Telugu
oi-Narayana M
ಬಹುನಿರೀಕ್ಷಿತ
‘ಸಲಾರ್’
ಟೀಸರ್‌ಗಾಗಿ
ಅಭಿಮಾನಿಗಳು
ಚಾತಕ
ಪಕ್ಷಿಗಳಂತೆ
ಕಾಯುತ್ತಿದ್ದಾರೆ.
ಪ್ರಭಾಸ್
ಹಾಗೂ
ಪ್ರಶಾಂತ್
ನೀಲ್
ಡೆಡ್ಲಿ
ಕಾಂಬಿನೇಷನ್‌ನಲ್ಲಿ
ಬರ್ತಿರೋ
ಈ
ಆಕ್ಷನ್
ಎಂಟರ್‌ಟ್ರೈನರ್
ಸಿನಿಮಾ
ಭಾರೀ
ನಿರೀಕ್ಷೆ
ಹುಟ್ಟಾಕ್ಕಿದೆ.
ಹೊಂಬಾಳೆ
ಸಂಸ್ಥೆ
ಬರೀ
ಪೋಸ್ಟರ್‌ಗಳಿಂದಲೇ
ಸಿನಿಮಾ
ಭಾರೀ
ಹೈಪ್
ಕ್ರಿಯೇಟ್
ಮಾಡ್ತಿದೆ.
ಇದೀಗ
‘ಸಲಾರ್’
ಫಸ್ಟ್
ಗ್ಲಿಂಪ್ಸ್
ರಿಲೀಸ್‌ಗೆ
ಕೌಂಟ್‌ಡೌನ್
ಸ್ಟಾರ್ಟ್
ಆಗಿದೆ.
‘KGF’
ಸರಣಿ
ಸೂಪರ್
ಸಕ್ಸಸ್
ನಂತರ
ಹೊಂಬಾಳೆ
ಸಂಸ್ಥೆ
ಹಾಗು
ಪ್ರಶಾಂತ್
ನೀಲ್
ಮುಂದಿನ
ಸಿನಿಮಾ
ಯಾವುದು
ಅನ್ನುವ
ಪ್ರಶ್ನೆಗೆ
‘ಸಲಾರ್’
ಎನ್ನುವ
ಉತ್ತರ
ಸಿಕ್ಕಿತ್ತು.
ಬಹುಕೋಟಿ
ವೆಚ್ಚದಲ್ಲಿ
ಈ
ಚಿತ್ರವನ್ನು
ತೆರೆಗೆ
ತರಲಾಗುತ್ತಿದೆ.
‘ಬಾಹುಬಲಿ’
ಸರಣಿ
ಸಿನಿಮಾಗಳಿಂದ
ಪ್ರಭಾಸ್
ಪ್ಯಾನ್
ಇಂಡಿಯಾ
ಸ್ಟಾರ್
ಆಗಿದ್ದರು.
‘KGF’
ಸಿನಿಮಾ
ಮಾಡಿ
ನೀಲ್
ಸೆನ್ಸೇಷನ್
ಕ್ರಿಯೇಟ್
ಮಾಡಿದ್ದರು.
ಇವರಿಬ್ಬರ
ಕ್ರೇಜಿ
ಕಾಂಬಿನೇಷನ್
ಸಹಜವಾಗಿಯೇ
ನಿರೀಕ್ಷೆ
ಹೆಚ್ಚಿಸಿದೆ.
ಎಲ್ಲಾ
ಅಂದುಕೊಂಡಂತೆ
ಆಗಿದ್ದರೆ
ಕಳೆದ
ವರ್ಷವೇ
‘ಸಲಾರ್’
ಸಿನಿಮಾ
ತೆರೆಗಪ್ಪಳಿಸಬೇಕಿತ್ತು.
ಕೊರೊನಾ
ಹಾವಳಿಯಿಂದ
ಎಲ್ಲಾ
ಲೆಕ್ಕಾಚಾರ
ತಲೆಕೆಳಗಾಗಿತ್ತು.
ಈ
ವರ್ಷ
ಸೆಪ್ಟೆಂಬರ್
28ಕ್ಕೆ
ಸಿನಿಮಾ
ರಿಲೀಸ್
ಮಾಡೋದಾಗಿ
ಕಳೆದ
ವರ್ಷವೇ
ಘೋಷಿಸಲಾಗಿತ್ತು.
ರಿಲೀಸ್
ಡೇಟ್
ಹತ್ತಿರವಾದಂತೆ
ಟೀಸರ್
ಬಗ್ಗೆ
ಚರ್ಚೆ
ಶುರುವಾಗಿತ್ತು.
ಟೀಸರ್
ರಿಲೀಸ್‌ಗೆ
ಕೌಂಟ್‌ಡೌನ್
ಅಭಿಮಾನಿಗಳು
‘ಸಲಾರ್’
ಟೀಸರ್‌ಗಾಗಿ
ಭಾರೀ
ಬೇಡಿಕೆ
ಇಟ್ಟಿದ್ದರು.
ಆದರೆ
ಚಿತ್ರತಂಡ
ಮಾತ್ರ
ಮೌನವಾಗಿಯೇ
ಇತ್ತು.
ಇತ್ತೀಚೆಗೆ
ಟೀಸರ್
ರಿಲೀಸ್
ಬಗ್ಗೆ
ಸುಳಿವು
ಸಿಗುತ್ತಿತ್ತು.
ಮುಂದಿನ
ವಾರವೇ
‘ಸಲಾರ್’
ಸ್ಯಾಂಪಲ್
ರಿಲೀಸ್
ಆಗುವ
ಸಾಧ್ಯತೆಯಿದೆ.
ಆದರೆ
ಇದೀಗ
ಆ
ಬಗ್ಗೆ
ಸ್ವತಃ
ಚಿತ್ರತಂಡ
ಟ್ವೀಟ್
ಮಾಡಿ
ಅಭಿಮಾನಿಗಳಿಗೆ
ಸರ್ಪ್ರೈಸ್
ಕೊಟ್ಟಿದೆ.
ಹೊಂಬಾಳೆ
ಫಿಲ್ಮ್ಸ್
ಯೂಟ್ಯೂಬ್
ಚಾನಲ್‌ನಲ್ಲಿ
ಟೀಸರ್
ನೋಡೋಕೆ
ಸಿದ್ಧರಾಗಿ
ಎಂದು
ಬರೆಯಲಾಗಿದೆ.
𝑰𝒈𝒏𝒊𝒕𝒆
𝒕𝒉𝒆
#𝑺𝒂𝒍𝒂𝒂𝒓
𝒘𝒊𝒕𝒉𝒊𝒏.
𝑻𝒉𝒆
𝒄𝒐𝒖𝒏𝒕𝒅𝒐𝒘𝒏
𝒃𝒆𝒈𝒊𝒏𝒔!Subscribe
to
https://t.co/QxtFZcNhrG.#Prabhas
#PrashanthNeel
@PrithviOfficial
@hombalefilms
#VijayKiragandur
@IamJagguBhai
@shrutihaasan
@sriyareddy
@bhuvangowda84
@RaviBasrur…—
Hombale
Films
(@hombalefilms)
July
2,
2023
ಜುಲೈ
7ಕ್ಕೆ
90
ಸೆಕೆಂಡ್‌ಗಳ
ಸುನಾಮಿ
ಪ್ರಭಾಸ್
ಪರ್ಫಾರ್ಮನ್ಸ್,
ಪ್ರಶಾಂತ್
ನೀಲ್
ಎಲಿವೇಷನ್ಸ್
ಸಿಂಕ್
ಆದ್ರೆ
ಬಾಕ್ಸಾಫೀಸ್
ಶೇಕ್
ಆಗೋದು
ಗ್ಯಾರೆಂಟಿ.
90
ಸೆಕೆಂಡ್‌ಗಳ
ಜಬರ್ದಸ್ತ್
ಟೀಸರ್
ಕಟ್
ಮಾಡಿದ್ದು
ಅದಕ್ಕೆ
ರವಿ
ಬಸ್ರೂರು
ಮಾರ್ಕ್
ಬಿಜಿಎಂ
ಸಿದ್ಧವಾಗ್ತಿದೆ.
ಜುಲೈ
7ಕ್ಕೆ
‘ಸಲಾರ್’
ಟೀಸರ್
ರಿಲೀಸ್
ಆಗುತ್ತೆ
ಎನ್ನು
ಮಾತುಗಳು
ಕೇಳಿಬರ್ತಿದೆ.
‘KGF’-
2
ಟೀಸರ್
ನೋಡಿದವರು
‘ಸಲಾರ್’
ಝಲಕ್
ಹೇಗಿರುತ್ತೋ
ಅಂತ
ಊಹಿಸಿಕೊಂಡೇ
ಥ್ರಿಲ್ಲಾಗಿದ್ದಾರೆ.
ಹೈವೋಲ್ಟೇಜ್
ಆಕ್ಷನ್
ಸಿನಿಮಾ
‘ಸಲಾರ್’
ಸಿನಿಮಾ
ಕಥೆ
ಏನು
ಎನ್ನುವ
ಬಗ್ಗೆ
ಯಾವುದೇ
ಸುಳಿವು
ಸಿಕ್ಕಿಲ್ಲ.
ಆದರೆ
ಪ್ರಭಾಸ್
ಕಲ್ಲಿದ್ದಲು
ಗಣಿಯಲ್ಲಿ
ಕೆಲಸ
ಮಾಡುವ
ಕಾರ್ಮಿಕನಾಗಿ
ನಟಿಸ್ತಿದ್ದಾರೆ
ಎನ್ನಲಾಗ್ತಿದೆ.
ಇನ್ನು
ಕನ್ನಡದ
‘ಉಗ್ರಂ’
ರೀಮೆಕ್
ಅನ್ನುವ
ಮಾತುಗಳು
ಕೇಳಿಬಂದಿತ್ತು.
ಆದರೆ
ಚಿತ್ರತಂಡ
ಅದನ್ನು
ಅಲ್ಲಗಳೆದಿತ್ತು.
ಪೋಸ್ಟರ್‌ಗಳನ್ನು
ನೋಡ್ತಿದ್ರೆ
ಹೈವೋಲ್ಟೇಜ್
ಆಕ್ಷನ್
ಸಿನಿಮಾ
ಅನ್ನೋದು
ಅರ್ಥವಾಗ್ತಿದೆ.
ಚಿತ್ರದಲ್ಲಿ
ಶ್ರುತಿ
ಹಾಸನ್
ನಾಯಕಿಯಾಗಿ
ನಟಿಸಿದ್ದು
ಜಗಪತಿ
ಬಾಬು,
ದೇವರಾಜ್,
ಪೃಥ್ವಿರಾಜ್
ಸುಕುಮಾರ್
ಸೇರಿದಂತೆ
ಘಟಾನುಘಟಿ
ಕಲಾವಿದರು
ತಾರಾಗಣದಲ್ಲಿದ್ದಾರೆ.
200
ಕೋಟಿ
ರೂ.
ಬಜೆಟ್
ಸಿನಿಮಾ
ಹೆಚ್ಚು
ಕಡಿಮೆ
200
ಕೋಟಿ
ರೂ.
ಬಜೆಟ್‌ನಲ್ಲಿ
ಬಹಳ
ಅದ್ಧೂರಿಯಾಗಿ
‘ಸಲಾರ್’
ಸಿನಿಮಾ
ನಿರ್ಮಾಣವಾಗಿದೆ.
ರಾಮೋಜಿ
ಫಿಲ್ಮ್
ಸಿಟಿಯಲ್ಲಿ
ಸೆಟ್‌ಗಳನ್ನು
ನಿರ್ಮಿಸಿ
ಬಹುತೇಕ
ಚಿತ್ರೀಕರಣ
ನಡೆಸಲಾಗಿದೆ.
ಚಿತ್ರಕ್ಕಾಗಿ
ಪ್ರಭಾಸ್
ಭಾರೀ
ಮೊತ್ತದ
ಸಂಭಾವನೆ
ಪಡೆದಿದ್ದಾರೆ.
5
ಭಾಷೆಗಳಲ್ಲಿ
ಬಹಳ
ದೊಡ್ಡಮಟ್ಟದಲ್ಲಿ
ಸಿನಿಮಾ
ರಿಲೀಸ್
ಆಗಲಿದೆ.
ಅದಕ್ಕೆ
ತಕ್ಕಂತೆ
ಪ್ರಮೋಷನ್
ಪ್ಲ್ಯಾನ್
ಮಾಡಲಾಗುತ್ತಿದೆ.
English summary
Hombale Films is preparing for the release of Prabhas starrer Salar teaser. Team tweeted ignige the salaa within. thw countdown begins. know more.
Sunday, July 2, 2023, 17:21