ಟೈಟಾನಿಕ್ ಹಡಗಿನ ಅವಶೇಷದ ಒಳಗೆ ದೆವ್ವಗಳ ಕಾಟ? ಹಡಗು ನೋಡಲು ಹೋದವರು ಸತ್ತೇ ಹೋದರಾ? | Titanic Submarine may be running out of Oxygen after several days

International

oi-Malathesha M

|

Google Oneindia Kannada News

ಕೆನಡಾ: ಟೈಟಾನಿಕ್.. ಈ ಹೆಸರು ಕಿವಿಗೆ ಬಿದ್ದರೆ ಸಾಕು ಇತಿಹಾಸದ ರೋಮಾಂಚನಕಾರಿ ಸನ್ನಿವೇಶಗಳು ಕಣ್ಣೆದುರಿಗೆ ಬಂದು ಬಿಡುತ್ತವೆ. ದುರಂತ ಅಂತ್ಯ ಕಂಡ ಬೃಹತ್ ಹಡಗು ಟೈಟಾನಿಕ್ ಸಾವಿರಾರು ಜನರ ಸಾವಿಗೆ ಕಾರಣವಾಗಿತ್ತು. ಮುಳುಗಿ 100 ವರ್ಷ ಕಳೆದರೂ ಟೈಟಾನಿಕ್ ಜನರ ಮನಸ್ಸಿನಿಂದ ಮರೆಯಾಗಿಲ್ಲ. ಆದ್ರೆ ಇಂಥ ಹಡಗಿನ ಒಳಗೆ ದೆವ್ವಗಳು ಇವೆಯಾ? ಈ ಅನುಮಾನಕ್ಕೆ ಕಾರಣವಾಗಿದ್ದು ಅದೊಂದು ಘಟನೆ.

ಹೌದು, ಕೆನಡಾ ದೇಶದ ನ್ಯೂಫೌಂಡ್‌ಲ್ಯಾಂಡ್‌ ಕರಾವಳಿಯಿಂದ ಸುಮಾರು 400 ಮೈಲು ದೂರದಲ್ಲಿ ಬೃಹತ್ ಹಡಗು ಟೈಟಾನಿಕ್‌ನ ಅವಶೇಷಗಳು ಬಿದ್ದಿವೆ. 100 ವರ್ಷಕ್ಕೂ ಹೆಚ್ಚು ಕಾಲ ಸಮುದ್ರದ 12,600 ಅಡಿ ಆಳದಲ್ಲಿ ಟೈಟಾನಿಕ್ ಅವಶೇಷಗಳು ಬಿದ್ದಿವೆ. ಏಪ್ರಿಲ್ 14, 1912ರಂದು ಟೈಟಾನಿಕ್ ಹಡಗು ಅಪಘಾತಕ್ಕೆ ತುತ್ತಾಗಿತ್ತು. ಬೃಹತ್ ಮಂಜುಗಡ್ಡೆಗೆ ಟೈಟಾನಿಕ್ ಅಪ್ಪಳಿಸಿದ್ದ ಕಾರಣ 1500ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಹಾಗೇ 700 ಜನರು ಮಾತ್ರ ಜೀವ ಉಳಿಸಿಕೊಳ್ಳಲು ಸಾಧ್ಯವಾಗಿತ್ತು. 1982ರ ತನಕ ಟೈಟಾನಿಕ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರಲಿಲ್ಲ, ಆದರೆ 1982ರಲ್ಲಿ ಟೈಟಾನಿಕ್ ಹಡಗಿನ ಅವಶೇಷಗಳು ಪತ್ತೆಯಾಗಿದ್ದವು.

Titanic Submarine may be running out of Oxygen after several days

ಟೈಟಾನಿಕ್ ಹಡಗಿನಲ್ಲಿ ದೆವ್ವದ ಕಾಟ?

ಅಂದಹಾಗೆ ಇಂತಹದ್ದೊಂದು ಮಾತು ಎಲ್ಲೆಡೆ ಹರಿದಾಡುತ್ತಿದೆ. ಟೈಟಾನಿಕ್ ಹಡಗಿನಲ್ಲಿ ದೆವ್ವದ ಕಾಟ ಇದೆ ಅನ್ನೋ ಮಾತುಗಳು ಆಗಿಂದಾಗೆ ಕೇಳಿಬರುತ್ತವೆ. ಇದೀಗ ಮತ್ತೊಂದು ಘಟನೆ ಅದಕ್ಕೆ ಪುಷ್ಟಿ ನೀಡುತ್ತಿದೆ, ಹಾಗೇ ದೆವ್ವದ ಬಗ್ಗೆ ಇರುವ ಕಥೆಗಳು ಇದೀಗ ಮತ್ತೆ ಹುಟ್ಟಿಕೊಂಡಿವೆ. ಅಷ್ಟಕ್ಕೂ 12,600 ಅಡಿ ಆಳದಲ್ಲಿ ಟೈಟಾನಿಕ್‌ನ ಅವಶೇಷ ತೋರಿಸಲು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಪ್ರವಾಸಿ ಜಲಾಂತರ್ಗಾಮಿ ಸಂಪರ್ಕ ಕಳೆದುಕೊಂಡಿದೆ. ಭಾನುವಾರ ಬೆಳಗ್ಗೆ ಈ ಪುಟಾಣಿ ಜಲಾಂತರ್ಗಾಮಿ ಮುಳುಗಿದೆ ಎನ್ನಲಾಗುತ್ತಿದೆ. ಸುಮಾರು 1 ಗಂಟೆ 45 ನಿಮಿಷದ ನಂತರ ಟೈಟಾನಿಕ್ ಪೋಲಾರ್ ಪ್ರಿನ್ಸ್‌ ಹಡಗಿನೊಂದಿಗೆ ಸಂಪರ್ಕ ಕಳೆದುಕೊಂಡಿದೆ. ಹೀಗಾಗಿ ಇದು ದೆವ್ವದ ಕಾಟ ಅಂತಿದ್ದಾರೆ ಜನ.

ಉಸಿರಾಡಲು ಗಾಳಿ ಇಲ್ಲದೆ ಸತ್ತೇ ಹೋದರಾ?

ಕರುಣಾಜನಕ ಘಟನೆಯಲ್ಲಿ ಟೈಟಾನಿಕ್ ಅವಶೇಷ ನೋಡಲು ಹೋದವರು ಆಮ್ಲಜನಕದ ಕೊರತೆಯಿಂದ ಸತ್ತು ಹೋದ್ರಾ? ಅನ್ನೋ ಡೌಟ್ ಕಾಡುತ್ತಿದೆ. ಯಾಕಂದ್ರೆ ನಾಪತ್ತೆಯಾದ ಹಡಗಿನಲ್ಲಿ ಆಮ್ಲಜನಕ (oxygen) ಖಾಲಿ ಆಗಿದೆ. ಮುಳುಗಡೆ ಆಗಿರುವ ಜಲಾಂತರ್ಗಾಮಿ ಒಳಗೆ ಉಸಿರಾಡಲು ಇಂದು ಸಂಜೆ 7.15ರ ತನಕ ಸಾಕಾಗುವಷ್ಟು ಆಮ್ಲಜನಕ ಬಾಕಿ ಇತ್ತು. ಭಾನುವಾರ ಮಧ್ಯಾಹ್ನ ಕಾಣೆಯಾಗಿರುವ ಜಲಾಂತರ್ಗಾಮಿ ಒಳಗೆ ಈಗ ಆಕ್ಸಿಜೆನ್ ಇಲ್ಲವೆಂಬ ಮಾತು ಕೇಳಿಬರುತ್ತಿದೆ. ಗರಿಷ್ಠ 96 ಗಂಟೆಗಳ ತುರ್ತು ಆಮ್ಲಜನಕವನ್ನ ಜಲಾಂತರ್ಗಾಮಿಯ ಒಳಗೆ ಅಳವಡಿಸಲಾಗಿತ್ತು. ಈಗ ನೋಡಿದರೆ ಪರಿಸ್ಥಿತಿ ಕೈಮೀರಿದಂತೆ ಕಾಣುತ್ತಿದೆ.

ಪವಾಡ ನಡೆದರೆ ಜೀವ ಉಳಿಸಬಹುದು!

ಈಗ ನಾಪತ್ತೆಯಾಗಿರುವ ಸಬ್‌ಮರೀನ್ ಒಳಗೆ ಬ್ರಿಟಿಷ್ ಬಿಲಿಯನೇರ್ ಪರಿಶೋಧಕ ಹಮೀಶ್ ಹಾರ್ಡಿಂಗ್ ಹಾಗೂ ಫ್ರೆಂಚ್ ಡೈವರ್ ಪಾಲ್-ಹೆನ್ರಿ ನಾರ್ಜಿಯೊಲೆಟ್ ಸೇರಿದಂತೆ ಪಾಕಿಸ್ತಾನ ಮೂಲದ ಉದ್ಯಮಿ ಶಹಜಾದಾ ದಾವೂದ್ ಹಾಗೂ ಅವರ 19 ವರ್ಷದ ಮಗ ಸುಲೇಮಾನ್ ದಾವೂದ್ ಇದ್ದಾರೆ ಎನ್ನಲಾಗಿದೆ. ಈಗಿನ ಪರಿಸ್ಥಿತಿ ಗಮನಿಸುತ್ತಿರುವ ತಜ್ಞರು ಆಘಾತಕ್ಕೆ ಒಳಗಾಗಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಪವಾಡ ನಡೆಯಬೇಕು. ಪವಾಡ ಸಂಭವಿಸಲೂ ಬಹುದು ಎಂದು ಸಬ್ ಮರೀನ್ ಪೈಲಟ್ ಸ್ನೇಹಿತ, ಸಮುದ್ರ ಪರಿಶೋಧಕ ಡಾ.ಡೇವಿಡ್ ಗ್ಯಾಲೊ ಹೇಳಿದ್ದಾರೆ. ಹೀಗಾಗಿ ನಾಪತ್ತೆಯಾದ ಜಲಾಂತರ್ಗಾಮಿಗಾಗಿ ನಿರಂತರವಾಗಿ ಹುಡುಕಾಟ ಸಾಗಿದೆ.

ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ. ಸಮುದ್ರದ ಒಳಗೆ ಮುಳುಗಿ ಹೋಗಿರುವ ಪ್ರವಾಸಿಗರ ರಕ್ಷಣೆಗೆ ಕಾರ್ಯಾಚರಣೆ ನಡೆಯುತ್ತಿದೆ. ಆಗಾಗ ಸಮುದ್ರದ ಆಳದಿಂದ ಶಬ್ಧ ಕೇಳಿಬರುತ್ತಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಆದರೆ ಸುಳಿವು ಸಿಗದ ಕಾರಣ ಪರದಾಟ ಮುಂದುವರಿದಿದೆ. ಈಗ ತಜ್ಞರೇ ಹೇಳುತ್ತಿರುವಂತೆ ಸಮುದ್ರದ ಒಳಗೆ ಹೋದವರು ಬದುಕಿ ಬರಬೇಕು ಎಂದರೆ ಪವಾಡ ನಡೆಯಬೇಕಿದೆ ಅಷ್ಟೇ! ಇಷ್ಟೆಲ್ಲದರ ನಡುವೆ ದೆವ್ವದ ಕಥೆ ಕೂಡ ಜೋರಾಗಿದ್ದು, ಟೈಟಾನಿಕ್ ಹಡಗಿನಲ್ಲಿ ದೆವ್ವಗಳು ಇವೆ ಅನ್ನೋ ವದಂತಿ ಕೂಡ ಸಖತ್ ಸದ್ದು ಮಾಡುತ್ತಿದೆ.

English summary

Titanic Submarine may be running out of Oxygen after several days.

Story first published: Thursday, June 22, 2023, 20:27 [IST]

Source link