ಟೊಮೆಟೊ ಬೆಲೆ ಏರಿಕೆ ಬೆನ್ನಲೇ ಗ್ರಾಹಕರಿಗೆ ಮತ್ತೊಂದು ಶಾಕ್: ಏರುತ್ತಿದೆ ಬೇಳೆಕಾಳುಗಳ ಬೆಲೆ! | Another shock for consumers after the increase in tomato prices: the price of pulses is rising!

Features

oi-Sunitha B

|

Google Oneindia Kannada News

ಟೊಮೆಟೊ ಬೆಲೆ ಏರಿಕೆಯಾದ ಬೆನ್ನಲ್ಲೇ ಬೇಳೆಕಾಳುಗಳ ಬೆಲೆಯೂ ಸ್ಥಿರವಾಗಿ ಏರಿಕೆಯಾಗುತ್ತಿದ್ದು ಗ್ರಾಹಕರನ್ನು ಚಿಂತೆಗೀಡು ಮಾಡಿದೆ. ಬೇಳೆಕಾಳುಗಳ ಬೆಲೆ ಏರಿಕೆಯನ್ನು ತಡೆಯಲು ಸರ್ಕಾರ ಪ್ರಯತ್ನಿಸುತ್ತಿದ್ದರೂ ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಬೆಲೆ ಏರಿಕೆ ಬಿಸಿ ಗ್ರಾಹಕರಿಗೆ ಇನ್ನಿಲ್ಲದಂತೆ ಕಾಡುತ್ತಿದೆ.

ಕಡಿಮೆ ಉತ್ಪಾದನೆ, ಬೇಡಿಕೆ ಹೆಚ್ಚಳ, ರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ವಿಳಂಬವಾದ ಮುಂಗಾರು, ಪೂರೈಕೆಯ ಕೊರತೆ ಹೀಗೆ ಹಲವಾರು ಕಾರಣಗಳಿಂದಾಗಿ ಟೊಮೆಟೊ ಬೆಲೆಗಳು ಮಾತ್ರವಲ್ಲದೆ ಅಗತ್ಯೆ ತರಕಾರಿಗಳ ಬೆಲೆ ಭಾರತದ ಅನೇಕ ನಗರಗಳಲ್ಲಿ ಪ್ರತಿ ಕೆಜಿಗೆ 100 ರೂಪಾಯಿಯನ್ನು ದಾಟಿ 200 ರೂಪಾಯಿಗೆ ತಲುಪಿದೆ.

Another shock for consumers after the increase in tomato prices: the price of pulses is rising!

ಈಗಾಗಲೇ ತರಕಾರಿಗಳ ಬೆಲೆಗಳು ಏರುತ್ತಿರುವಾಗ, ಬೇಳೆಕಾಳುಗಳ ಬೆಲೆಯೂ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ಗ್ರಾಹಕರ ಬಜೆಟ್‌ಗೆ ಭಾರೀ ದೊಡ್ಡ ಹೊಡೆತವನ್ನು ನೀಡುತ್ತದೆ. ಹೀಗಾಗಿ ಇತರ ಅಗ್ಗದ ಆಯ್ಕೆಗಳನ್ನು ಬಳಸಲು ಜನ ನಿರ್ಧರಿಸಿದ್ದಾರೆ.

PM Fasal Bima Yojana: ಮುಂಗಾರು ವಿಳಂಬ, ಬೆಳೆ ವಿಮೆಗಾಗಿ ರೈತರೂ ಕೂಡಲೆ ಹೆಸರು ನೋಂದಾಯಿಸಿಕೊಳ್ಳಿPM Fasal Bima Yojana: ಮುಂಗಾರು ವಿಳಂಬ, ಬೆಳೆ ವಿಮೆಗಾಗಿ ರೈತರೂ ಕೂಡಲೆ ಹೆಸರು ನೋಂದಾಯಿಸಿಕೊಳ್ಳಿ

ಮುಂಗಾರು ಹಂಗಾಮಿಗೆ ಬಂದಾಗ ತರಕಾರಿಗಳ ಬೆಲೆ ಹೆಚ್ಚುವುದು ವಾಡಿಕೆಯಾದರೂ ಈ ವರ್ಷ ಬೇಳೆಕಾಳುಗಳ ಬೆಲೆ ಶೇ.10ರಷ್ಟು ಏರಿಕೆ ಕಂಡಿದೆ. ರೇಟಿಂಗ್ ಏಜೆನ್ಸಿ CRISIL ನ ಸಂಶೋಧನೆಯ ಪ್ರಕಾರ, ಕಳೆದ ಐದು ತಿಂಗಳುಗಳಲ್ಲಿ ಹಣದುಬ್ಬರ ದ್ವಿಗುಣಗೊಂಡಿದೆ.

ಪ್ರಸ್ತುತ ತರಕಾರಿಗಳ ಬೆಲೆಗಳು ಏರುತ್ತಿರುವಾಗ ಬೇಳೆಕಾಳುಗಳಲ್ಲಿನ ಬೆಲೆ ಏರಿಕೆ ಗ್ರಾಹಕರಿಗೆ ಬಿಸಿ ತುಪ್ಪವಾಗಲಿದೆ. ಅಕ್ಕಿ ಮತ್ತು ಗೋಧಿಯ ಬೆಲೆಗಳು ಹೆಚ್ಚಾಗಿದೆ. ಇದರಿಂದ ಭಾರತೀಯ ಥಾಲಿ ಸಾಮಾನ್ಯವಾಗಿ ದುಬಾರಿ ಆಹಾರವವಾಗಲಿದೆ. ಅಕ್ಕಿ ಬೆಲೆ ಶೇ.10ರಷ್ಟು ಹೆಚ್ಚಿದ್ದರೆ, ಗೋಧಿ ಬೆಲೆ ಶೇ.12ರಷ್ಟು ಹೆಚ್ಚಾಗಿದೆ. statista.com ನ ದತ್ತಾಂಶದ ಪ್ರಕಾರ, 2012ರಿಂದ ಈವರೆಗೆ ತೊಗರಿ ಬೇಳೆ ದರವು ಶೇಕಡ 88ರಷ್ಟು ಏರಿಕೆಯಾಗಿದೆ.

Another shock for consumers after the increase in tomato prices: the price of pulses is rising!

ಭಾರತದಲ್ಲಿ ದಾಲ್ ಅಥವಾ ಬೇಳೆಕಾಳುಗಳು ಸಾಮಾನ್ಯವಾಗಿ ಹೆಚ್ಚು ಬಳಕೆ ಮಾಡಲಾಗುತ್ತದೆ. ಹೀಗಾಗಿ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

ಈ ಆಹಾರಗಳು ಪ್ರದೇಶವನ್ನು ಲೆಕ್ಕಿಸದೆ ಅನೇಕ ಭಾರತೀಯರಿಗೆ ಪ್ರೋಟೀನ್‌ನ ಪರಿಣಾಮಕಾರಿ ಮೂಲಗಳಾಗಿವೆ. ಹೆಚ್ಚಾಗಿ ಬೇಳೆಕಾಳುಗಳನ್ನು ಇವುಗಳನ್ನು ಮಧ್ಯಾಹ್ನ ಹಾಗೂ ರಾತ್ರಿಯ ಊಟ, ಕೆಲ ಬಾರಿ ಬೆಳಿಗಿನ ಉಪಾಹಾರಕ್ಕೂ ಇದನ್ನು ಬಳಕೆ ಮಾಡಲಾಗುತ್ತದೆ.

ಆದರೆ ತರಕಾರಿ ಹಣದುಬ್ಬರವು ತಾತ್ಕಾಲಿಕ ಎಂದು ಊಹಿಸಲಾಗಿದೆ, ಆದರೆ ಹಣದುಬ್ಬರ ಶಾಶ್ವತವಾಗಿರಬಹುದು. ಬೇಳೆಕಾಳುಗಳು ಆಹಾರ ಹಣದುಬ್ಬರದ ಬುಟ್ಟಿಯ 6% ರಷ್ಟಿವೆ ಮತ್ತು ಅವುಗಳ ಬೆಲೆಯಲ್ಲಿನ ಯಾವುದೇ ಹೆಚ್ಚಳವು ಮನೆಯ ಬಜೆಟ್‌ಗಳ ಮೇಲೆ ಪರಿಣಾಮ ಬೀರುತ್ತದೆ.

ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಪ್ರಕಾರ ಸಿಪಿಐ 6.6% ಮತ್ತು ಬೇಳೆಕಾಳುಗಳ ಹಣದುಬ್ಬರವು ಮೇ ತಿಂಗಳಲ್ಲಿ 5.8% ಆಗಿತ್ತು. ಸಿಪಿಐ ಜೂನ್‌ನಲ್ಲಿ ದ್ವಿದಳ ಹಣದುಬ್ಬರದಲ್ಲಿ 10.58% ಹೆಚ್ಚಳವನ್ನು ತೋರಿಸಿದೆ. ತಜ್ಞರ ರಾಯಿಟರ್ಸ್ ಸಮೀಕ್ಷೆಯ ಪ್ರಕಾರ, ಭಾರತದಲ್ಲಿನ ಆಹಾರ ಬೆಲೆಗಳು ಜೂನ್‌ನಲ್ಲಿ ಭಾರತದ ಹಣದುಬ್ಬರವು ನಾಲ್ಕು ತಿಂಗಳ ಕುಸಿತವನ್ನು ಕೊನೆಗೊಳಿಸಲು ಕಾರಣವಾಗಬಹುದು.

ಭಾರತದ ರಿಟೇಲ್ ಹಣದುಬ್ಬರವು ಜೂನ್ ತಿಂಗಳಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಮೇ ತಿಂಗಳಿನಲ್ಲಿ ಶೇಕಡ 4.31ರಷ್ಟಿದ್ದ ಹಣದುಬ್ಬರವು ಜೂನ್ ವೇಳೆಗೆ ಶೇಕಡ 4.81ರ ಮಟ್ಟಕ್ಕೆ ಏರಿಕೆಯಾಗಿದೆ.

English summary

After the increase in the price of tomatoes, the price of pulses has also increased, which has worried the consumers.

Story first published: Friday, July 14, 2023, 15:12 [IST]

Source link