International
oi-Malathesha M
ಮಾಸ್ಕೋ: ರಷ್ಯಾ ಸೇನೆ ಹಾಗೂ ಖಾಸಗಿ ಸೇನೆ ನಡುವೆ ಯುದ್ಧ ಶುರುವಾಗಿದೆ. ಅದ್ರಲ್ಲೂ ಇಷ್ಟು ದಿನ ಉಕ್ರೇನ್ ವಿರುದ್ಧ ಯುದ್ಧ ಮಾಡುತ್ತಿದ್ದ ರಷ್ಯಾದ ಖಾಸಗಿ ಪಡೆಯ ಸೈನಿಕರು ದಿಢೀರ್ ತಮ್ಮ ದೇಶದ ವಿರುದ್ಧವೇ ದಾಳಿ ಮಾಡುತ್ತಿದ್ದಾರೆ. ರಷ್ಯಾ ಅಧ್ಯಕ್ಷ ಮತ್ತು ಸೇನಾ ಮುಖ್ಯಸ್ಥನ ವಿರುದ್ಧ ಕೋಪಕ್ಕೆ, ಸೇನಾ ಹೆಲಿಕಾಪ್ಟರ್ ಬಳಸಿ ತೈಲ ಸಂಗ್ರಹಿಸಿದ್ದ ಬೃಹತ್ ಟ್ಯಾಂಕರ್ ಉಡಾಯಿಸಿದ್ದಾರೆ (Russia War) ಎಂಬ ಆರೋಪ ಕೇಳಿಬಂದಿದೆ.
ವೊರೊನೆಜ್ ನಗರ ಹೊತ್ತಿ ಉರಿಯುತ್ತಿದ್ದು, ಈ ಭಾಗದ ತೈಲ ಸಂಗ್ರಹದ ಮೇಲೆ ದಿಢೀರ್ ದಾಳಿ ಶುರುವಾಗಿದೆ. ಅದರಲ್ಲೂ ರಷ್ಯಾ ಸೇನೆಯ ಹೆಲಿಕಾಪ್ಟರ್ & ಯುದ್ಧ ವಿಮಾನಗಳ ಮೂಲಕವೇ ದಾಳಿ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ಈ ಪೈಕಿ ವೊರೊನೆಜ್‌ನಲ್ಲೂ ಹೆಲಿಕಾಪ್ಟರ್ ನೇರವಾಗಿ ತೈಲ ಸಂಗ್ರಹಣೆ ಟ್ಯಾಂಕರ್ ಮೇಲೆ ಬಾಂಬ್ ಹಾಕಿದೆ. ವಿಡಿಯೋ ಈಗ ವೈರಲ್ ಆಗುತ್ತಿದ್ದು, ಬಾಂಬ್ ಹಾಕಿದ್ದು ಸ್ವತಃ ರಷ್ಯಾ ಸೇನೆಗೆ ಸೇರಿದ ಹೆಲಿಕಾಪ್ಟರ್ ಅನ್ನೋದು ಸ್ಪಷ್ಟವಾಗುತ್ತಿದೆ. ಘಟನೆ ಬಳಿಕ ರಷ್ಯಾ ಗಡಿ ಭಾಗದ ಜನರು ಭಯಗೊಂಡು ಹೊರಗೆ ಓಡಿ ಬಂದಿದ್ದಾರೆ. ರಷ್ಯಾ & ಉಕ್ರೇನ್ ಯುದ್ಧದ ಸಂದರ್ಭದಲ್ಲೇ ರಷ್ಯಾ ದಿಢೀರ್ ಆಂತರಿಕ ಕದನ ಎದುರಿಸುತ್ತಿದೆ (Russia Ukraine War).
ಮುಗಿಲು ಮುಟ್ಟಿದ ತೈಲ ಟ್ಯಾಂಕರ್ ಜ್ವಾಲೆ!
ನಿನ್ನೆ ತನಕ ಎಲ್ಲಾ ಸರಿಯಾಗೇ ಇತ್ತು, ಆದರೆ ಇಂದು ರಷ್ಯಾ ಖಾಸಗಿ ಸೇನೆಯ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ದಾಳಿಗೆ ಆದೇಶ ನೀಡಿದ್ದ. ಆ ನಂತರ ನೇರವಾಗಿ ರಷ್ಯಾದ ಸೇನಾ ಕೇಂದ್ರ ಕಚೇರಿಗೆ ನುಗ್ಗಿದ್ದ ರಷ್ಯಾ ಖಾಸಗಿ ಪಡೆಗಳು. ಎಲ್ಲವನ್ನೂ ತಮ್ಮ ವಶಕ್ಕೆ ಪಡೆದು, ತಮ್ಮದೇ ದೇಶದ ವಿರುದ್ಧ ದಾಳಿ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ರೋಸ್ಟೊವ್ ನಗರವನ್ನು ವಶಕ್ಕೆ ಪಡೆದಿರುವ ರಷ್ಯಾ ಖಾಸಗಿ ಪಡೆ ಭೀಕರ ದಾಳಿ ನಡೆಸುತ್ತಿದೆ. ಈಗಿನ ಮಾಹಿತಿ ಪ್ರಕಾರ ರಷ್ಯಾದ ಹಲವು ಭಾಗದಲ್ಲಿ ಖಾಸಗಿ ಸೇನೆ ಮತ್ತು ರಷ್ಯಾ ಸರ್ಕಾರಿ ಸೇನೆ ನಡುವೆ ಭೀಕರ ಕಾಳಗ ಶುರುವಾಗಿದೆ. ಅದರಲ್ಲೂ ತೈಲ ಟ್ಯಾಂಕರ್ ಬ್ಲಾಸ್ಟ್ ಆದ ಬಳಿಕ ಅದರ ಜ್ವಾಲೆ ಆಕಾಶದೆತ್ತರಕ್ಕೆ ಚಾಚಿದೆ.
ನೀನೇ ಸಾಕಿದ ಗಿಣಿ.. ಹದ್ದಾಗಿ ಕುಕ್ಕಿತಲ್ಲೋ..: ಸ್ನೇಹಿತನಿಂದಲೇ ಬೆನ್ನಿಗೆ ಚೂರಿ ಹಾಕಿಸಿಕೊಂಡ ರಷ್ಯಾ ಅಧ್ಯಕ್ಷ ಪುಟಿನ್!
ಪುಟಿನ್ ಜೀವಕ್ಕೂ ಅಪಾಯ ಇದೆಯಾ?
ರಷ್ಯಾ ಅಧ್ಯಕ್ಷ ಪುಟಿನ್ ಜೀವಕ್ಕೆ ಅಪಾಯ ಎದುರಾದಂತೆ ಕಾಣುತ್ತಿದೆ. ಕಳೆದ ತಿಂಗಳಷ್ಟೇ ಡ್ರೋನ್ ಮೂಲಕ ವ್ಲಾದಿಮಿರ್ ಪುಟಿನ್ ಹತ್ಯೆಗೆ ಪ್ರಯತ್ನ ನಡೆದಿತ್ತು. ಈ ಘಟನೆ ನಡೆದು 1 ತಿಂಗಳು ಕಳೆಯುವ ಒಳಗೆ ಮತ್ತೊಂದು ಅಪಾಯ ಎದುರಾಗಿದೆ, ರಷ್ಯಾ ಖಾಸಗಿ ಸೇನೆ ಪುಟಿನ್ ಕಥೆ ಮುಗಿಸಲು ಸ್ಕೆಚ್ ಹಾಕಿದೆ ಅನ್ನೋ ಆರೋಪ ಕೇಳಿಬಂದಿದೆ. ಈ ಬೆಳವಣಿಗೆ ನಡುವೆ ಮತ್ತೊಂದು ಸ್ಫೋಟಕ ಹೇಳಿಕೆ ಕೊಟ್ಟಿದ್ದಾನೆ ರಷ್ಯಾ ಖಾಸಗಿ ಸೇನೆಯ ಮುಖ್ಯಸ್ಥ. ಯೆವ್ಗೆನಿ ಪ್ರಿಗೊಝಿನ್ ಬಂಧನಕ್ಕೆ ವ್ಲಾದಿಮಿರ್ ಪುಟಿನ್ ಆದೇಶ ನೀಡುತ್ತಿದ್ದಂತೆ, ‘ನೀವು ತಪ್ಪು ಮಾಡಿಬಿಟ್ಟಿರಿ, ಇಂತಹ ಪರಿಸ್ಥಿತಿಯಲ್ಲಿ ತಪ್ಪು ನಿರ್ಧಾರ ಕೈಗೊಂಡಿದ್ದೀರಿ. ಹೀಗಾಗಿ ರಷ್ಯಾ ಹೊಸ ಅಧ್ಯಕ್ಷನನ್ನು ನೋಡಲಿದೆ’ ಎಂದಿದ್ದಾನೆ ಯೆವ್ಗೆನಿ ಪ್ರಿಗೊಝಿನ್.
WATCH: Helicopters attack oil depot in Russia’s Voronezh pic.twitter.com/0TBSmbnnx5
— BNO News (@BNONews) June 24, 2023
ರಷ್ಯಾದ ಮುಂದಿನ ಪರಿಸ್ಥಿತಿ ಏನು?
ಒಂದ್ಕಡೆ ಉಕ್ರೇನ್ ವಿರುದ್ಧ ರಷ್ಯಾ ಅಧ್ಯಕ್ಷ ಯುದ್ಧ ಘೋಷಣೆ ಮಾಡಿ ಹತ್ತಿರ ಹತ್ತಿರ 500 ದಿನಗಳೇ ಕಳೆದಿವೆ. ಪರಿಸ್ಥಿತಿ ಹೀಗಿದ್ದಾಗ ಪುಟಿನ್‌ಗೆ ಹೊಸ ಸವಾಲು ಎದುರಾಗಿದೆ. ತನ್ನದೇ ದೇಶದ, ಖಾಸಗಿ ಸೈನಿಕ ಪಡೆ ಪುಟಿನ್ ವಿರುದ್ಧ ತಿರುಗಿಬಿದ್ದಿದೆ. ಅತ್ತ ಉಕ್ರೇನ್‌ಗೆ ಅಮೆರಿಕ & ನ್ಯಾಟೋ ಬೆಂಬಲ ಘೋಷಿಸಿದೆ. ಇಷ್ಟೆಲ್ಲ ಕಂಟಕದ ಮಧ್ಯೆ ಆರ್ಥಿಕವಾಗಿ ಕೂಡ ರಷ್ಯಾ ತತ್ತರಿಸಿ ಹೋಗುತ್ತಿದೆ. ಹೀಗಾಗಿ ಪರಿಸ್ಥಿತಿ ಹಿಡಿತಕ್ಕೆ ಸಿಗುತ್ತಿಲ್ಲ ಮುಂದೆ ಏನಾಗುತ್ತೆ ಅನ್ನೋ ಭಯ ಆವರಿಸಿದೆ. ರಷ್ಯಾದ ಗಲ್ಲಿ ಗಲ್ಲಿಗಳಲ್ಲಿ ಜನರು ಗುಂಪು ಸೇರುತ್ತಿದ್ದಾರೆ. ಈ ನಡುವೆ ರಷ್ಯಾ ಒಳಗೆ ಆಂತರಿಕ ಯುದ್ಧ ಶುರುವಾಗುವ ಸಾಧ್ಯತೆ ಕೂಡ ದಟ್ಟವಾಗಿದೆ.
English summary
Wagner group attacks on Russian Oil Depot in Voronezh.
Story first published: Saturday, June 24, 2023, 17:40 [IST]