ತೆಲಂಗಾಣ ರಾಜಕೀಯದಲ್ಲಿ ಕಲ್ಲೋಲ: ಬಿಆರ್‌ಎಸ್ ಪಕ್ಷದ 12ಕ್ಕೂ ಹೆಚ್ಚು ಮಾಜಿ ಸಚಿವರು, ಶಾಸಕರು ಕಾಂಗ್ರೆಸ್ ಸೇರ್ಪಡೆ | Telangana: Jolt for KCR’s party, over 12 former ministers, MLAs join Congress

India

oi-Ravindra Gangal

|

Google Oneindia Kannada News

ಹೈದರಾಬಾದ್‌, ಜೂನ್ 26: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ನೇತೃತ್ವದ ಭಾರತ್ ರಾಷ್ಟ್ರ ಸಮಿತಿಯ (ಬಿಆರ್‌ಎಸ್) 12 ಕ್ಕೂ ಹೆಚ್ಚು ಮಾಜಿ ಶಾಸಕರು, ಸಚಿವರು ಮತ್ತು ಪದಾಧಿಕಾರಿಗಳು ಸೋಮವಾರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಈ ವರ್ಷಾಂತ್ಯದಲ್ಲಿ ತೆಲಂಗಾಣದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ನಡೆದಿರುವ ಬೆಳವಣಿಗೆ ತೆಲಂಗಾಣ ರಾಜಕಾರಣದಲ್ಲಿ ಕಲ್ಲೋಲವನ್ನು ಸೃಷ್ಟಿಸಿದೆ.

ಬಿಎಸ್‌ಆರ್‌ ನಾಯಕರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಉಪಸ್ಥಿತರಿದ್ದರು.

Telangana Leaders Joined Congress

ಮಾಜಿ ಸಂಸದ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ, ಮಾಜಿ ಸಚಿವ ಜೂಪಲ್ಲಿ ಕೃಷ್ಣರಾವ್, ಮಾಜಿ ಶಾಸಕರಾದ ಪಣ್ಯಂ ವೆಂಕಟೇಶ್ವರಲು, ಕೋರಂ ಕನಕಯ್ಯ, ಕೋಟ ರಾಮ್ ಬಾಬು ಸೇರಿದಂತೆ ಹಲವು ಪ್ರಮುಖ ನಾಯಕರು ಕಾಂಗ್ರೆಸ್‌ಗೆ ಇಂದು ಸೇರ್ಪಡೆಗೊಂಡರು. ಇದೇ ವೇಳೆ, ಬಿಆರ್‌ಎಸ್ ಎಂಎಲ್‌ಸಿ ನರಸಾ ರೆಡ್ಡಿ ಪುತ್ರ ರಾಕೇಶ್ ರೆಡ್ಡಿ ಕೂಡ ಕಾಂಗ್ರೆಸ್ ಸೇರಿದ್ದಾರೆ.

 ಬಿಆರ್‌ಎಸ್ ಪ್ರಮುಖ ನಾಯಕ ಪೊಂಗುಲೇಟಿ ಶ್ರೀನಿವಾಸ್ ಕಾಂಗ್ರೆಸ್‌ ಸೇರ್ಪಡೆ ಬಹುತೇಕ ಖಚಿತ- ಆಪರೇಶನ್‌ 'ಕೈ'ಗೆ ಡಿಕೆಶಿ ಚಾಲನೆ? ಬಿಆರ್‌ಎಸ್ ಪ್ರಮುಖ ನಾಯಕ ಪೊಂಗುಲೇಟಿ ಶ್ರೀನಿವಾಸ್ ಕಾಂಗ್ರೆಸ್‌ ಸೇರ್ಪಡೆ ಬಹುತೇಕ ಖಚಿತ- ಆಪರೇಶನ್‌ ‘ಕೈ’ಗೆ ಡಿಕೆಶಿ ಚಾಲನೆ?

ಪಾಟ್ನಾದಲ್ಲಿ ನಡೆದ ಬೃಹತ್ ವಿರೋಧ ಪಕ್ಷಗಳ ಸಭೆಗೆ ಬಿಆರ್‌ಎಸ್ ಪಕ್ಷವು ಗೈರಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಬಿಎಸ್‌ಆರ್‌ನ ಪ್ರಮುಖ ನಾಯಕರು ಕಾಂಗ್ರೆಸ್ ಸೇರಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕರೆದಿದ್ದ ಸಭೆಯಲ್ಲಿ ದೇಶದ ಬಹುತೇಕ ಎಲ್ಲ ಪ್ರಮುಖ ವಿರೋಧ ಪಕ್ಷಗಳ ನಾಯಕರು ಉಪಸ್ಥಿತರಿದ್ದರು.

ಪ್ರತಿಪಕ್ಷಗಳ ಸಭೆಯಿಂದ ಹೊರಗುಳಿದಿದ್ದನ್ನು ಚಂದ್ರಶೇಖರ್‌ ರಾವ್‌ ಸಮರ್ಥಿಸಿಕೊಂಡಿದ್ದಾರೆ. ಅಧಿಕಾರದಿಂದ ‘ಯಾರನ್ನಾದರೂ ಕೆಳಗಿಳಿಸುವುದು ಪಕ್ಷಗಳು ಗೀಳಾಗಬಾರದು’ ಎಂದು ಹೇಳಿದ್ದಾರೆ.

ಬಿಜೆಪಿ ವಿರುದ್ಧದ ಹೋರಾಟವು ದೇಶದ ಮುಂದಿರುವ ಪ್ರಮುಖ ವಿಚಾರ. ದುರದೃಷ್ಟವಶಾತ್, ನಾವು ಅಲ್ಲಿನ ಈ ಹೋರಾಟವನ್ನು ಕಳೆದುಕೊಳ್ಳುತ್ತಿದ್ದೇವೆ. ನಾವು ಯಾರನ್ನಾದರೂ ಹೊರಹಾಕುವ ಅಥವಾ ಯಾರನ್ನಾದರೂ ಅಲ್ಲಿ ಇರಿಸುವ ಬಗ್ಗೆ ಗೀಳನ್ನು ಹೊಂದಿದ್ದೇವೆ. ಇದರ ಬಗ್ಗೆ ಚಿಂತಿತರಾಗಿರುವಂತೆ ತೋರುತ್ತಿದೆ. ಅದು ನಮ್ಮ ಕಾರ್ಯಸೂಚಿಯಾಗಬಾರದು ಎಂದು ಅವರು ಹೇಳಿದರು.

Telangana Leaders Joined Congress

2024 ರ ಲೋಕಸಭಾ ಚುನಾವಣೆಯಲ್ಲಿ ಬಿಆರ್‌ಎಸ್ ಸ್ವಂತವಾಗಿ ಸ್ಪರ್ಧಿಸಲು ಸಿದ್ಧವಾಗಿದೆ. ಹೆಚ್ಚು ಸಂಖ್ಯೆಯ ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಪ್ರಭಾವಶಾಲಿ ಆರಂಭವನ್ನು ಮಾಡಲು ಪ್ರಯತ್ನಿಸುತ್ತದೆ ಎಂದು ಕೆಟಿಆರ್ ತಿಳಿಸಿದರು.

ಜೆಡಿಯು ಮುಖ್ಯಸ್ಥರು ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ವಿಪಕ್ಷಗಳ ಮೈತ್ರಿಗಾಗಿ ಕೆಲಸ ಮಾಡಲು ಸಭೆಯನ್ನು ಆಯೋಜಿಸಿದ್ದರು.

English summary

Telangana: More than 12 former MLAs, ministers and office-bearers of Telangana Chief Minister K Chandrasekhara Rao-led Bharat Rashtra Samithi (BRS) joined the Congress on Monday

Story first published: Monday, June 26, 2023, 17:43 [IST]

Source link