ಜಪಾನ್‌ನಲ್ಲಿ ಶುರುವಾಯ್ತು ರಾಕಿಭಾಯ್ ಆರ್ಭಟ: ಅಭಿಮಾನಿಗಳ ಬೇಸರಕ್ಕೆ ಕಾರಣ ಏನು? | Yash fans disappointed with KGF film low promotions in Japan

bredcrumb

News

oi-Narayana M

|

ಯಶ್
ನಟನೆಯ
‘KGF’
ಸರಣಿ
ಸಿನಿಮಾಗಳು
ಜಪಾನ್
ಭಾಷೆಗೆ
ಡಬ್
ಆಗಿ
ಇಂದು
(ಜುಲೈ
14)
ರಿಲೀಸ್
ಆಗಿದೆ.
ಪ್ಯಾನ್
ಇಂಡಿಯಾ
ಲೆವೆಲ್‌ನಲ್ಲಿ
ಸಂಚಲನ
ಸೃಷ್ಟಿಸಿದ್ದ

ಆಕ್ಷನ್
ಎಂಟರ್‌ಟೈನರ್‌
ಸಿನಿಮಾ
ಸಾವಿರಾರು
ಕೋಟಿ
ಕೊಳ್ಳೆ
ಹೊಡೆದು
ಸದ್ದು
ಮಾಡಿತ್ತು.
ಇದೀಗ
ಮತ್ತೆ
ಸಿಲ್ವರ್‌
ಸ್ಕ್ರೀನ್‌
ಮೇಲೆ
ರಾಕಿಭಾಯ್
ಕಾರುಬಾರು
ಆರಂಭ
ಆಗಿದೆ.

ಇತ್ತೀಚಿಗೆ
ತೆಲುಗಿನ
‘RRR’
ಸಿನಿಮಾ
ಜಪಾನ್
ದೇಶದಲ್ಲಿ
ರಿಲೀಸ್
ಆಗಿ
ಶತದಿನೋತ್ಸವ
ಆಚರಿಸಿಕೊಂಡಿತ್ತು.
ಅಚ್ಚರಿ
ಎನ್ನುವಂತೆ
ರಜನಿಕಾಂತ್
ನಟನೆಯ
‘ಮುತ್ತು’
ಸಿನಿಮಾ
ದಾಖಲೆಯನ್ನು
ಅಲ್ಲಿ
ಮುರಿದಿತ್ತು.
ಇನ್ನು
‘KGF’
ಸರಣಿ
ಜೊತೆಗೆ
ರಾಮ್‌ಚರಣ್
ನಟನೆಯ
‘ರಂಗಸ್ಥಳಂ’
ಸಿನಿಮಾ
ಕೂಡ
ಏಕಕಾಲಕ್ಕೆ
ಜಪಾನ್‌ನಲ್ಲಿ
ತೆರೆಗಪ್ಪಳಿಸಿದೆ.
ಅಡ್ವಾನ್ಸ್
ಬುಕ್ಕಿಂಗ್‌ನಲ್ಲಿ
ರಾಕಿಭಾಯ್‌ನ
ಚಿಟ್ಟಿಬಾಬು
ಮೀರಿಸಿದ್ದ.
ಸದ್ಯ
ಸಿನಿಮಾ
ಪ್ರದರ್ಶನಗಳು
ಆರಂಭವಾಗಿದ್ದು
ಜಪಾನಿಯರ
ಪ್ರತಿಕ್ರಿಯೆ
ಹೇಗಿರುತ್ತದೆ
ಎನ್ನುವ
ಕುತೂಹಲ
ಮೂಡಿದೆ.

Yash fans disappointed with KGF film low promotions in Japan

ಪ್ರಶಾಂತ್
ನೀಲ್
ನಿರ್ದೇಶನದ
ಆಕ್ಷನ್
ಎಂಟರ್‌ಟೈನರ್
‘KGF’
ಸಿನಿಮಾ
ಕನ್ನಡ
ಚಿತ್ರರಂಗದಲ್ಲಿ
ಹೊಸ
ದಾಖಲೆ
ಬರೀತು.
ಕನ್ನಡ
ಸಿನಿಮಾಗಳು
50
ಕೋಟಿ
ಕಲೆಕ್ಷನ್
ಮಾಡುವದೇ
ಕಷ್ಟ
ಎನ್ನುವ
ಸಮಯದಲ್ಲಿ
1000
ಕೋಟಿ
ರೂ.ಗೂ
ಅಧಿಕ
ಗಳಿಕೆ
ಮಾಡಿ
ತೋರಿಸಿತ್ತು.
‘KGF’
ಸಿನಿಮಾದಿಂದ
ಕನ್ನಡ
ಚಿತ್ರರಂಗವನ್ನು
ಪರಭಾಷಿಕರು
ತಿರುಗಿ
ನೋಡುವಂತಾಗಿದೆ.

ಜಪಾನ್‌ನಲ್ಲಿ 'ಕೆಜಿಎಫ್' Vs 'ರಂಗಸ್ಥಳಂ': ರಾಕಿಭಾಯ್ ಮೀರಿಸಿ ಮುನ್ನಡೆ ಸಾಧಿಸಿದ ಚಿಟ್ಟಿಬಾಬುಜಪಾನ್‌ನಲ್ಲಿ
‘ಕೆಜಿಎಫ್’
Vs
‘ರಂಗಸ್ಥಳಂ’:
ರಾಕಿಭಾಯ್
ಮೀರಿಸಿ
ಮುನ್ನಡೆ
ಸಾಧಿಸಿದ
ಚಿಟ್ಟಿಬಾಬು

ಅಭಿಮಾನಿಗಳ
ಬೇಸರ

‘KGF’
ಚಾಪ್ಟರ್-
1
ಹಾಗೂ
‘KGF’
ಚಾಪ್ಟರ್-
2
ಒಂದೇ
ದಿನ
ಜಪಾನ್
ದೇಶದಲ್ಲಿ
ಬಿಡುಗಡೆ
ಆಗಿದೆ.
ಆದರೆ
ಚಿತ್ರತಂಡ
ಅಲ್ಲಿ
ಸರಿಯಾಗಿ
ಪ್ರಚಾರ
ಮಾಡುತ್ತಿಲ್ಲ
ಎಂದು
ಅಭಿಮಾನಿಗಳು
ಬೇಸರ
ವ್ಯಕ್ತಪಡಿಸಿದ್ದಾರೆ.
ರಾಜಮೌಳಿ,
ರಾಮ್‌ಚರಣ್‌
ಹಾಗೂ
ಜ್ಯೂ.
ಎನ್‌ಟಿಆರ್
3
ಜನ
ಅಲ್ಲಿಗೆ
ಹೋಗಿ
‘RRR’
ಸಿನಿಮಾ
ಪ್ರಚಾರ
ಮಾಡಿದ್ದರು.
ಸಿನಿಮಾ
ಸೂಪರ್
ಸಕ್ಸಸ್
ಕಂಡಿದೆ.
ಈಗ
ರಾಮ್‌ಚರಣ್
ಹಾಗೂ
ತಾರಕ್‌ಗೆ
ಅಲ್ಲಿ
ಅಭಿಮಾನಿ
ಬಳಗ
ಸೃಷ್ಟಿಯಾಗಿದೆ.
ಅದೇ
ಕಾರಣಕ್ಕೆ
‘ರಂಗಸ್ಥಳಂ’
ಸಿನಿಮಾ
ದೊಡ್ಡಮಟ್ಟದಲ್ಲಿ
ರಿಲೀಸ್
ಮಾಡಲಾಗುತ್ತಿದೆ.

ಜಪಾನ್‌ನಲ್ಲಿ
ಪ್ರಚಾರ
ಕಮ್ಮಿ
ಆಯ್ತಾ?

ಹೊಂಬಾಳೆ
ಸಂಸ್ಥೆ
ತಮ್ಮ
ಸಿನಿಮಾಗಳಿಗೆ
ದೊಡ್ಡಮಟ್ಟದಲ್ಲಿ
ಪ್ರಚಾರ
ಮಾಡುತ್ತದೆ.
ಆದರೆ
ಸೂಪರ್
ಹಿಟ್
‘KGF’
ಸರಣಿ
ಜಪಾನ್‌ನಲ್ಲಿ
ತೆರೆಕಾಣುತ್ತಿರುವಾಗ
ಯಾಕೆ
ಅಲ್ಲಿ
ಪ್ರಚಾರ
ಮಾಡುತ್ತಿಲ್ಲ
ಎಂದು
ಕೇಳುತ್ತಿದ್ದಾರೆ.
ಯಶ್
ಹಾಗೂ
ಶ್ರೀನಿಧಿ
ಶೆಟ್ಟಿ
ಸ್ಪೆಷಲ್
ವಿಡಿಯೋ
ಮಾಡಿ
ಜಪಾನ್
ಪ್ರೇಕ್ಷಕರಲ್ಲಿ
ಸಿನಿಮಾ
ನೋಡುವಂತೆ
ಮನವಿ
ಮಾಡಿದ್ದರು.
ಅದು
ಬಿಟ್ಟರೆ
ಮತ್ಯಾವುದೇ
ಪ್ರಚಾರ
ಕಾಣಿಸುತ್ತಿಲ್ಲ.
ಸದ್ಯ
ಅಲ್ಲಿ
ಥಿಯೇಟರ್‌ಗಳ
ಮುಂದೆ
ರಸ್ತೆಗಳಲ್ಲಿ
ಸಿನಿಮಾ
ಹೋರ್ಡಿಂಗ್ಸ್
ಕಾಣಿಸುತ್ತಿದೆ
ಅಷ್ಟೆ.
ಇದು
ಸಾಕಾಗಲ್ಲ
ಎಂದು
ಅಭಿಮಾನಿಗಳು
ಹೇಳುತ್ತಿದ್ದಾರೆ.

ರಾಮ್‌ಚರಣ್
ಕ್ರೇಜ್

‘RRR’
ಚಿತ್ರದಲ್ಲಿ
ಸೀತಾರಾಮರಾಜು
ಆಗಿ
ರಾಮ್‌ಚರಣ್
ಕಮಾಲ್
ಮಾಡಿದ್ದರು.
ಜಪಾನ್
ಪ್ರೇಕ್ಷಕರು
ಕೂಡ
ಚರಣ್
ಅಭಿನಯಕ್ಕೆ
ಫಿದಾ
ಆಗಿದ್ದಾರೆ.
ಇದೇ
ಕಾರಣಕ್ಕೆ
ಚರಣ್
ನಟನೆಯ
‘ರಂಗಸ್ಥಳಂ’
ಸಿನಿಮಾ
ಅಡ್ವಾನ್ಸ್
ಬುಕ್ಕಿಂಗ್‌ಗೆ
ಭರ್ಜರಿ
ರೆಸ್ಪಾನ್ಸ್
ಸಿಕ್ತಿದೆ.
‘KGF’
ಸರಣಿಯ
2
ಸಿನಿಮಾಗಳನ್ನು
ಮೀರಿಸಿ
‘ರಂಗಸ್ಥಳಂ’
ಫಸ್ಟ್
ಡೇ
ಅಡ್ವಾನ್ಸ್
ಬುಕ್ಕಿಂಗ್
ಆಗಿದ್ದು
ಅಚ್ಚರಿ
ಮೂಡಿಸಿದೆ.
ಚರಣ್
ಕ್ರೇಜ್
ಇದಕ್ಕೆ
ಕಾರಣ
ಎನ್ನಲಾಗುತ್ತಿದೆ.
ಇನ್ನು
ಕನ್ನಡಿಗರು
ಜಪಾನ್‌ನಲ್ಲಿ
ಅಷ್ಟಾಗಿ
ಇಲ್ಲ.
ಆದರೂ
ಕೂಡ
ಒಳ್ಳೆಯ
ಬುಕ್ಕಿಂಗ್
ಆಗಿದೆ.
ಕಂಡಿತ
‘KGF’
ಸಿನಿಮಾ
ನೋಡಿ
ಅಲ್ಲಿನ
ಪ್ರೇಕ್ಷಕರು
ಯಶ್
ಅಭಿಮಾನಿಗಳಾಗೋದು
ಗ್ಯಾರೆಂಟಿ
ಎಂದು
ಇಲ್ಲಿನ
ಅಭಿಮಾನಿಗಳು
ನಿರೀಕ್ಷಿಸುತ್ತಿದ್ದಾರೆ.

‘KGF’-
3
ಯಾವಾಗ?

ಈಗಾಗಲೇ
‘KGF’-3
ಸಿನಿಮಾ
ಮಾಡುವುದಾಗಿ
ಹೊಂಬಾಳೆ
ಸಂಸ್ಥೆ
ಸುಳಿವು
ಕೊಟ್ಟಿದೆ.
‘ಸಲಾರ್’
ಚಿತ್ರಕ್ಕೂ
‘KGF’
ಸರಣಿಗೂ
ಲಿಂಕ್
ಇದೆ
ಎನ್ನುವುದು
ಕೆಲ
ಅಭಿಮಾನಿಗಳ
ಲೆಕ್ಕಾಚಾರ.
ಆದರೆ

ಬಗ್ಗೆ
ಯಾವುದೇ
ಅಧಿಕೃತ
ಮಾಹಿತಿ
ಇನ್ನು
ಸಿಕ್ಕಿಲ್ಲ.
ಇನ್ನು
‘KGF’
ನಂತರ
ಹೊಂಬಾಳೆ
ಸಂಸ್ಥೆ,
ಪ್ರಶಾಂತ್‌
ನೀಲ್
‘ಸಲಾರ್’
ಚಿತ್ರಕ್ಕಾಗಿ
ಕೆಲಸ
ಮಾಡುತ್ತಿದ್ದಾರೆ.
ಪ್ರಭಾಸ್
ಹೀರೊ
ಆಗಿ
ಅಬ್ಬರಿಸಿದ್ದಾರೆ.
ಸೆಪ್ಟೆಂಬರ್
28ಕ್ಕೆ

ಹೈವೋಲ್ಟೇಜ್
ಆಕ್ಷನ್
ಎಂಟರ್‌ಟೈನರ್
ಸಿನಿಮಾ
ತೆರೆಗಪ್ಪಳಿಸಲಿದೆ.

English summary

Yash fans disappointed with KGF film low promotions in Japan. both films releasing in Japan this week. know more.

Friday, July 14, 2023, 12:29

Story first published: Friday, July 14, 2023, 12:29 [IST]

Source link