ಟ್ರೋಲಿಗರ ಫೇವರಿಟ್ ಕೊರಿಯೋಗ್ರಫರ್ ರಾಕೇಶ್ ಮಾಸ್ಟರ್ ನಿಧನ; ದಿಢೀರ್ ಸಾವಿಗೆ ಕಾರಣವೇನು? | Telugu famous choreographer Rakesh Master passed away due to sunstroke

bredcrumb

Telugu

oi-Srinivasa A

|
Telugu famous choreographer Rakesh Master passed away due to sunstroke

ತೆಲುಗು
ಚಿತ್ರರಂಗದ
ಖ್ಯಾತ
ನೃತ್ಯ
ಸಂಯೋಜಕ
ರಾಕೇಶ್
ಮಾಸ್ಟರ್
ಇಂದು
(
ಜೂನ್
18
)
ಇಹಲೋಕ
ತ್ಯಜಿಸಿದ್ದಾರೆ.
ಇಂದು
ಸಂಜೆ
ಐದು
ಗಂಟೆಗೆ
ಹೈದರಾಬಾದ್‌ನ
ಗಾಂಧಿ
ಆಸ್ಪತ್ರೆಯಲ್ಲಿ
ರಾಕೇಶ್
ಮಾಸ್ಟರ್
ಕೊನೆಯುಸಿರೆಳೆದಿದ್ದಾರೆ.

ಸನ್‌ಸ್ಟ್ರೋಕ್
ಆದ
ಕಾರಣದಿಂದಾಗಿ
ರಾಕೇಶ್
ಮಾಸ್ಟರ್
ಅಸುನೀಗಿದ್ದಾರೆ.
ಕಳೆದ
ವಾರ
ವಿಶಾಖಪಟ್ಟಣದಲ್ಲಿ
ಚಿತ್ರೀಕರಣಕ್ಕೆಂದು
ತೆರಳಿದ್ದ
ರಾಕೇಶ್
ಮಾಸ್ಟರ್

ಚಿತ್ರೀಕರಣದ
ಬಳಿಕ
ಅಸ್ವಸ್ಥರಾಗಿದ್ದರು.
ವಿಶಾಖಪಟ್ಟಣದಿಂದ
ಹೈದರಾಬಾದ್‌ಗೆ
ಬಂದ
ಕೂಡಲೇ
ರಾಕೇಶ್
ಮಾಸ್ಟರ್
ತಮ್ಮ
ಅನಾರೋಗ್ಯದ
ಬಗ್ಗೆ
ತಿಳಿಸಿದ್ದರು.

ಹೀಗೆ
ಅನಾರೋಗ್ಯ
ಹೆಚ್ಚಾದ
ಕಾರಣ
ರಾಕೇಶ್
ಮಾಸ್ಟರ್
ಅವರನ್ನು
ಇಂದು
ಮಧ್ಯಾಹ್ನ
ಗಾಂಧಿ
ಆಸ್ಪತ್ರೆಗೆ
ದಾಖಲಿಸಲಾಯಿತು.
ರಾಕೇಶ್
ಮಧುಮೇಹ
ರೋಗಿಯಾಗಿದ್ದರು.
ಅವರಿಗೆ
ಅಂಗ
ವೈಫಲ್ಯವಾಗಿತ್ತು.
ಶುಗರ್
ಲೆವೆಲ್
ಸಹ
ತಗ್ಗಿತ್ತು.
ವರದಿಯ
ಪ್ರಕಾರ
ರಾಕೇಶ್
ಮಾಸ್ಟರ್
ಚಿಕಿತ್ಸೆ
ಫಲಕಾರಿಯಾಗದೇ
ಸಾವನ್ನಪ್ಪಿದ್ದಾರೆ.

ಇನ್ನು
ರಾಕೇಶ್
ಮಾಸ್ಟರ್
ಅವರಿಗೆ
55
ವರ್ಷ
ವಯಸ್ಸಾಗಿತ್ತು,
ಇವರ
ನಿಜವಾದ
ಹೆಸರು
ಎಸ್
ರಾಮಾರಾವ್.
1500ಕ್ಕೂ
ಹೆಚ್ಚು
ಸಿನಿಮಾಗಳಲ್ಲಿ
ರಾಕೇಶ್
ಮಾಸ್ಟರ್
ಕೊರಿಯೊಗ್ರಫರ್
ಆಗಿ
ಕೆಲಸ
ನಿರ್ವಹಿಸಿದ್ದು,
ಇತ್ತೀಚಿನ
ದಿನಗಳಲ್ಲಿ
ಹೆಚ್ಚಾಗಿ
ಸಿನಿಮಾಗಳಲ್ಲಿ
ತೊಡಗಿಸಿಕೊಳ್ಳುತ್ತಿರಲಿಲ್ಲ.

ಆದರೆ
ರಾಕೇಶ್
ಮಾಸ್ಟರ್
ಸಾಮಾಜಿಕ
ಜಾಲತಾಣದಲ್ಲಿ
ಇತ್ತೀಚಿನ
ದಿನಗಳಲ್ಲಿ
ಫೇಮಸ್
ಆಗಿದ್ದರು.
ವಿಡಿಯೊಗಳಲ್ಲಿ
ನೇರವಾಗಿ
ಹಾಗೂ
ವಿಚಿತ್ರವಾಗಿ
ಹೇಳಿಕೆಗಳನ್ನು
ನೀಡುತ್ತಿದ್ದ
ರಾಕೇಶ್
ಮಾಸ್ಟರ್
ವೈರಲ್
ಆಗಿದ್ದರು.
ಹೀಗೆ
ವಿಭಿನ್ನವಾಗಿ
ನಡೆದುಕೊಳ್ಳುತ್ತಿದ್ದ
ಕಾರಣ
ಟ್ರೋಲಿಗರಿಗೆ
ರಾಕೇಶ್
ಮಾಸ್ಟರ್
ಫೇವರಿಟ್
ಆಗಿದ್ದರು.

ರಾಕೇಶ್
ಮಾಸ್ಟರ್
ಮಾತನಾಡಿದ್ದ
ವಿಡಿಯೊಗಳನ್ನು
ಎಡಿಟ್
ಮಾಡುತ್ತಿದ್ದ
ಟ್ರೋಲಿಗರು
ಅವರ
ಹೇಳಿಕೆಗಳನ್ನು
ಟ್ರೋಲ್
ಮಾಡುತ್ತಿದ್ದರು.
ಆದರೀಗ
ರಾಕೇಶ್
ಮಾಸ್ಟರ್
ಇನ್ನಿಲ್ಲ
ಎಂಬ
ಸುದ್ದಿಯನ್ನು
ಕೇಳಿ
ಟ್ರೋಲಿಗರು
ಬೇಸರ
ಹಾಗೂ
ದುಃಖ
ವ್ಯಕ್ತಪಡಿಸಿದ್ದಾರೆ.

ಅವರ
ಕಳೆದ
ವಾರದ
ವಿಡಿಯೊವೊಂದನ್ನು
ಹಂಚಿಕೊಳ್ಳುತ್ತಿರುವ
ಟ್ರೋಲಿಗರು
ಹಾಗೂ
ನೆಟ್ಟಿಗರು
ರಾಕೇಶ್
ಮಾಸ್ಟರ್
ಅವರನ್ನು
ಮಿಸ್
ಮಾಡಿಕೊಳ್ಳುತ್ತಿದ್ದೇವೆ
ಎಂದು
ಬರೆದುಕೊಳ್ಳುತ್ತಿದ್ದಾರೆ.

English summary

Telugu famous choreographer Rakesh Master passed away due to sunstroke

Sunday, June 18, 2023, 20:17

Story first published: Sunday, June 18, 2023, 20:17 [IST]

Source link