ಚುನಾವಣಾ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ಪೊಲೀಸರು ಸಂಪೂರ್ಣ ಅಧಿಕಾರವಿದೆ: ಸಿಎಂ ಮಮತಾ ಬ್ಯಾನರ್ಜಿ | Bengal violence: Given a free hand to the state police to probe says Mamata Banerjee

India

oi-Mamatha M

|

Google Oneindia Kannada News

ಕೋಲ್ಕತ್ತಾ, ಜುಲೈ. 12: ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ರಾಜ್ಯ ಪಂಚಾಯತ್ ಚುನಾವಣೆಯಲ್ಲಿ ನಡೆದ ಹಿಂಸಾಚಾರದ ಹಿಂದೆ ಯಾರು ಇದ್ದಾರೆ ಎಂದು ತನಿಖೆ ನಡೆಸಲು ರಾಜ್ಯ ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಹೇಳಿದ್ದಾರೆ.

ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ” ಚುನಾವಣೆಗಳನ್ನು ಘೋಷಿಸಿದಾಗಿನಿಂದ ಮತದಾನಕ್ಕೆ ಸಂಬಂಧಿಸಿದ ಹಿಂಸಾಚಾರದಲ್ಲಿ 19 ಜನರು, ಹೆಚ್ಚಾಗಿ ತಮ್ಮ ಪಕ್ಷ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಮೃತಪಟ್ಟಿದ್ದಾರೆ. ಗ್ರಾಮ ಪಂಚಾಯತ್ ಮತದಾನದ ಹಿಂಸಾಚಾರದ ಹಿಂದಿನವರ ವಿರುದ್ಧ ಕ್ರಮ ಕೈಗೊಳ್ಳಲು ನಾನು ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡುತ್ತಿದ್ದೇನೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

Chief Minister Mamata Banerjee

” ಹಿಂಸಾಚಾರದಲ್ಲಿ ಮೃತಪಟ್ಟ 19 ಜನರಿಗೆ ಸರ್ಕಾರದಿಂದ 2 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ. ಗ್ರಾಮೀಣ ಚುನಾವಣೆ ನಡೆದ 71,000 ಮತ ಕೇಂದ್ರಗಳಲ್ಲಿ ಸುಮಾರು 60 ಬೂತ್‌ಗಳಿಂದ ಹಿಂಸಾಚಾರದ ಘಟನೆಗಳು ವರದಿಯಾಗಿವೆ” ಎಂದು ಬಂಗಾಳ ಸಿಎಂ ಹೇಳಿಕೊಂಡಿದ್ದಾರೆ.

ಪಂಚಾಯತ್ ಚುನಾವಣೆಯಲ್ಲಿ ತನ್ನ ಪಕ್ಷವು ಜಯಗಳಿಸಿದ ನಂತರ ಮಮತಾ ಬ್ಯಾನರ್ಜಿ ಜನರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. “ನಮ್ಮನ್ನು ವಿರೋಧಿಸಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ನಮ್ಮನ್ನು ಟೀಕಿಸುವ ಮೂಲಕ ಅವರು ನಮಗೆ ಸಹಾಯ ಮಾಡಿದ್ದಾರೆ” ಎಂದು ವಿಪಕ್ಷಗಳಿಗೆ ಚಾಟಿ ಬೀಸಿದ್ದಾರೆ.

ತಮಮ್ ಪಕ್ಷವು ಚುನಾವಣೆಗೆ ಮುಂಚಿತವಾಗಿ ಸಾಕಷ್ಟು “ಸುಳ್ಳು ಪ್ರಚಾರ” ದ ವಿರುದ್ಧ ಹೋರಾಡಬೇಕಾಗಿ ಬಂದಿತ್ತು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. “ನಾನು ಪ್ರತಿಪಕ್ಷದಲ್ಲಿದ್ದಾಗ, ನಾನು ದೈಹಿಕ ದಾಳಿಯನ್ನು ಎದುರಿಸಬೇಕಾಗಿತ್ತು. ಈಗ ಬಿಜೆಪಿ ಅಧಿಕಾರದಲ್ಲಿದ್ದಾಗ ಸುಳ್ಳು ಪ್ರಚಾರದ ಎಲ್ಲಾ ಮಿತಿಗಳನ್ನು ದಾಟಿದ್ದಾರೆ” ಎಂದು ಆರೋಪಿಸಿದ್ದಾರೆ.

“ನೀವೆಲ್ಲರೂ ನನ್ನ ವಿರುದ್ಧ ಏಕೆ ಅಂತಹ ದ್ವೇಷವನ್ನು ಹೊರಹಾಕುತ್ತೀರಿ..? ಇದಕ್ಕೆ ನಾನು ಹಿಂದುಳಿದ ಕುಟುಂಬದಿಂದ ಬಂದ ಕಾರಣವೇ..? ನಾನು ಏಕತೆಗಾಗಿ ಮಾತನಾಡುವ ಕಾರಣವೇ..?” ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ. ಇದರ ಜೊತೆಗೆ ಹಿಂಸಾಚಾರದ ಘಟನೆಗಳನ್ನು ತನಿಖೆ ಮಾಡಲು ಬಂಗಾಳಕ್ಕೆ ಸತ್ಯ-ಶೋಧನಾ ತಂಡವನ್ನು ಕಳುಹಿಸಿದ್ದಕ್ಕಾಗಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Chief Minister Mamata Banerjee

“ಮಣಿಪುರ ಉರಿಯುತ್ತಿರುವಾಗ ಸತ್ಯ-ಶೋಧನಾ ತಂಡ ಎಲ್ಲಿತ್ತು..? ಎನ್‌ಆರ್‌ಸಿ ಕಾರಣದಿಂದಾಗಿ ಅಸ್ಸಾಂ ಉರಿಯುತ್ತಿರುವಾಗ ಈ ತಂಡ ಎಲ್ಲಿತ್ತು..? ಈ ಸ್ಥಳಗಳಿಗೆ ಎಷ್ಟು ಆಯೋಗಗಳು ಭೇಟಿ ನೀಡಿವೆ..? ಕಳೆದ 2 ವರ್ಷಗಳಲ್ಲಿ, 154 ತಂಡಗಳು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿವೆ. ಇವು ಬಿಜೆಪಿ ಪ್ರಚೋದನೆಯ ಸಮಿತಿಗಳು, ಸತ್ಯ-ಶೋಧನಾ ಸಮಿತಿಗಳಲ್ಲ. ಅನೇಕರು (ಪಂಚಾಯತ್ ಮತದಾನದ ಸಮಯದಲ್ಲಿ) ನಿಧನರಾದರು ಎಂಬುದು ದುರದೃಷ್ಟಕರ. ಅವರು ಸಂದರ್ಭಗಳಿಗೆ ಬಲಿಯಾಗುತ್ತಾರೆ. ನಾನು ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಹೇಳಿದ್ದೇನೆ ” ಎಂದು ಕಿಡಿಕಾರಿದ್ದಾರೆ.

ಬಂಗಾಳ ಸಿಎಂ ಕಾಂಗ್ರೆಸ್ ಮತ್ತು ಸಿಪಿಎಂ ವಿರುದ್ಧವೂ ವಾಗ್ದಾಳಿ ನಡೆಸಿದ್ದು, ಎರಡು ಪಕ್ಷಗಳು ಹಿಂಸಾಚಾರಕ್ಕೆ ಸಮಾನ ಜವಾಬ್ದಾರರಾಗಿವೆ ಎಂದಿದ್ದಾರೆ. “ನಾನು ಯಾವುದೇ ಹಿಂಸಾಚಾರವನ್ನು ಬೆಂಬಲಿಸುವುದಿಲ್ಲ. ನಾನು ದ್ವೇಷ ಮತ್ತು ಹಿಂಸಾಚಾರದ ರಾಜಕೀಯದಲ್ಲಿ ಪಾಲ್ಗೊಳ್ಳುವುದಿಲ್ಲ” ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಹಿಂಸಾಚಾರದಲ್ಲಿ 45 ಮಂದಿ ಬಲಿ, ಮಮತಾ ಬ್ಯಾನರ್ಜಿ ನಿರ್ದಯಿ ಎಂದ ಬಿಜೆಪಿಪಶ್ಚಿಮ ಬಂಗಾಳದಲ್ಲಿ ಚುನಾವಣಾ ಹಿಂಸಾಚಾರದಲ್ಲಿ 45 ಮಂದಿ ಬಲಿ, ಮಮತಾ ಬ್ಯಾನರ್ಜಿ ನಿರ್ದಯಿ ಎಂದ ಬಿಜೆಪಿ

ಇನ್ನು, ಪಂಚಾಯತ್ ಚುನಾವಣೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಸರಕಾರವನ್ನು ಬಿಜೆಪಿ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ. ಇದೇ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು “ನಿರ್ದಯಿ” ಎಂದು ಕರೆದಿದ್ದು, ಚುನಾವಣಾ ಘರ್ಷಣೆಯಲ್ಲಿ ಕನಿಷ್ಠ 45 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

  • West Bengal: ಬಂಗಾಳದಲ್ಲಿ ಚುನಾವಣಾ ಹಿಂಸಾಚಾರ- 12 ಹತ್ಯೆ, ಗುಂಡಿನ ದಾಳಿ, ಮತಗಟ್ಟೆಗೆ ಬೆಂಕಿ, ಮತಯಂತ್ರ ಹೊತ್ತೊಯ್ದ ಮಹಿಳೆಯರು
  • ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ: ಮುಂದುವರಿದ ರಕ್ತಪಾತ, ಗುಂಡೇಟು, ಮತಗಟ್ಟೆ ಧ್ವಂಸ- 23 ಜನರ ಹತ್ಯೆ
  • ಇಡಿ, ಸಿಬಿಐ ಮೂಲಕ ಕೇಂದ್ರ ಸರ್ಕಾರ ವಿರೋಧ ಪಕ್ಷಗಳನ್ನು ಶೋಷಣೆ ಮಾಡುತ್ತಿದೆ: ಶತ್ರುಘ್ನ ಸಿನ್ಹಾ
  • 3 ರಾಜ್ಯಗಳ 10 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಡೇಟ್‌ ಫಿಕ್ಸ್‌: ಯಾವ ರಾಜ್ಯ, ಯಾರ ಸ್ಥಾನ, ಯಾವ ದಿನಾಂಕ ತಿಳಿಯಿರಿ
  • ಪಂಚಾಯಿತಿಯಿಂದಿಡಿದು ಲೋಕಸಭೆಯವರೆಗೂ ನಾವು ಬಿಜೆಪಿಯನ್ನು ಸೋಲಿಸುತ್ತೇವೆ: ಮಮತಾ ಬ್ಯಾನರ್ಜಿ
  • 2 ಗೂಡ್ಸ್ ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ, ಹಳಿ ತಪ್ಪಿದ 12 ಬೋಗಿ
  • ಗಂಡಾಗಿ ಬದಲಾಗಲಿರುವ ಪಶ್ಚಿಮ ಬಂಗಾಳ ಮಾಜಿ ಸಿಎಂ ಪುತ್ರಿ: ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧಾರ
  • ಪಂಚಾಯತ್ ಚುನಾವಣೆ: ಬಿಜೆಪಿಗೆ ಸೇರ್ಪಡೆಯಾಗಿದ್ದಕ್ಕಾಗಿ ಪಶ್ಚಾತ್ತಾಪ ಪಟ್ಟ ಬುಡಕಟ್ಟು ಮಹಿಳೆಗೆ ಟಿಎಂಸಿ ಟಿಕೆಟ್!
  • ದೇಶದ ಕೆಲವು ರಾಜ್ಯಗಳಲ್ಲಿ ತೀವ್ರ ಶಾಖ, ಕೆಲವು ಪ್ರದೇಶಗಳಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ
  • West Bengal Violence: ಕೇಂದ್ರ ಸಚಿವರ ಬೆಂಗಾವಲು ವಾಹನಗಳ ಮೇಲೆ ಬಾಂಬ್‌- ನನಗೇನೂ ಗೊತ್ತಿಲ್ಲವೆಂದ ಟಿಎಂಸಿ
  • ಪ್ರಧಾನಿ ಮೋದಿಗೆ ಮಾವಿನ ಹಣ್ಣುಗಳನ್ನು ಕಳುಹಿಸಿದ ಮಮತಾ ಬ್ಯಾನರ್ಜಿ- ಯಾವು ತಳಿಗಳು ತಿಳಿಯಿರಿ
  • ಒಡಿಶಾ ತ್ರಿವಳಿ ರೈಲು ದರುಂತದ ಹಿಂದೆ ಟಿಎಂಸಿ ಪಿತೂರಿ: ಸುವೆಂದು ಅಧಿಕಾರಿ

English summary

Bengal panchayat violence: West Bengal Chief Minister Mamata Banerjee said she given a free hand to the state police to probe on panchayat elections violence. know more.

Story first published: Wednesday, July 12, 2023, 21:14 [IST]

Source link