‘ಟೈಟಾನಿಕ್’ ಅವಶೇಷ ವೀಕ್ಷಿಸಲು ಅಟ್ಲಾಂಟಿಕ್ ಸಾಗರಕ್ಕೆ ಜಿಗಿದ ಶ್ರೀಮಂತ ಪ್ರವಾಸಿಗರು ನಾಪತ್ತೆ | The Submarine That Took Tourists To See The ‘Titanic’ Wreck Has Gone Missing

International

oi-Shankrappa Parangi

|

Google Oneindia Kannada News

ಬೆಂಗಳೂರು, ಜೂನ್ 20: ಶತಮಾನಗಳ ಹಿಂದೆ ಮುಳುಗಡೆಯಾಗಿದ್ದ ಪ್ರಖ್ಯಾತ ‘ಟೈಟಾನಿಕ್’ (Titanic) ಹಡಗಿನ ಅವಶೇಷಗಳನ್ನು ನೋಡಲು ತೆರಳಿದ್ದ ಶ್ರೀಮಂತ ಪ್ರವಾಸಿಗರಿದ್ದ ಸಬ್‌ಮರೀನ್ (ಜಲಂತರ್ಗಾಮಿ)ನಾಪತ್ತೆಯಾದ ಘಟನೆ ಇತ್ತೀಚೆಗೆ ನಡೆದಿದೆ.

ಕೆನಡಾದ ಕರಾವಳಿಯಿಂದ ಶ್ರೀಮಂತ ಪ್ರವಾಸಿಗರು ಟೈಟಾನಿಕ್ ಹಡಗಿನ ಅವಶೇಷಗಳಿರುವ ಆಳಕ್ಕೆ ಕರೆದೊಯ್ಯತ್ತಿದ್ದ ಜಲಂತರ್ಗಾಮಿ ನಾಪತ್ತೆಯಾಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕೆನಡಾ ಮತ್ತು ಅಮೆರಿಕಾ ಹಡಗುಗಳು, ವಿಮಾನಗಳು ಪತ್ತೆ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಯುಎಸ್‌ ಕೋಸ್ಟ್‌ ಗಾರ್ಡ್ ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದಾರೆ.

The Submarine That Took Tourists To See The Titanic Wreck Has Gone Missing

ಆಳಸಾಗರದೊಳಗೆ ಕಾಣೆಯಾಗಿರುವ ಈ ಜಲಂತರ್ಗಾಮಿಯಲ್ಲಿ ಒಬ್ಬ ಪೈಲಟ್ ಮತ್ತು ನಾಲ್ವರು ಪ್ರಯಾಣಿಕರಿದ್ದರು. ಅವರ ಬಳಿ ಒಟ್ಟು 96 ಗಂಟೆಗಳ ಕಾಲ ಉಸಿರಾಡಲು ಸಾಕಾಗುವಷ್ಟು ಆಮ್ಲಜನಕ ಮಾತ್ರವೇ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಪರ್ಕ ಕಡಿತ ಬಳಿಕ ಹುಡುಕಾಟ

ಪ್ರವಾಸಿಗರನ್ನು ಕರೆದೊಯ್ದ ಜಲಂತರ್ಗಾಮಿ ನೌಕೆ ನೊಂದಿಗಿನ ಸಂಪರ್ಕ ಕಡಿತಗೊಂಡಿದೆ. ಅದು ಸಾಗರದ ಆಳದಲ್ಲಿಯೇ ಇದೆಯೋ ಅಥವಾ ಹೊರ ಬಂದು ತೇಲುತ್ತಿದೆಯೋ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಅಗತ್ಯ ಸಿಬ್ಬಂದಿಯೊಂದಿಗೆ ಪ್ರವಾಸಿಗರ ಹುಡುಕಾಟಕ್ಕೆ ಸರ್ವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಮಂಗಳವಾರದಿಂದ ರಾತ್ರಿ ಇಡಿ ಕೋಸ್ಟ್‌ ಗಾರ್ಡ್ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ವಿಮಾನ ಮತ್ತು ಹಡಗುಗಳು ಅಮೆರಿಕಾ ಕರಾವಳಿಯ ಕೇಪ್ ಗಾರ್ಡ್ ಪೂರ್ವ ಭಾಗದಲ್ಲಿ ಸರಿಸುಮಾರು 1,450 ಕಿಲೋ ಮೀಟರ್ ಪ್ರದೇಶದಲ್ಲಿ ಹುಡಕಾಟ ಮುಂದುವರಿಸಿದ್ದಾರೆ.

The Submarine That Took Tourists To See The Titanic Wreck Has Gone Missing

ತಂತ್ರಜ್ಞಾನಗಳ ಸಹಾಯದಿಂದ 1300 ಅಡಿಗಳಷ್ಟು ಸಮುದ್ರದ ಆಳವರೆಗೆ ಪತ್ತೆ ಕಾರ್ಯ ನಡೆಸಲಾಗಿದೆ. ಇಷ್ಟು ಆಳಕ್ಕೆ ಇಳಿದು ಹುಡುಕಿದರೂ ಸಿಗದ ಜಲಂತರ್ಗಾಮಿ ಪತ್ತೆ ಸವಾಲಾಗಿದೆ ಎಂದು ಯುಎಸ್ ಕೋಸ್ಟ್ ಗಾರ್ಡ್ ರಿಯರ್ ಅಡ್ಮಿರಲ್ ಜಾನ್ ಅವರು ಹೇಳಿದರು.

ಶಬ್ದ ಹೊರಸೂಸುವ ಯಂತ್ರ ಹೊಂದಿತ್ತೇ ಜಲಂತರ್ಗಾಮಿ?

ನೀರಿನ ಒಳಗೆ ಹೋಗಬಹುದಾದ ಸಬ್‌ಮರಿನ್ ವಾಹನಗಳಿಗೆ ಅಕೌಸ್ಟಿಕ್ ಸಾಧನ ಅಳವಡಿಸಲಾಗಿರುತ್ತದೆ. ಇದಕ್ಕೆ ಪಿಂಗರ್ ಎಂದು ಕರೆಯಲಾಗುತ್ತದೆ. ಇದು ನೀರಿನ ಅಡಿಯಲ್ಲಿ ಸಿಲುಕಿಕೊಂಡಾಗ ಪತ್ತೆಹಚ್ಚಲು ಅನುಕೂಲವಾಗುವಂತೆ ಅದು ಶಬ್ದಗಳನ್ನು ಹೊರಸೂಸುತ್ತದೆ. ಆದರೆ ಈ ಬಗ್ಗೆ ಜಲಂತರ್ಗಾಮಿ ಅಂತಹ ಸಾಧನ ಹೊಂದಿದೆಯೇ ಎಂಬುದು ತಿಳಿಯಬೇಕಿದೆ.

ಪ್ರಯಾಣ ಆರಂಭಿಸಿದ ಜಲಂತರ್ಗಾಮಿ ಸುಮಾರು ಒಂದು ಗಂಟೆ ಮತ್ತು 45 ನಿಮಿಷಗಳ ಅಂತರದಲ್ಲಿ ಟೈಟಾನಿಕ್ ಹಡಗಿನ ಅವಶೇಷಗಳು ಇರುವ ಸಮುದ್ರದ ಆಳಕ್ಕೆ ತೆರಳಿದೆ. ಬಳಿಕ ಎರಡು ಕಾಲು ಗಂಟೆ ಅವಧಿ ಆಗುವ ಹೊತ್ತಿಗೆ ಅದು ಸಂಪರ್ಕ ಕಳೆದುಕೊಂಡಿದೆ. ಹೊರಗಿನಿಂದ ಅಧಿಕಾರಿಗಳು ಎಷ್ಟೇ ಪ್ರಯತ್ನಿಸಿದರು ಸಬ್‌ಮರಿನ್ ಇದ್ದ ಪ್ರವಾಸಿಗರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ ಎಂದು ವರದಿಯಾಗಿದೆ.

English summary

A submarine carrying tourists who had gone to see the remains of the ‘Titanic’ has gone missing, Searching by Authorities.

Story first published: Tuesday, June 20, 2023, 22:51 [IST]

Source link