ಚೊಚ್ಚಲ ಫೈನಲ್ ಪಂದ್ಯವಾಡಿದ ರುತುಜಾ, ಅನುಭವಿ ಬೋಪಣ್ಣ ಜೊತೆಗೂಡಿ ರೋಚಕ ಪೈಪೋಟಿ ನೀಡಿದರು. ಭಾರತವು ಆರಂಭಿಕ ಸೆಟ್‌ನಲ್ಲಿ ಕೇವಲ ಎರಡು ಪಾಯಿಂಟ್ ಗಳಿಸಲಷ್ಟೇ ಸಾಧ್ಯವಾಯ್ತು. ಅರ್ಧ ಗಂಟೆಯ ಹೋರಾಟದಲ್ಲಿ 2-6ರಿಂದ ಮೊದಲು ಹೋರಾಟದಲ್ಲಿ ಸೋತಿತು. ಅಲ್ಲಿಗೆ ಭಾರತೀಯರು ಪಂದ್ಯ ಕೈಚೆಲ್ಲಲಿಲ್ಲ. ಎರಡನೇ ಸೆಟ್‌ನಲ್ಲಿ ಪುಟಿದೆದ್ದು, ಆಕ್ರೋಶಭರಿತ ಆಟವಾಡಿದರು. ಅಂತಿಮವಾಗಿ ಎರಡನೇ ಸೆಟ್‌ನಲ್ಲಿ ಮೇಲುಗೈ ಸಾಧಿಸಿದ ಭಾರತವು, 6-3ರಿಂದ ಗೆದ್ದು ಟೈ ಬ್ರೇಕರ್‌ಗೆ ಪ್ರೇರೇಪಿಸಿತು. ಅಂತಿಮ ಹಣಾಹಣಿಯಲ್ಲಿ ರೋಚಕವಾಗಿ ಗೆದ್ದ ಭಾರತ ಚಿನ್ನಕ್ಕೆ ಮುತ್ತಿಟ್ಟಿತು.