ತಿನ್ನಲು ಬರುವುದು ಅಕ್ಕಿಯೇ ಹೊರತು ಹಣವಲ್ಲ! ಕರ್ನಾಟಕ ‘ಅಕ್ಕಿ’ ಕದನದಲ್ಲಿ ಗೆಲುವು ಯಾರಿಗೆ? ಸೋಲು ಯಾರಿಗೆ? | Siddaramaiah government and BJP fight continued in Anna Bhagya scheme

Karnataka

oi-Malathesha M

By ಒನ್ ಇಂಡಿಯಾ ಡೆಸ್ಕ್

|

Google Oneindia Kannada News

ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಈಗ ಅಕ್ಕಿ ಕದನ ಬಲು ಜೋರಾಗಿದೆ. ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಕದನಕ್ಕೆ ಇಳಿದಿದ್ದರೆ, ಕಾಂಗ್ರೆಸ್ ಕೂಡ ಬಿಜೆಪಿ ವಿರುದ್ಧವೇ ಆರೋಪ ಮಾಡುತ್ತಿದೆ. ಹೀಗಾಗಿ ಅನ್ನಭಾಗ್ಯ ಜಾರಿ ಆಗುತ್ತಾ? ಇಲ್ಲವಾ? ಅಂತಾ ರಾಜ್ಯದ ಜನರು ಚಿಂತೆಯಲ್ಲಿದ್ದಾರೆ. ಆದರೆ ಕಾಂಗ್ರೆಸ್ & ಬಿಜೆಪಿ ಮಾತ್ರ ಇದೇ ವಿಚಾರವನ್ನ ಅಸ್ತ್ರ ಮಾಡಿಕೊಂಡು ಒಬ್ಬರ ಮೇಲೊಬ್ಬರು ಯುದ್ಧ ಮಾಡುತ್ತಿದ್ದಾರೆ.

ಸಿದ್ದರಾಮಯ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ವಿಚಾರದಲ್ಲಿ ಬಿಜೆಪಿ & ಕಾಂಗ್ರೆಸ್ ವಾರ್ ಮುಂದುವರಿದಿದೆ. ಈ ಮೂಲಕ ಅಕ್ಕಿ ವಿಚಾರಕ್ಕೆ ಕಿರಿಕ್ ಕೂಡ ಜೋರಾಗುತ್ತಿದೆ, ಕಳೆದ ಕೆಲ ದಿನಗಳಿಂದ ರಾಜ್ಯ ಕಾಂಗ್ರೆಸ್ ಪಡೆ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿತ್ತು. ಅದಕ್ಕೆ ಬಿಜೆಪಿ ನಾಯಕರು ಕೂಡ ಉತ್ತರ ಕೊಡುತ್ತಿದ್ದಾರೆ. ಅಲ್ಲದೆ ಯೋಜನೆ ಜಾರಿ ಮಾಡುವಾಗ ಕೇಂದ್ರದ ಬಳಿ ಅನುಮತಿ ಪಡೆದಿದ್ರಾ? ಎಂಬ ಪ್ರಶ್ನೆ ಕೂಡ ಕೇಳಿಬರುತ್ತಿದೆ. ಆದರೆ ಇದೇ ಹೊತ್ತಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಾಡ್ಗಿಚ್ಚೇ ಹೊತ್ತಿಕೊಂಡಿದೆ (Congress Guarantee).

Siddaramaiah government and BJP fight

‘ತಿನ್ನಲು ಬರುವುದು ಅಕ್ಕಿಯೇ ಹೊರತು ಹಣವಲ್ಲ’

ಹೌದು, ಬಿಜೆಪಿ ವಿರುದ್ಧ ಅಕ್ಕಿ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಗರಂ ಆಗಿದೆ. ಅದರಲ್ಲೂ ಇದೇ ವಿಚಾರವನ್ನ ಅಸ್ತ್ರ ಮಾಡಿಕೊಂಡು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿಯನ್ನೂ ನಡೆಸಲಾಗುತ್ತಿದೆ. ಟ್ವಿಟ್ಟರ್‌ನಲ್ಲಿ ‘ಅನ್ನಭಾಗ್ಯದಲ್ಲಿ ಅಕ್ಕಿಯ ಬದಲು ಹಣ ಕೊಡಿ ಎನ್ನುತ್ತಿದ್ದಾರೆ @ikseshwarappa ಹಾಗೂ ಇತರ @BJP4Karnataka ನಾಯಕರು. ತಿನ್ನಲು ಬರುವುದು ಅಕ್ಕಿಯೇ ಹೊರತು ಹಣವಲ್ಲ! ಬಿಜೆಪಿಗರಿಗೆ ಹಣವನ್ನೇ ತಿಂದು ಅಭ್ಯಾಸವಿರಬಹುದು ಆದರೆ ಜನಸಾಮಾನ್ಯರು ತಿನ್ನುವುದು ಅನ್ನವನ್ನ! ಹಣ ತಿನ್ನುವ ಬಿಜೆಪಿಗೆ ಅನ್ನ ತಿನ್ನುವವರ ಸಂಕಷ್ಟ ಅರ್ಥವಾಗುವುದು ಅಸಾಧ್ಯ!’ ಎಂದಿದೆ ಕಾಂಗ್ರೆಸ್.

ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ತಿರುಗೇಟು!

ಕೇಂದ್ರಸರ್ಕಾರ ಅಕ್ಕಿ ಕೊಡುವ ವಿಚಾರಕ್ಕೆ ರಾಜಕೀಯ ಮಾಡಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ನಾಯಕರು, ಕರ್ನಾಟಕದ ಪ್ರತಿ ಜಿಲ್ಲಾ ಕೇಂದ್ರದಲ್ಲೂ ಹೋರಾಟಕ್ಕೆ ಕರೆಯನ್ನ ಕೊಟ್ಟಿದ್ದಾರೆ. ಈ ಕುರಿತು ಬಿಜೆಪಿ ಕೂಡ ಟ್ವೀಟ್ ಮಾಡಿ ತಿರುಗೇಟು ನೀಡಿದ್ದು, ‘ಅನ್ನಭಾಗ್ಯಕ್ಕೆ ಅಕ್ಕಿ ಕೊಂಡುಕೊಳ್ಳಲೂ ಆಗದ, ಅಕ್ಕಿ ಕೊಡಲೂ ಆಗದ “ರಾಜ್ಯ ಕಾಂಗ್ರೆಸ್ ಸರ್ಕಾರದ” ವಿರುದ್ಧ ರಾಜ್ಯ ಕಾಂಗ್ರೆಸ್‌ನಿಂದ ನಾಳೆ ಜೂನ್ 20ರಂದು ರಾಜ್ಯಾದ್ಯಂತ ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ಪ್ರತಿಭಟನೆ !!! ದಯವಿಟ್ಟು ಪಾಲ್ಗೊಳ್ಳಿ!’ ಎಂದು ಲೇವಡಿ ಮಾಡಿದೆ. ಈ ಮೂಲಕ ಎರಡೂ ಪಕ್ಷದ ನಡುವೆ ಅಕ್ಕಿ ವಾರ್ ಜೋರಾಗುತ್ತಿದೆ.

ಬಿಜೆಪಿಯಿಂದ ‘ಗ್ಯಾರಂಟಿ ವಂಚನೆ’ ಆರೋಪ

ಹಾಗೇ ಮತ್ತೊಂದು ಟ್ವೀಟ್ ಮೂಲಕ ಕಾಂಗ್ರೆಸ್ ನಾಯಕರ ಭಿನ್ನಾಭಿಪ್ರಾಯದ ಕುರಿತಾಗಿ ಬಿಜೆಪಿ ಟ್ವೀಟ್ ಮಾಡಿದೆ. ‘ಗ್ಯಾರಂಟಿ ವಂಚನೆಗಳನ್ನು ಮುಂದಿಟ್ಟು ಅಧಿಕಾರಕ್ಕೆ ಬಂದ @INCKarnataka ಕ್ಕೆ ಇರುವುದು ಸ್ವಾರ್ಥ ಚಿಂತನೆ ಮಾತ್ರ. ಮುಖ್ಯಮಂತ್ರಿ @sidaramaiah ಮತ್ತು ಉಪಮುಖ್ಯಮಂತ್ರಿ @DKShivakumar ಅವರಿಗೆ ಇರುವುದು ಎರಡೇ – ಅಧಿಕಾರದ ದಾಹ, ಮತ್ತೊಂದು‌ ಅಭದ್ರತಾ ಭಾವ. ಹೈಕಮಾಂಡ್‌ ಕಲೆಕ್ಷನ್‌ ಏಜೆಂಟ್‌ ರಣದೀಪ್ ಸುರ್ಜೇವಾಲರವರಿಗೆ ರಾಜ್ಯದ ಸಬ್‌-ಏಜೆಂಟ್‌ ತಾನಾಗಬೇಕೆಂಬುದೇ ಇಬ್ಬರ ಹೆಬ್ಬಯಕೆ. ಪರಿಣಾಮವಾಗಿ ಒಳಗುದ್ದಾಟ ಮತ್ತು ಕಾಲೆಳೆಯುವಿಕೆಯಲ್ಲೇ #ATMsarkara‌ ನಿರತವಾಗಿದೆ.’ ಎಂದು ಕಾಂಗ್ರೆಸ್ ಕಾಲೆಳೆದಿದೆ.

English summary

Siddaramaiah government and BJP fight continued in Anna Bhagya scheme.

Story first published: Monday, June 19, 2023, 14:40 [IST]

Source link