ತಡರಾತ್ರಿ ಮೋದಿ ಮನೆಯಲ್ಲಿ ಶಾ, ಬಿಜೆಪಿಗರ ಸಭೆ: ಲೋಕಸಭಾ ಚುನಾವಣೆಗೆ ಪ್ರೀ ಪ್ಲಾನ್‌ | Late night meeting of Shah, BJP members at Modi’s house: Pre-plan for Lok Sabha elections

India

oi-Punith BU

|

Google Oneindia Kannada News

ನವದೆಹಲಿ, ಜೂನ್‌ 29: 2024ರ ಲೋಕಸಭೆ ಚುನಾವಣೆಯ ಕಾರ್ಯತಂತ್ರದ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ನಿನ್ನೆ ರಾತ್ರಿ ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಪಕ್ಷದ ಇತರ ಹಿರಿಯ ನಾಯಕರು ಭಾಗವಹಿಸಿದ್ದರು ಎನ್ನಲಾಗಿದೆ.

lok sabha election 2024

ಪ್ರಧಾನಿ ಮೋದಿ ಅಮೆರಿಕದಿಂದ ಬಂದ ಕೆಲವೇ ದಿನಗಳಲ್ಲಿಯೇ ಲೋಕಸಭಾ ಚುನಾವಣೆಗೆ ತಯಾರಿಗಾಗಿ ಈ ಸಭೆ ನಡೆದಿದೆ. ಐದು ಗಂಟೆಗಳ ಕಾಲ ನಡೆದ ಸುದೀರ್ಫ ಸಭೆಯಲ್ಲಿ ಪ್ರಮುಖ ಬದಲಾವಣೆಯ ಬಗ್ಗೆ ಚರ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ರಾಷ್ಟ್ರವ್ಯಾಪಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಸರ್ಕಾರ ಬಯಸುತ್ತದೆ ಎಂದು ಈಗಾಗಲೇ ಘೋಷಿಸಿದ್ದಾರೆ. ಇದು ಯಾವಾಗಲೂ ಬಿಜೆಪಿಯ ಪ್ರಣಾಳಿಕೆಗಳ ಭಾಗವಾಗಿ ಉಳಿದಿದೆ.

ಕರ್ನಾಟಕದ ವಿಧಾನಸಭೆಯಲ್ಲಿನ ಆದ ಹೀನಾಯ ಸೋಲಿನಿಂದ ಎಚ್ಚೆತ್ತುಕೊಂಡಿರುವ ಪಕ್ಷ ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿವಿಧ ರಾಜ್ಯ ಚುನಾವಣೆಗಳಿಗೆ ತನ್ನ ಪ್ರಚಾರದ ಮಾದರಿಯನ್ನು ಬದಲಾವಣೆ ಮಾಡಲು ಮುಂದಾಗಿದೆ. ಮುಂಬರುವ ನಾಲ್ಕು ಪ್ರಮುಖ ರಾಜ್ಯ ಚುನಾವಣೆಗಳೆಂದರೆ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಛತ್ತೀಸ್‌ಗಢದಲ್ಲಿ ಚುನಾವಣೆಗಳು ನಡೆಯಲಿವೆ. ಈ ಪೈಕಿ ಮಧ್ಯಪ್ರದೇಶದಲ್ಲಿ ಮಾತ್ರ ಬಿಜೆಪಿ ಆಡಳಿತವಿದೆ. ಪಕ್ಷವು ತನ್ನ ಪರವಾಗಿ ಕೆಲಸ ಮಾಡಲು ರಾಜಸ್ಥಾನದಲ್ಲಿ ಮಾದರಿ ಪ್ರವೃತ್ತಿಯನ್ನು ಮತ್ತು ಇನ್ನೆರಡು ಆಡಳಿತ ವಿರೋಧಿ ಅಲೆಯನ್ನು ಪ್ರಚಾರದ ಸರಕಾಗಿ ಮಾಡಿಕೊಳ್ಳಲು ಮುಂದಾಗಿದೆ.

 ವಿದೇಶದಲ್ಲಿಯೂ ಭಾರತದ ಮಾನ ಹರಾಜು ಹಾಕಿ ಬಂದ ಪ್ರಧಾನಿ ಮೋದಿ: ಕಾಂಗ್ರೆಸ್ ಕಿಡಿ ವಿದೇಶದಲ್ಲಿಯೂ ಭಾರತದ ಮಾನ ಹರಾಜು ಹಾಕಿ ಬಂದ ಪ್ರಧಾನಿ ಮೋದಿ: ಕಾಂಗ್ರೆಸ್ ಕಿಡಿ

ಕಳೆದ ತಿಂಗಳು ಕೇಂದ್ರ ಮಂತ್ರಿಗಳು ಮತ್ತು ಬಿಜೆಪಿಯ ಹಿರಿಯ ಸಾಂಸ್ಥಿಕ ಸದಸ್ಯರು ಮೋದಿ ಸರ್ಕಾರದ ಒಂಬತ್ತನೇ ವಾರ್ಷಿಕೋತ್ಸವವನ್ನು ಆಚರಿಸಲು ಒಂದು ತಿಂಗಳ ಕಾಲ ಸಾಮೂಹಿಕ ಸಂಪರ್ಕ ಅಭಿಯಾನವನ್ನು ನಡೆಸಿದ್ದರು. ಇದು 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬೆಂಬಲವನ್ನು ಹೆಚ್ಚಿಸಲು ಆಡಳಿತ ಪಕ್ಷದ ಮೆಗಾ ಸಂಪರ್ಕ ಅಭಿಯಾನ ಎಂದು ಪರಿಗಣಿಸಲಾಗಿದೆ.

lok sabha election 2024

ತಮ್ಮ ಮನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಬಿಜೆಪಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಸಂಘಟನಾ ವಿಷಯಗಳ ಕುರಿತು ಚರ್ಚೆ ನಡೆಸಿದರು.

ಶುಕ್ರವಾರ, ಪ್ರಧಾನಿ ಮೋದಿ ಅವರು ಭೋಪಾಲ್‌ನ ರಾಣಿ ಕಮಲಾಪತಿ ರೈಲು ನಿಲ್ದಾಣದಿಂದ ಐದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಚಾಲನೆ ನೀಡಿದರು. ಚಾಲನೆ ಸಮಾರಂಭದ ಮೊದಲು, ರಾಣಿ ಕಮಲಾಪತಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲಿನಲ್ಲಿದ್ದ ರೈಲಿನ ಸಿಬ್ಬಂದಿ ಮತ್ತು ಕೆಲವು ಮಕ್ಕಳೊಂದಿಗೆ ಪ್ರಧಾನ ಮಂತ್ರಿ ಸಂವಾದ ನಡೆಸಿದ್ದರು.

ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಏಕರೂಪದ ನಾಗರಿಕ ಸಂಹಿತೆ ಕುರಿತು ಬಲವಾಗಿ ಪ್ರತಿಪಾದಿಸಿದರು. ದೇಶವು ಎರಡು ಕಾನೂನುಗಳ ಮೇಲೆ ನಡೆಯಲು ಸಾಧ್ಯವಿಲ್ಲ ಮತ್ತು ಏಕರೂಪ ನಾಗರಿಕ ಸಂಹಿತೆ ಸಂವಿಧಾನದ ಭಾಗವಾಗಿದೆ. ಇಂದು ಯುಸಿಸಿ ಹೆಸರಿನಲ್ಲಿ ಜನರನ್ನು ಪ್ರಚೋದಿಸಲಾಗುತ್ತಿದೆ. ದೇಶವು ಎರಡು (ಕಾನೂನು) ಮೇಲೆ ಹೇಗೆ ಚಲಿಸಬಹುದು? ಸಂವಿಧಾನವು ಸಮಾನ ಹಕ್ಕುಗಳ ಬಗ್ಗೆಯೂ ಮಾತನಾಡುತ್ತದೆ. ಸುಪ್ರೀಂ ಕೋರ್ಟ್ ಕೂಡ ಯುಸಿಸಿಯನ್ನು ಜಾರಿಗೆ ತರಲು ಹೇಳಿದೆ. ಈ (ವಿರೋಧ) ಜನರು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

English summary

Sources said that senior BJP leaders including Prime Minister Narendra Modi, Home Minister Amit Shah held a meeting last night to discuss the strategy for the 2024 Lok Sabha elections.

Story first published: Thursday, June 29, 2023, 9:54 [IST]

Source link