ಪಿವಿ ಸಿಂಧು ನೇತೃತ್ವದ ಭಾರತ ವನಿತೆಯರ ಬ್ಯಾಡ್ಮಿಂಟನ್ ತಂಡವು, ಏಷ್ಯಾ ಟೀಮ್ ಚಾಂಪಿಯನ್‌ಶಿಪ್ ಪ್ರಶಸ್ತಿ (Badminton Asia Team Championships) ಗೆದ್ದಿದೆ. ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಸಿಂಧು, ಸುದೀರ್ಘ ನಾಲ್ಕು ತಿಂಗಳ ಗಾಯದ ಬಳಿಕ ಚೇತರಿಸಿಕೊಂಡು ತಂಡಕ್ಕೆ ಮರಳಿದರು. ಅನಭವಿಗಳ ಕೊರತೆಯಿದ್ದರೂ, ಬಲಿಷ್ಠ ತಂಡ ಕಟ್ಟಿ ಟೂರ್ನಿಯಲ್ಲಿ ಭಾರತ ಯಶಸ್ವಿಯಾಗಿದೆ.