪ್ರಚೋದನೆ ದೂರಿಗೆ ತಲೆಬಾಗಿದ ದಳಪತಿ ವಿಜಯ್; ಲಿಯೊ ಹಾಡಿನಲ್ಲಿ ಪ್ರಮುಖ ಬದಲಾವಣೆ!ಡ್ರಗ್ಸ್
ಪ್ರಚೋದನೆ
ದೂರಿಗೆ
ತಲೆಬಾಗಿದ
ದಳಪತಿ
ವಿಜಯ್;
ಲಿಯೊ
ಹಾಡಿನಲ್ಲಿ
ಪ್ರಮುಖ
ಬದಲಾವಣೆ!

ವಿಜಯ್
ಬಂಧಿಸುವಂತೆ
ಆಗ್ರಹ

ಚೆನ್ನೈ
ಡಿಜಿಪಿ
ಕಛೇರಿಯಲ್ಲಿ
ನಟ
ದಳಪತಿ
ವಿಜಯ್
ವಿರುದ್ಧ
ದೂರು
ದಾಖಲಿಸಿದ
ಬಳಿಕ
ರಾಜೇಶ್ವರಿ
ಪ್ರಿಯಾ
ಮಾಧ್ಯಮಗಳ
ಎದುರು
ಮಾತನಾಡಿದ್ದಾರೆ.
“ವಿಜಯ್
ಸಿನಿಮಾ
ಹಾಡಿನಲ್ಲಿ
ಬಂದ
ಸ್ಮೋಕಿಂಗ್
ವಿಡಿಯೋ
ಬಗ್ಗೆ
ಪ್ರಶ್ನಿಸಿದ್ದಕ್ಕೆ
ಈಗ
ಡಿಸ್‌ಕ್ಲಮೇರ್(ಧೂಮಪಾನ
ಮತ್ತು
ಮದ್ಯಪಾನ
ಆರೋಗ್ಯಕ್ಕೆ
ಹಾನಿಕರ)
ಹಾಕಿದ್ದಾರೆ.
ನಾನು
ಮಾಡಿದ

ಹೋರಾಟಕ್ಕೆ
ವಿಜಯ್
ಅಭಿಮಾನಿಗಳು
ಸೋಶಿಯಲ್
ಮೀಡಿಯಾದಲ್ಲಿ
ಅಸಭ್ಯವಾಗಿ
ಮಾತನಾಡುತ್ತಾ
ನಿರಂತರವಾಗಿ
ಬೆದರಿಸುತ್ತಿದ್ದಾರೆ”
ಎಂದು
ಆಕೆ
ಹೇಳಿದ್ದಾರೆ.

Rajeshwari Priya Filed a complaint against Leo Actor Vijay

ವಿಜಯ್
ಐಡಿ
ಟ್ಯಾಗ್
ಮಾಡಿ
ಟ್ವೀಟ್

ಇನ್ನು
ಟ್ವಿಟ್ಟರ್‌ನಲ್ಲಿ
“ನಟ
ವಿಜಯ್
ಟ್ವಿಟ್ಟರ್
ಐಡಿಯನ್ನು
ಟ್ಯಾಗ್
ಮಾಡಿ
ಸಾಕಷ್ಟು
ಅಸಭ್ಯಕರ
ಟ್ವೀಟ್‌ಗಳನ್ನು
ಮಾಡುತ್ತಿದ್ದಾರೆ.
ಹಣ
ಕೊಟ್ಟು
ಕೆಟ್ಟ
ಕೆಟ್ಟ
ಕಾಮೆಂಟ್
ಮಾಡಿಸಲಾಗುತ್ತಿದೆ.
ಇದನ್ನು
ನೋಡಿಯು
ಸುಮ್ಮನಿದ್ದು
ವಿಜಯ್
ಕೂಡ
ಬೆದರಿಸುತ್ತಿದ್ದಾರೆ.
ಬೇರೆ
ಯಾರಾದರೂ
ಆಗಿದ್ದರೆ
ಈಗಾಗಲೇ
ತಮ್ಮ
ಅಭಿಮಾನಿಗಳಿಗೆ
ಸುಮ್ಮನಿರುವಂತೆ
ಹೇಳುತ್ತಿದ್ದರು.
ವಿಜಯ್

ರೀತಿ
ಮಾಡುತ್ತಿಲ್ಲ.
ಅದಕ್ಕೆ
ಆತನ
ಅಭಿಮಾನಿಗಳು
ಫೇಕ್
ಅಕೌಂಟ್
ಕ್ರಿಯೇಟ್
ಮಾಡಿ

ರೀತಿ
ಟ್ರೋಲ್
ಮಾಡುತ್ತಿದ್ದಾರೆ”
ಎಂದು
ಪ್ರಿಯಾ
ಆರೋಪಿಸಿದ್ದಾರೆ.

ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಡೈಮಂಡ್ ನೆಕ್ಲೆಸ್:'ಅಸುರನ್' ಡೈಲಾಗ್ ಹೇಳಿ ಪೊಲಿಟಿಕಲ್ ಎಂಟ್ರಿ ಸುಳಿವು ಕೊಟ್ರಾ ದಳಪತಿ??ಪ್ರತಿಭಾನ್ವಿತ
ವಿದ್ಯಾರ್ಥಿನಿಗೆ
ಡೈಮಂಡ್
ನೆಕ್ಲೆಸ್:’ಅಸುರನ್’
ಡೈಲಾಗ್
ಹೇಳಿ
ಪೊಲಿಟಿಕಲ್
ಎಂಟ್ರಿ
ಸುಳಿವು
ಕೊಟ್ರಾ
ದಳಪತಿ??

ವಿಜಯ್‌ನ
ಬಂಧಿಸಬೇಕು

ಒಬ್ಬ
ಮಹಿಳೆ
ಬಗ್ಗೆ
ಅಸಭ್ಯವಾಗಿ
ಮಾತನಾಡುವಂತೆ
ತಮ್ಮ
ಅಭಿಮಾನಿಗಳನ್ನು
ಪ್ರೇರಿಪಿಸಿದ
ನಟ
ವಿಜಯ್‌ನ
ಬಂಧಿಸಬೇಕು
ಪ್ರಿಯಾ
ಆಗ್ರಹಿಸಿದ್ದಾರೆ.
ಸಿನಿಮಾ
ನಟರಿಂದ
ಯುವ
ಜನತೆ
ಹಾಳಾಗುತ್ತಿದ್ದಾರೆ.
ಸಿನಿಮಾ
ಸ್ಟಾರ್‌ಗಳು
ತೋರಿಸಿದ್ದನ್ನು
ಚಿಕ್ಕ
ಮಕ್ಕಳು
ಕೂಡ
ಅನುಸರಿಸುತ್ತಾರೆ.
ಸಿನಿಮಾಗಳನ್ನು
ಸಿಗರೇಟ್
ಸೇದುವುದನ್ನು
ಹೀರೊಗಳು
ತೋರಿಸಿದರೆ
ಕೆಲವರು
ಅದನ್ನು
ಅನುಸರಿಸುತ್ತಾರೆ,
ಸಿಗರೇಟ್
ಸೇದಲು
ಪ್ರೇರೇಪಿತರಾಗುತ್ತಾರೆ.
ಇದನ್ನು
ನಿಮ್ಮಿಂದ
ತಡೆಯಲು
ಸಾಧ್ಯವೇ?
ಸಿನಿಮಾದಲ್ಲಿ
ಹೀರೊನು
ಒಳ್ಳೆಯವನಾ?
ಕೆಟ್ಟವನಾ?
ಗ್ಯಾಂಗ್‌ಸ್ಟರಾ?
ಅನ್ನೋದೆಲ್ಲಾ
ನಂತರ
ಆದರೆ
ಮೊದಲು
ಅದನ್ನು
ಅನುಸರಿಸುತ್ತಾರೆ,
ಇದು
ಸರೀನಾ”
ಎಂದು
ಪ್ರಶ್ನಿಸಿದ್ದಾರೆ.

ರಜನಿಕಾಂತ್
ಚಿತ್ರದ
ವಿರುದ್ಧ
ನಿಂತಿದ್ದೆ

ಎಲ್ಲಾ
ಸಿನಿಮಾಗಳಲ್ಲೂ
ಇಂತಹ
ದೃಶ್ಯಗಳು
ಇರುತ್ತವೆ.
ವಿಜಯ್
ಸಿನಿಮಾ
ಬಗ್ಗೆ
ಮಾತ್ರ
ಯಾಕೆ
ಮಾತನಾಡುತ್ತೀರಾ?
ಎನ್ನುವ
ಪ್ರಶ್ನೆಗೆ
ಆಕೆ
ಉತ್ತರಿಸಿದ್ದಾರೆ.
ನಿಮಗೆ
ಗೊತ್ತಿಲ್ಲ
ಎನಿಸುತ್ತದೆ.
ನಾನು
ಸಾಕಷ್ಟು
ಸಿನಿಮಾಗಳ
ವಿಚಾರದಲ್ಲಿ
ಇಂತಹ
ತಪ್ಪುಗಳಾದಾಗ
ಪ್ರಶ್ನಿಸಿದ್ದೇವೆ.
‘ಆಡೈ’
ಚಿತ್ರದ
ಅರೆಬೆತ್ತಲೆ
ಪೋಸ್ಟರ್‌
ಅಂಟಿಸದಂತೆ
ತಡೆದಿದ್ದೇನೆ.
ವಿಜಯ್
ನಟನೆಯ
‘ಸರ್ಕಾರ್‌’
ಚಿತ್ರದ
ಸಿಗರೇಟ್
ವಿಚಾರಕ್ಕೂ
ಇದೇ
ರೀತಿ
ಹೋರಾಟ
ಮಾಡಿದ್ದೆ.
ರಜನಿಕಾಂತ್
ಸಿನಿಮಾ
ವಿರುದ್ಧ
ಕೂಡ
ದೂರು
ನೀಡಿದ್ದಾರೆ
ಪ್ರಿಯಾ
ನೆನಪಿಸಿದ್ದಾರೆ.

English summary

Rajeshwari Priya Filed a complaint against Leo Actor Vijay. She claimed that Vijay was threatening her on social media through her fans. know more.

Friday, July 7, 2023, 14:02

Story first published: Friday, July 7, 2023, 14:02 [IST]

Source link