ಚುನಾವಣಾ ಮೈತ್ರಿ ಬಗ್ಗೆ ಯೋಚಿಸಲು ಇನ್ನೂ ಸಮಯವಿದೆ: ಪವನ್ ಕಲ್ಯಾಣ್ | Andhra Pradesh elections: Still time to think about electoral alliance says Pawan Kalyan

India

oi-Mamatha M

|

Google Oneindia Kannada News

ಅಮರಾವತಿ, ಜುಲೈ. 09: ಆಂಧ್ರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಪವನ್ ಕಲ್ಯಾಣ್ ಮಾತನಾಡಿದ್ದಾರೆ. ಸಮಗ್ರ ಅಧ್ಯಯನದ ನಂತರವೇ ಚುನಾವಣಾ ಮೈತ್ರಿ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಜನಸೇನಾ ಪಕ್ಷದ (ಜೆಎಸ್‌ಪಿ) ಮುಖ್ಯಸ್ಥ ಪವನ್ ಕಲ್ಯಾಣ್ ಸಮರ್ಥಿಸಿಕೊಂಡಿದ್ದಾರೆ. ಮೈತ್ರಿ ಬಗ್ಗೆ ಯೋಚಿಸಲು ಇನ್ನೂ ಸಮಯವಿದೆ ಎಂದು ಹೇಳಿದ್ದಾರೆ.

‘ಚುನಾವಣೆಗೆ ಒಬ್ಬರೇ ಹೋಗಬೇಕೋ ಅಥವಾ ಒಟ್ಟಿಗೆ ಹೋಗಬೇಕೋ ಎಂಬ ವಿಚಾರವನ್ನು ನಂತರ ಚರ್ಚಿಸಲಾಗುವುದು. ಈ ಬಗ್ಗೆ ಮಂಡಲ ಮಟ್ಟದಲ್ಲಿ ಸಮಗ್ರ ಅಧ್ಯಯನ ನಡೆಸಿ ಮೈತ್ರಿ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು. ಶ್ರಮಪಟ್ಟರೆ ತಾನಾಗಿಯೇ ಅಧಿಕಾರ ಸಿಗುತ್ತದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Andhra Pradesh elections

ಮಂಗಳಗಿರಿಯ ಜನಸೇನಾ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಕ್ಷೇತ್ರದ ಉಸ್ತುವಾರಿ ಹಾಗೂ ವೀಕ್ಷಕರ ಸಭೆಯಲ್ಲಿ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಮಾತನಾಡಿ, ಜೆಎಸ್‌ಪಿ ಜನರೊಂದಿಗೆ ಅಪಾರವಾಗಿದೆ ಬೆರೆಯುತ್ತಿದೆ. ಅವಳಿ ಗೋದಾವರಿ ಜಿಲ್ಲೆಗಳಲ್ಲಿ ಇದು ಹೆಚ್ಚಾಗಿದೆ ಎಂದಿದ್ದಾರೆ.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದ ಪವನ್ ಕಲ್ಯಾಣ್, ಪ್ರತಿಯೊಂದು ಪಕ್ಷವೂ ಕಾನೂನಿನ ನಿಯಮಕ್ಕೆ ಬದ್ಧವಾಗಿರಬೇಕು ಎಂದು ಹೇಳಿದ್ದಾರೆ. ಆದರೆ ಆಡಳಿತಾರೂಢ ವೈಎಸ್‌ಆರ್‌ಸಿ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮತ್ತು ಆಡಳಿತ ಪಕ್ಷದ ನಾಯಕರ ಹಾದಿ ತಪ್ಪಿದೆ. ವೈಎಸ್‌ಆರ್‌ಸಿ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಉತ್ತುಂಗಕ್ಕೇರಿದೆ ಎಂದು ತಿಳಿಸಿದ್ದಾರೆ.

ವೈಎಸ್‌ಆರ್‌ಸಿ ಅಧಿಕಾರಕ್ಕೆ ಬಂದ ಎರಡು ತಿಂಗಳೊಳಗೆ ನಾವು ರಸ್ತೆಗೆ ಬರುವಂತೆ ಮಾಡಲಾಯಿತು. ವೈಎಸ್‌ಆರ್‌ಸಿಯನ್ನು ಆಯ್ಕೆ ಮಾಡಿದ ಒಂದೇ ವಾರದಲ್ಲಿ ಜನರಿಗೆ ತಮ್ಮ ತಪ್ಪಿನ ಅರಿವಾಯಿತು. ಕೆಲವರಿಗೆ ಒಂದೇ ದಿನದಲ್ಲಿ ಅರ್ಥವಾದರೆ, ಈಗ ಶೇ.70ರಷ್ಟು ಜನರು ಅದನ್ನು ಅರಿತುಕೊಂಡಿದ್ದಾರೆ ಎಂದು ಆಡಳಿತರೂಢ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಆಂಧ್ರಪ್ರದೇಶದ ಜನರು ಸಿಎಂ ಜಗನ್ ಮೋಹನ್ ರೆಡ್ಡಿ ಗುಲಾಮರಲ್ಲ ಎಂದ ಪವನ್ ಕಲ್ಯಾಣ್ಆಂಧ್ರಪ್ರದೇಶದ ಜನರು ಸಿಎಂ ಜಗನ್ ಮೋಹನ್ ರೆಡ್ಡಿ ಗುಲಾಮರಲ್ಲ ಎಂದ ಪವನ್ ಕಲ್ಯಾಣ್

ವಾರಾಹಿ ವಿಜಯ ಯಾತ್ರೆಯ ಎರಡನೇ ಹಂತವನ್ನು ಭಾನುವಾರ ಪ್ರಾರಂಭಿಸಲಾಗಿದೆ. ಮೊದಲು, ಪವನ್ ಕಲ್ಯಾಣ್ ಅವರು ಆಂತರಿಕ ಸಮಿತಿ ಸದಸ್ಯರನ್ನು ಭೇಟಿ ಮಾಡಿ ನಂತರ ತಳಮಟ್ಟದಲ್ಲಿ ಯಾತ್ರೆಯ ಯಶಸ್ಸಿಗೆ ಶ್ರಮಿಸಿದವರಿಗೆ ವಂದಿಸಿದ್ದಾರೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಜೆಎಸ್‌ಪಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲಿದೆ . ವಾರಾಹಿ ಯಾತ್ರೆಗೆ ಜನರಿಂದ ಅಪಾರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪಕ್ಷವನ್ನು ಜನರು ಸ್ವೀಕರಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಾರಾಹಿ ಯಾತ್ರೆಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ ಎಂದು ಹೇಳಿರುವ ಜೆಎಸ್‌ಪಿ ರಾಜಕೀಯ ವ್ಯವಹಾರಗಳ ಸಮಿತಿ ಅಧ್ಯಕ್ಷ ನಾದೆಂದ್ಲ ಮನೋಹರ್, ಯಾತ್ರೆಯು ವಿಶೇಷವಾಗಿ ಯುವಕರು ಮತ್ತು ಮಹಿಳೆಯರಿಂದ ಹೆಚ್ಚು ಗಮನ ಸೆಳೆದಿದೆ ಎಂದು ಹೇಳಿದೆ.

English summary

Andhra Pradesh elections: Decision on electoral alliance will be taken only after a comprehensive study says Jana Sena Party (JSP) chief Pawan Kalyan. know more.

Story first published: Sunday, July 9, 2023, 17:10 [IST]

Source link