India
oi-Sunitha B
ಕಳೆದ 24 ಗಂಟೆಗಳಲ್ಲಿ ಗುಜರಾತ್‌ನ ಹಲವು ಭಾಗಗಳಲ್ಲಿ ಭಾರಿ ಮಳೆ ಸುರಿದಿದ್ದು, ನಗರಗಳು ಮತ್ತು ಹಳ್ಳಿಗಳಲ್ಲಿನ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ ಮತ್ತು ಪ್ರವಾಹದಂತಹ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಈ ವರುಣಾರ್ಭಟಕ್ಕೆ 9 ಜನ ಸಾವನ್ನಪ್ಪಿದ್ದಾರೆ.
ಅಹಿತಕರ ಘಟನೆಗಳು ನಡೆಯದಿರಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ತಂಡಗಳನ್ನು ಕಚ್, ಜಾಮ್‌ನಗರ್, ಜುನಾಗಢ್ ಮತ್ತು ನವಸಾರಿಯಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (ಎಸ್‌ಇಒಸಿ) ಪ್ರಕಾರ, ಕಳೆದ ಎರಡು ದಿನಗಳಲ್ಲಿ ಒಂಬತ್ತು ಜನರು ಮಳೆ ಸಂಬಂಧಿತ ಘಟನೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಎಸ್‌ಇಒಸಿ ಹಂಚಿಕೊಂಡ ಮಾಹಿತಿಯ ಪ್ರಕಾರ, ಶುಕ್ರವಾರ ಮಧ್ಯಾಹ್ನ 12 ಗಂಟೆಯಿಂದ ಈವರೆಗೆ ರಾಜ್ಯದ 37 ತಾಲೂಕುಗಳಲ್ಲಿ 100 ಮಿ.ಮೀ.ಗೂ ಹೆಚ್ಚು ಮಳೆಯಾಗಿದೆ.
ಎಸ್‌ಇಒಸಿ ಪ್ರಕಾರ, ಶನಿವಾರ ಬೆಳಗ್ಗೆ 6 ಗಂಟೆಗೆ 24 ಗಂಟೆಗಳ ಅವಧಿಯಲ್ಲಿ ಜುನಾಗಢ್ ಜಿಲ್ಲೆಯ ವಿಸಾವದರ್ ತಾಲೂಕಿನಲ್ಲಿ 398 ಮಿಮೀ ಮಳೆಯಾಗಿದೆ. ಅಧಿಕಾರಿಗಳ ಪ್ರಕಾರ, ಸೌರಾಷ್ಟ್ರ-ಕಚ್ ಮತ್ತು ದಕ್ಷಿಣ ಗುಜರಾತ್ ಪ್ರದೇಶಗಳಲ್ಲಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿದ್ದು, ತಗ್ಗು ಪ್ರದೇಶಗಳಲ್ಲಿ ಜಲಾವೃತವಾಗಿದೆ ಮತ್ತು ಹಳ್ಳಿಗಳು ಮುಳುಗಿವೆ.
Monsoon in Karnataka: ಜೂನ್‌ನಲ್ಲಿ ಶೇ 50 ಮಳೆ ಕೊರತೆ, 16 ಜಿಲ್ಲೆಗಳಲ್ಲಿ ಬರಗಾಲದಂತಹ ಪರಿಸ್ಥಿತಿ
ಜಾಮ್‌ನಗರ ಜಿಲ್ಲೆಯ ಜಾಮ್‌ನಗರ ತಾಲೂಕು (269 ಮಿಮೀ), ವಲ್ಸಾದ್‌ನ ಕಪ್ರದಾ (247 ಮಿಮೀ), ಕಚ್‌ನ ಅಂಜಾರ್ (239 ಮಿಮೀ) ಮತ್ತು ನವಸಾರಿಯ ಖೇರ್ಗಾಮ್ (222 ಮಿಮೀ) ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಾಗಿವೆ ಎಂದು ಎಸ್‌ಇಒಸಿ ಹೇಳಿದೆ.
English summary
Heavy rains lashed many parts of Gujarat in the last 24 hours, inundating low-lying areas in cities and villages, killing 9 people.
Story first published: Saturday, July 1, 2023, 18:33 [IST]