ಟೆನಿಸ್‌ ದಿಗ್ಗಜ ರೋಹನ್ ಬೋಪಣ್ಣ‌ ಮತ್ತೊಂದು ಸಾಧನೆ; ಈ ವಿಶ್ವದಾಖಲೆ ನಿರ್ಮಿಸಿದ ವಿಶ್ವದ ಅತ್ಯಂತ ಹಿರಿಯ ಆಟಗಾರ

ಆಸ್ಟ್ರೇಲಿಯಾ ಓಪನ್‌ ಗೆಲುವು

ಕಳೆದ ವರ್ಷವಷ್ಟೇ ಬೋಪ್ಪಣ್ಣ ಆಸ್ಟ್ರೇಲಿಯಾದ ಮ್ಯಾಟ್ ಈಡನ್ ಅವರೊಂದಿಗೆ 2024ರ ಮಿಯಾಮಿ ಓಪನ್ ಗೆದ್ದಿದ್ದರು. ಆ ನಂತರ ಎಟಿಪಿ ಮಾಸ್ಟರ್ಸ್ 1000 ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. 2024ರ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ ಕಿರೀಟವನ್ನು ಗೆದ್ದ ನಂತರ, ಭಾರತೀಯ ಟೆನಿಸ್‌ ದಿಗ್ಗಜ ಓಪನ್ ಯುಗದಲ್ಲಿ ಅತ್ಯಂತ ಹಿರಿಯ ಗ್ರ್ಯಾಂಡ್ ಸ್ಲ್ಯಾಮ್ ವಿಜೇತ ಎಂಬ ದಾಖಲೆಯನ್ನು ಸಹ ಹೊಂದಿದ್ದಾರೆ. ಮೆಲ್ಬೋರ್ನ್ ಪಾರ್ಕ್‌ನಲ್ಲಿ ಬೋಪಣ್ಣ ಅವರ ಐತಿಹಾಸಿಕ ವಿಜಯವು, ಭಾರತೀಯರಿಗೆ ಖುಷಿಯ ಕ್ಷಣವಾಗಿತ್ತು. ಪುರುಷರ ಟೆನಿಸ್‌ನಲ್ಲಿ ಅಗ್ರ ಶ್ರೇಯಾಂಕ ಪಡೆದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.

Source link