Telugu
oi-Muralidhar S
ಪೌರಾಣಿಕ
ಸಿನಿಮಾ
‘ಆದಿಪುರುಷ್’
ರಿಲೀಸ್
ಆದ
ಮೊದಲ
ದಿನವೇ
ದಾಖಲೆ
ಕಲೆಕ್ಷನ್
ಮಾಡಿತ್ತು.
ಮೊದಲ
ಮೂರು
ದಿನ
ಸಿನಿಮಾದ
ಕಲೆಕ್ಷನ್
ಸೂಪರ್
ಆಗಿಯೇ
ಇತ್ತು.
ಆದರೆ,
ಮೊದಲ
ದಿನವೇ
ಈ
ಸಿನಿಮಾಗೆ
ನೆಗೆಟಿವ್
ರಿವ್ಯೂ
ಬಂದಿತ್ತು.
ಅಲ್ಲಿಂದ
ದಿನದಿಂದ
ದಿನಕ್ಕೆ
ಕಲೆಕ್ಷನ್‌ನಲ್ಲಿ
ಡ್ರಾಪ್
ಆಗುತ್ತಲೇ
ಇದೆ.
ದೇಶಾದ್ಯಂತ
‘ಆದಿಪುರುಷ್’
ಸಿನಿಮಾ
ವಿರುದ್ಧ
ಆಕ್ರೋಶ
ವ್ಯಕ್ತವಾಗುತ್ತಿದೆ.
ಕೆಲವರು
ಸಿನಿಮಾವನ್ನು
ಬ್ಯಾನ್
ಮಾಡುವಂತೆ
ಕೇಂದ್ರ
ಸರ್ಕಾರಕ್ಕೆ
ಒತ್ತಡ
ಹೇರುತ್ತಿದ್ದಾರೆ.
ಕೆಲವೆಡೆ
ಸಿನಿಮಾ
ವಿರುದ್ಧ
ಆಕ್ರೋಶ
ವ್ಯಕ್ತವಾಗುತ್ತಿದೆ.
ಇಷ್ಟೆಲ್ಲ
ವಿವಾದಗಳಿಂದ
ಸುತ್ತಿಕೊಂಡಿರೋ
‘ಆದಿಪುರುಷ್’
ಬಾಕ್ಸಾಫೀಸ್‌ನಲ್ಲಿ
ಮುಳುಗುತ್ತಲೇ
ಇದೆ.
ಆದಿಪುರುಷ್
ಅದ್ಭುತ
ಕಲೆಕ್ಷನ್
ಅಂತ
ಕಂಡಿದ್ದು
ಮೊದಲ
ಮೂರು
ದಿನ
ಮಾತ್ರ.
ಇನ್ನು
ಉಳಿದ
ನಾಲ್ಕು
ದಿನಗಳ
ಗಳಿಕೆ
ಅಷ್ಟಕ್ಕಷ್ಟೇ..
ಅದರಲ್ಲೂ
7ನೇ
ದಿನವಂತೂ
(ಜೂನ್
22)
ತೀರಾ
ಕಡಿಮೆ
ಕಲೆಕ್ಷನ್
ಆಗಿದೆ.
ಹಾಗಿದ್ರೆ,
7ನೇ
ದಿನದ
ಕಲೆಕ್ಷನ್
ಎಷ್ಟು?
ಥಿಯೇಟರ್‌ಗೆ
ಎಷ್ಟು
ಪರ್ಸೆಂಟ್
ಜನ
ಬಂದಿದ್ರು?
ಭಾರತದ
ಕಲೆಕ್ಷನ್
ಎಷ್ಟು?
ವಿಶ್ವದಾದ್ಯಂತ
ಕಲೆಕ್ಷನ್
ಎಷ್ಟು?
ಅನ್ನೋದನ್ನು
ತಿಳಿಯಲು
ಮುಂದೆ
ಓದಿ..
ಟಿಕೆಟ್
ಬೆಲೆ
150ಕ್ಕೆ
ಇಳಿಕೆ
‘ಆದಿಪುರುಷ್’
ಸಿನಿಮಾ
ವಿವಾದಕ್ಕೆ
ಸಿಕ್ಕಿಕೊಳ್ಳುತ್ತಿದ್ದಂತೆ
ಚಿತ್ರತಂಡ
ಎಚ್ಚೆತ್ತುಕೊಂಡಿತ್ತು.
500
ರಿಂದ
600
ಕೋಟಿ
ರೂ.
ಬಜೆಟ್‌ನಲ್ಲಿ
ನಿರ್ಮಾಣಗೊಂಡಿರುವ
ಈ
ಸಿನಿಮಾ
ಬಜೆಟ್
ರಿಕವರಿ
ಮಾಡುವುದಕ್ಕೆ
ಹರಸಾಹಸ
ಪಡುತ್ತಿದೆ.
ಹೀಗಾಗಿ
ಹಿಂದಿ
ಬೆಲ್ಟ್‌ಗಳಲ್ಲಿ
ಈ
ಸಿನಿಮಾದ
ಟಿಕೆಟ್
ಬೆಲೆಯನ್ನು
150
ರೂ.ಗೆ
ಇಳಿಸಲಾಗಿದೆ.
ಇಟಲಿ
ಬಂಗ್ಲೆಯನ್ನು
ಬಾಡಿಗೆ
ಬಿಟ್ಟ
ಪ್ರಭಾಸ್:
ತಿಂಗಳ
ಬಾಡಿಗೆಯಲ್ಲಿ
10
ವರ್ಷ
ಆರಾಮಾಗಿ
ಸಾಗುತ್ತೆ
ಜೀವನ
ಹೀಗಿದ್ದರೂ,
‘ಆದಿಪುರುಷ್’
ಸಿನಿಮಾ
ನೋಡುವುದಕ್ಕೆ
ಬರುವವರ
ಸಂಖ್ಯೆ
ಏನು
ಹೆಚ್ಚಾಗಿಲ್ಲ.
ಪ್ರಭಾಸ್
ಹಾಗೂ
ಓಂ
ರಾವುತ್
ಸಿನಿಮಾವನ್ನು
ನೇರವಾಗಿ
ಪ್ರೇಕ್ಷಕರು
ತಿರಸ್ಕರಿಸಿದ್ದಾರೆ.
ಹಿಂದಿ
ಅಷ್ಟೇ
ಅಲ್ಲ,
ತೆಲುಗು,
ತಮಿಳು,
ಕನ್ನಡದಲ್ಲೂ
ಈ
ಸಿನಿಮಾ
ನೋಡುವುದಕ್ಕೆ
ಆಸಕ್ತಿ
ತೋರುತ್ತಿಲ್ಲ.
ಹೀಗಾಗಿ
7ನೇ
ದಿನ
ಅತೀ
ಕಡಿಮೆ
ಗಳಿಕೆಯನ್ನು
ದಾಖಲಿಸಿದೆ.
‘ಆದಿಪುರುಷ್’
7ನೇ
ದಿನದ
ಕಲೆಕ್ಷನ್
ಎಷ್ಟು?
‘ಆದಿಪುರುಷ್’
ಸಿನಿಮಾ
ಬಾಕ್ಸಾಫೀಸ್
ಕಲೆಕ್ಷನ್
6ನೇ
ದಿನಕ್ಕೆ
ಹೋಲಿಸಿದರೆ,
7ನೇ
ದಿನ
ಮತ್ತಷ್ಟು
ಡ್ರಾಪ್
ಆಗಿದೆ.
ನಿನ್ನೆ
(ಜೂನ್
22)
ಈ
ಸಿನಿಮಾ
ಕಲೆಕ್ಷನ್
ಕೇವಲ
5.5
ಕೋಟಿ
ರೂ.
ಪ್ರಭಾಸ್
ಅಂತ
ಪ್ಯಾನ್
ಇಂಡಿಯಾ
ಸೂಪರ್‌ಸ್ಟಾರ್
ಅನ್ನು
ಇಟ್ಟುಕೊಂಡು
7ನೇ
ದಿನಕ್ಕೆ
ಇಷ್ಟೊಂದು
ಕಡಿಮೆ
ಕಲೆಕ್ಷನ್
ಮಾಡಿದ್ದೂ
ಟೀಕೆಗೆ
ಗುರಿಯಾಗಿದೆ.
ರಾಮಾಯಣದ
ಹೆಸರು
ಕೆಡಿಸುತ್ತಿರುವ
ಆದಿಪುರುಷ್
ಬ್ಯಾನ್
ಮಾಡಿ;
ಅಮಿತ್
ಶಾಗೆ
ಮುಖ್ಯಮಂತ್ರಿಗಳ
ಮನವಿ!
‘ಆದಿಪುರುಷ್’
ಬಾಕ್ಸಾಫೀಸ್‌ನಲ್ಲಿ
ಹೊಸ
ದಾಖಲೆ
ಬರೆಯಬಹುದು
ಅನ್ನೋ
ಲೆಕ್ಕಾಚಾರ
ಹಾಕಲಾಗಿತ್ತು.
ಆದರೆ,
ಅದೀಗ
ಅದು
ಮರೀಚಿಕೆ.
7ನೇ
ದಿನದ
ಕಲೆಕ್ಷನ್
ನೋಡಿದರೆ
ಈಗಾಗಲೇ
ಬಾಕ್ಸಾಫೀಸ್‌ನಲ್ಲಿ
ದಾಖಲೆ
ಬರೆದ
ಸಿನಿಮಾಗಳನ್ನು
ಹಿಂದಿಕ್ಕುವುದಿರಲಿ,
ಸಮೀಪಕ್ಕೂ
ಸುಳಿಯುವುದು
ಅಸಾಧ್ಯ
ಎನ್ನಲಾಗುತ್ತಿದೆ.
ಎಲ್ಲೆಲ್ಲಿ
ಎಷ್ಟೆಷ್ಟು
ಕಲೆಕ್ಷನ್?
‘ಆದಿಪುರುಷ್’
ಹಿಂದಿ
ಬೆಲ್ಟ್‌ಗಳಲ್ಲಿ
ಸಾಧಾರಣ
ಕಲೆಕ್ಷನ್
ಮಾಡುತ್ತಿದೆ.
6ನೇ
ದಿನ
ಹಿಂದಿ
ವರ್ಷನ್
ಸುಮಾರು
3.8
ಕೋಟಿ
ರೂ.
ಗಳಿಸಿತ್ತು.
7ನೇ
ದಿನ
ಇದು
3.15
ಕೋಟಿ
ರೂ.ಗೆ
ಡ್ರಾಪ್
ಆಗಿದೆ.
ಈ
ಮೂಲಕ
ಭಾರತದಾದ್ಯಂತ
ಕೇವಲ
ಶೇ.10.17ರಷ್ಟು
ಜನ
ಮಾತ್ರ
ಥಿಯೇಟರ್‌ಗೆ
ಬಂದು
ಸಿನಿಮಾ
ನೋಡಿದ್ದಾರೆ.
7ನೇ
ದಿನದ
ಅಂತ್ಯಕ್ಕೆ
ಭಾರತದ
ಕಲೆಕ್ಷನ್
ಕೇವಲ
260.55
ಕೋಟಿ
ರೂ.
ಈಗ
ಸದ್ಯಕ್ಕೆ
ಆಗುತ್ತಿರುವ
ಕಲೆಕ್ಷನ್
ನೋಡಿದರೆ,
ಭಾರತದ
ಬಾಕ್ಸಾಫೀಸ್‌ನಲ್ಲಿ
300
ಕೋಟಿ
ಕ್ಲಬ್
ಸೇರುವುದು
ಕೂಡ
ಅನುಮಾನ
ಎಂದು
ಟ್ರೇಡ್
ಎಕ್ಸ್‌ಪರ್ಟ್‌ಗಳ
ಲೆಕ್ಕಾಚಾರ.
ಒಂದ್ವೇಳೆ
ವೀಕೆಂಡ್‌ನಲ್ಲಿ
ಸಿನಿಮಾ
ಕಲೆಕ್ಷನ್‌ನಲ್ಲಿ
ಏರಿಕೆಯಾದರೆ,
ನಷ್ಟದಿಂದ
ಪಾರಾಗಬಹುದು.
‘ಆದಿಪುರುಷ್’
ಕಲೆಕ್ಷನ್‌ನಲ್ಲಿ
ಗೊಂದಲ
‘ಆದಿಪುರುಷ್’
ಕಲೆಕ್ಷನ್
ವಿಚಾರದಲ್ಲೂ
ಗೊಂದಲವಿದೆ.
ಟಿ
ಸೀರಿಸ್
ಸಂಸ್ಥೆ
ನಿನ್ನೆ
(ಜೂನ್
22)
ವಿಶ್ವದಾದ್ಯಂತ
410
ಕೋಟಿ
ರೂ.
ಕಲೆಕ್ಷನ್
ಮಾಡಿದೆ
ಎಂದು
ಹೇಳಿಕೊಂಡಿತ್ತು.
ಆದರೆ,
ಟ್ರೇಡ್
ಎಕ್ಸ್‌ಪರ್ಟ್‌ಗಳ
ಪ್ರಕಾರ,
ಈ
ಸಿನಿಮಾದ
ಕಲೆಕ್ಷನ್
370.15
ಕೋಟಿ
ರೂ.
ಹೀಗಾಗಿ
ಯಾವುದು
ಸತ್ಯ?
ಅನ್ನೋದೇ
ಗೊಂದಲಕ್ಕೆ
ಎಡೆ
ಮಾಡಿಕೊಟ್ಟಿದೆ.
‘ಆದಿಪುರುಷ್’
ಡೈಲಾಗ್‌ಗಳಲ್ಲಿ
ಬದಲಾವಣೆ
ಮಾಡಲಾಗಿತ್ತು.
ಟಿಕೆಟ್
ದರವನ್ನು
ಕಡಿತಗೊಳಿಸಲಾಗಿದೆ.
ಹೀಗಿದ್ದರೂ,
ಬಾಕ್ಸಾಫೀಸ್‌ನಲ್ಲಿ
ಮಾತ್ರ
ಏರಿಕೆ
ಕಾಣುತ್ತಿಲ್ಲ.
ಇದೇ
ಮೊದಲ
ಬಾರಿಗೆ
ಪ್ರಭಾಸ್
ಸಿನಿಮಾ
ವಿವಾದಕ್ಕೆ
ಸಿಲುಕಿದ್ದು,
ಕಲೆಕ್ಷನ್
ಮೇಲೆ
ಎಲ್ಲರ
ಕಣ್ಣು
ಬಿದ್ದಿದೆ.
English summary
Adipurush saw a huge drop on day 7 all language box office collections are very low, know more.
Friday, June 23, 2023, 11:20
Story first published: Friday, June 23, 2023, 11:20 [IST]