ಟಿ20 ಇತಿಹಾಸದಲ್ಲಿ ಅತ್ಯಧಿಕ ಮೊತ್ತ, ಇನ್ನಿಂಗ್ಸ್​ನಲ್ಲಿ ಅತಿ ಹೆಚ್ಚು ಸಿಕ್ಸರ್​; ಇದು ಬರೋಡಾ ತಂಡ ನಡೆಸಿದ ದಾಖಲೆಗಳ ದಂಡಯಾತ್ರೆ

ಬರೋಡಾ ಬ್ಯಾಟರ್ಸ್ ಅಬ್ಬರ

ಮೊದಲು ಬ್ಯಾಟಿಂಗ್ ನಡೆಸಿದ ಬರೋಡಾ, ಭರ್ಜರಿ ಆರಂಭ ಪಡೆಯಿತು. ಟಾಪ್​-5 ಬ್ಯಾಟರ್​​ಗಳ ಪೈಕಿ ಮೂವರು ಅರ್ಧಶತಕ, ಒಬ್ಬರು ಶತಕ, ಮತ್ತೊಬ್ಬರು 40+ ಸ್ಕೋರ್​ ಮಾಡಿದ್ದಾರೆ. ಶಶ್ವಾಂತ್ ರಾವತ್ 16 ಎಸೆತಗಳಲ್ಲಿ 43 ರನ್, ಅಭಿಮನ್ಯು ಸಿಂಗ್ 17 ಎಸೆತಗಳಲ್ಲಿ 53 ರನ್, ಶಿವಾಲಿಕ್ ಶರ್ಮಾ 17 ಎಸೆತಗಳಲ್ಲಿ 53 ರನ್, ವಿ ಸೋಲಂಕಿ 16 ಎಸೆತಗಳಲ್ಲಿ 50 ರನ್ ಸಿಡಿಸಿದರೆ, ಭಾನು ಪನಿಯಾ ಅವರು ಕೇವಲ 51 ಎಸೆತಗಳಲ್ಲಿ 134 ರನ್ ಗಳಿಸಿ ಔಟಾಗದೆ ಉಳಿದರು. ಅವರ ಇನ್ನಿಂಗ್ಸ್​ನಲ್ಲಿ 15 ಸಿಕ್ಸರ್​ಗಳಿವೆ. ಇನ್ನಿಂಗ್ಸ್​​​ನಲ್ಲಿ 18 ಬೌಂಡರಿ, 37 ಸಿಕ್ಸರ್ ಸಿಡಿಸಿದರು. ಇವರೆಲ್ಲರ ಆರ್ಭಟದಿಂದ ಬೃಹತ್ ಮೊತ್ತವನ್ನು ದಾಖಲಿಸಲು ನೆರವಾಯಿತು. ಈ ಐವರ ಪೈಕಿ ಮೂವರೂ 300 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್​​ನಲ್ಲಿ ರನ್ ಗಳಿಸಿದ್ದರು. ಬರೋಡಾ ಪವರ್ ಪ್ಲೇನಲ್ಲಿ 100, 11ನೇ ಓವರ್ ನಲ್ಲಿ 200 ಹಾಗೂ 18ನೇ ಓವರ್​​ನಲ್ಲಿ 300 ರನ್ ಗಳಿಸಿತು.

Source link