ವರುಣ್ ಚಕ್ರವರ್ತಿ ಎಂದರೆ ಇವತ್ತು ಎಲ್ಲರಿಗೂ ಗೊತ್ತು . ಚಾಂಪಿಯನ್ ಟ್ರೋಫಿ ಗೆಲ್ಲುವಲ್ಲಿ ಈತನ ಯೋಗಾಧಾನ ಬಹಳವಿದೆ. ಈತನ ಕಥೆಯೂ ಅಷ್ಟೇ ರೋಚಕವಿದೆ. ವರುಣ್ ಚಕ್ರವರ್ತಿಗೆ ಕ್ರಿಕೆಟ್ ಎಂದರೆ ಪ್ರಾಣ. ಆದರೆ ಆತ ಅಂಡರ್ 13, 15, 19 ಯಾವುದರಲ್ಲೂ ಸೆಲೆಕ್ಟ್ ಆಗುವುದಿಲ್ಲ. ಸಿನಿಮಾದಲ್ಲೂ ಸಣ್ಣಪುಟ್ಟ ರೋಲ್ ಮಾಡುತ್ತಾರೆ. ಅಲ್ಲೂ ಕೂಡ ಹೇಳಿಕೊಳ್ಳುವ ಬ್ರೇಕ್ ಸಿಕ್ಕುವುದಿಲ್ಲ. ಆರ್ಕಿಟೆಕ್ಟ್ ವಿದ್ಯಾಭ್ಯಾಸ ಮಾಡುತ್ತಾರೆ. ಅಲ್ಲಿ ಕೂಡ 6 ವರ್ಷ ಕಳೆದು ಹೋಗುತ್ತದೆ. ಅವರಿಗೆ ಅದು ಇಷ್ಟವಾಗುವುದಿಲ್ಲ. ಅವರಪ್ಪನಿಗೆ ಕರೆ ಮಾಡಿ ಕೆಲಸ ಬಿಡುತ್ತಿದ್ದೇನೆ ಎಂದು ಹೇಳಿರುತ್ತಾರೆ.