ಚೇತೇಶ್ವರ ಪೂಜಾರ ನನ್ನಂತೆ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ: ಪೃಥ್ವಿ ಶಾ ಅಚ್ಚರಿಯ ಹೇಳಿಕೆ | Prithvi Shaw’s Bold Response to Disastrous Form: Pujara Can’t Bat Like Me

Sports

oi-Naveen Kumar N

|

Google Oneindia Kannada News

ನಾನು ಚೇತೇಶ್ವರ ಪೂಜಾರ ಅವರಂತೆ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ. ಮತ್ತು ಪೂಜಾರ ಅವರನು ನನ್ನ ರೀತಿ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ ಎಂದು ಯುವ ಬ್ಯಾಟರ್ ಪೃಥ್ವಿ ಶಾ ಅಭಿಪ್ರಾಯಪಟ್ಟಿದ್ದಾರೆ. ತಾವು ಆಕ್ರಮಣಕಾರಿ ಆಟವಾಡುವ ಬಗ್ಗೆ ಪ್ರತಿಕ್ರಿಯೆ ಕೊಟ್ಟ ಅವರು ಅದೇ ಮಾದರಿಯ ಆಟ ಮುಂದುವರೆಸುವುದಾಗಿ ಹೇಳಿದರು.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಆಡಿದ ಯುವ ಬ್ಯಾಟರ್ ಪೃಥ್ವಿ ಶಾ, ಎರಡೂ ಇನ್ನಿಂಗ್ಸ್‌ಗಳಲ್ಲಿ 26 ಮತ್ತು 25 ರನ್ ಗಳಿಸುವ ಮೂಲಕ ಮತ್ತೆ ನಿರಾಸೆ ಮೂಡಿಸಿದರು.

Prithvi Shaw (DP)

ಪಂದ್ಯದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಪೃಥ್ವಿ ಶಾ, ತಮ್ಮ ಕಳಪೆ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಪ್ರತಿಕ್ರಿಯೆ ನೀಡಿದರು. ತಾವು ಬ್ಯಾಟಿಂಗ್‌ನಲ್ಲಿ ಸುಧಾರಿಸಬೇಕಿದೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ. ವೈಯಕ್ತಿಕವಾಗಿ, ನಾನು ನನ್ನ ಕಾರ್ಯತಂತ್ರವನ್ನು ಬದಲಾಯಿಸುವ ಅಗತ್ಯವಿಲ್ಲ ಎಂದು ನಾನು ನಂಬುತ್ತೇನೆ, ಇನ್ನಷ್ಟು ಸ್ಮಾರ್ಟ್ ಆಗುತ್ತೇನ ಎಂದರು. “ನಾನು ಪೂಜಾರ ಸರ್ ಅವರಂತೆ ತೆ ಬ್ಯಾಟ್ ಮಾಡಲು ಸಾಧ್ಯವಿಲ್ಲ ಮತ್ತು ಪೂಜಾರ ನನ್ನಂತೆ ಬ್ಯಾಟಿಂಗ್ ಮಾಡಲು ಸಾಧ್ಯವಿಲ್ಲ” ಎಂದು ಶಾ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

 ODI World Cup 2023: ಭಾರತ-ಪಾಕಿಸ್ತಾನ ಪಂದ್ಯ: ಅಹಮದಾಬಾದ್ ಹೋಟೆಲ್ ಕೊಠಡಿ ದರ ಹತ್ತು ಪಟ್ಟು ಹೆಚ್ಚಳ ODI World Cup 2023: ಭಾರತ-ಪಾಕಿಸ್ತಾನ ಪಂದ್ಯ: ಅಹಮದಾಬಾದ್ ಹೋಟೆಲ್ ಕೊಠಡಿ ದರ ಹತ್ತು ಪಟ್ಟು ಹೆಚ್ಚಳ

ಮತ್ತೆ ಭಾರತ ತಂಡಕ್ಕೆ ಆಯ್ಕೆಯಾಗುವ ವಿಶ್ವಾಸ

2021ರ ಜುಲೈನಲ್ಲಿ ಪೃಥ್ವಿ ಶಾ ಕೊಲೆಂಬೋದಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತದ ಪರವಾಗಿ ಆಡಿದ್ದರು. ನಂತರ ಅವರು ಭಾರತ ತಂಡಕ್ಕೆ ಆಯ್ಕೆಯಾಗಲಿಲ್ಲ. ರಣಜಿ ಟ್ರೋಫಿ, ಸೈಯಕ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಹೊರತಾಗಿ ಕೂಡ ಭಾರತ ತಂಡಕ್ಕೆ ಆಯ್ಕೆಯಾಗುವಲ್ಲಿ ವಿಫಲವಾಗಿದ್ದಾರೆ. 2023ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗಾಗಿ ಆಡಿದ 8 ಪಂದ್ಯಗಳಲ್ಲಿ ಕೇವಲ 106 ರನ್‌ ಮಾತ್ರ ಗಳಿಸಿದ್ದರು. ಅವರ ಕೆಟ್ಟ ಪ್ರದರ್ಶನದ ನಂತರ ಹಲವು ಪಂದ್ಯಗಳಲ್ಲಿ ಅವರು ಬೆಂಚ್‌ ಕಾಯುವಂತೆ ಆಗಿತ್ತು.

ಕಳೆದ ವರ್ಷ ದೇಶೀಯ ಟೆಸ್ಟ್ ಪಂದ್ಯದಲ್ಲಿ ಅವರು ಅಸ್ಸಾಂ ವಿರುದ್ಧ 379 ರನ್ ಗಳಿಸಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದೇನೆ ಆದರೆ ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಬ್ಯಾಟಿಂಗ್ ತಂತ್ರವನ್ನು ಪರಿಗಣಿಸಲು 20 ಓವರ್ ಮಾತ್ರ ಇದೆ. ಡೆಲ್ಲಿ ಕ್ಯಾಪಿಟಲ್ಸ್‌ನ ಸೌರವ್ ಗಂಗೂಲಿ, ರಿಕಿ ಪಾಂಟಿಂಗ್ ಮತ್ತು ಪ್ರವೀಣ್ ಆಮ್ರೆ ಜೊತೆ ಮಾತನಾಡಿದ್ದೇನೆ ಎಂದು ಹೇಳಿದರು.

English summary

Mumbai opener Prithvi Shaw acknowledged that he cannot replicate Cheteshwar Pujara’s batting style but expressed confidence in his own naturally aggressive approach. The 23-year-old remains determined to regain his place in the national team by scoring runs.

Story first published: Sunday, July 9, 2023, 17:19 [IST]

Source link