ಚೀನಾ & ಅಮೆರಿಕ ಬೆಂಕಿಯಲ್ಲಿ ಚಳಿ ಕಾಯಿಸಿಕೊಂಡ ಸರ್ವಾಧಿಕಾರಿ? | North Korea developing their relationship with China and Russia more than ever

International

oi-Malathesha M

|

Google Oneindia Kannada News

ಚೀನಾ ಹಾಗೂ ಅಮೆರಿಕ ಸಂಬಂಧ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಸಂದರ್ಭದಲ್ಲೇ, ಉತ್ತರ ಕೊರಿಯಾ ಸರ್ವಾಧಿಕಾರಿ ಅಲರ್ಟ್ ಆಗಿದ್ದಾನೆ. ತೈವಾನ್ ವಿಚಾರದಲ್ಲಿ ಚೀನಾದ ಜೊತೆ ದ್ವೇಷ ಕಟ್ಟಿಕೊಂಡ ಅಮೆರಿಕ ಮತ್ತದರ ಸ್ನೇಹಿತರಿಗೆ ಕಿಮ್ ಜಾಂಗ್ ಉನ್ ತನ್ನದೇ ಸ್ಟೈಲ್‌ನಲ್ಲಿ ತಿರುಗೇಟು ನೀಡಲು ಸಜ್ಜಾಗಿದ್ದಾನೆ. ಅದರಲ್ಲೂ ಎರಡೂ ರಾಷ್ಟ್ರಗಳ ಮಧ್ಯೆ ಹೊತ್ತಿದ ಕಿಚ್ಚಿನಲ್ಲಿ ಕಿಮ್ ಚಳಿ ಕಾಯಿಸಿಕೊಳ್ತಿದ್ದಾನಾ? ಎಂಬ ಅನುಮಾನ ಕಾಡ್ತಿದೆ.

ಹೌದು, ಪರಮಾಣು ಅಸ್ತ್ರ ಹೊಂದಿರುವ ಉತ್ತರ ಕೊರಿಯಾ ಜೊತೆ ಸ್ನೇಹ ಸಂಬಂಧವನ್ನ ಬಲಪಡಿಸಲು ಚೀನಾ ಪ್ರತಿಕ್ಷಣ ಯತ್ನಿಸುತ್ತಿದೆ. ಅದ್ರಲ್ಲೂ ಅಮೆರಿಕ ಮತ್ತು ಉ.ಕೊರಿಯಾ ಮಧ್ಯೆ ಕಿರಿಕ್ ಶುರುವಾದ ಬಳಿಕ ಅಮೆರಿಕ ಎಂಟ್ರಿಕೊಟ್ಟು ದೊಡ್ಡಣ್ಣನಿಗೆ ಶಾಕ್ ನೀಡಿದೆ. ಮೊನ್ನೆ ಮೊನ್ನೆ ತಾನೆ ರಷ್ಯಾ ರಕ್ಷಣಾ ಸಚಿವರು ಉತ್ತರ ಕೊರಿಯಾಗೆ ಭೇಟಿ ನೀಡಿದ್ದರು. ಈ ಬೆನ್ನಲ್ಲೇ ‍ಚೀನಾದ ಉನ್ನತ ಅಧಿಕಾರಿ ಕೂಡ ಉತ್ತರ ಕೊರಿಯಾಗೆ ವಿಸಿಟ್ ಕೊಟ್ಟಿದ್ದು ಭಾರಿ ಕುತೂಹಲ ಕೆರಳಿಸಿದೆ. ಅಮೆರಿಕ ವಿರುದ್ಧ ಚೀನಾ ಮತ್ತು ರಷ್ಯಾ ಜೊತೆಗೆ ಉತ್ತರ ಕೊರಿಯಾ ಕೂಡ ಕೈಜೋಡಿಸುತ್ತಿರುವುದು ಈ ಮೂಲಕ ಪಕ್ಕಾ ಆಗುತ್ತಿದೆ.

North Korea developing their relationship with China and Russia more than ever

ಉತ್ತರ ಕೊರಿಯಾಗೆ ಚೀನಾ ಬಲ!

ಅಂದಹಾಗೆ ಉತ್ತರ ಕೊರಿಯಾ ಸಂಕಷ್ಟಕ್ಕೆ ಸಿಲುಕಿದ ಪ್ರತಿ ಕ್ಷಣವೂ ಚೀನಾ ಸಹಾಯಕ್ಕಾಗಿ ಬಂದೇ ಬರುತ್ತದೆ. ಇದು ಪದೇ ಪದೆ ಸಾಬೀತು ಕೂಡ ಆಗಿದೆ. ಈಗ ಮತ್ತೊಮ್ಮೆ ಚೀನಾದ ಉನ್ನತ ನಿಯೋಗ ಉತ್ತರ ಕೊರಿಯಾಗೆ ಭೇಟಿ ನೀಡಿದೆ. ಈ ಮೂಲಕ ಅಮೆರಿಕದ ಜೊತೆಗೆ ಚೀನಾ ಸಂಬಂಧ ಹಳಸುವಾಗ ಉತ್ತರ ಕೊರಿಯಾ & ಚೀನಾ ಮತ್ತಷ್ಟು ಹತ್ತಿರವಾಗುತ್ತಿವೆ. ಕೊರಿಯನ್‌ ಯುದ್ಧದ 70ನೇ ವಾರ್ಷಿಕೋತ್ಸವ ಆಚರಿಸಿಕೊಂಡ ಉತ್ತರ ಕೊರಿಯಾಗೆ ರಷ್ಯಾ ಮತ್ತು ಚೀನಾ ಭರ್ಜರಿ ಗಿಫ್ಟ್ ಕೂಡ ಕೊಡುತ್ತಿವೆ ಎಂಬ ಮಾತಿದೆ. ಈ ಎಲ್ಲಾ ಚರ್ಚೆಗಳ ನಡುವೆ ರಷ್ಯಾ ಹಾಗೂ ಚೀನಾದ ಉನ್ನತ ಅಧಿಕಾರಿಗಳು ಕಿಮ್ ಜಾಂಗ್ ಉನ್ ಭೇಟಿಯಾಗಿ ಶುಭ ಕೋರಿದ್ದಾರೆ.

ಉಕ್ರೇನ್ ಯುದ್ಧದಲ್ಲಿ ರಷ್ಯಾಗೆ ಬೆಂಬಲ!

ಕೆಲ ದಿನಗಳ ಹಿಂದಷ್ಟೇ ರಷ್ಯಾ ಮತ್ತು ಉಕ್ರೇನ್ ಯುದ್ಧದ ಬಗ್ಗೆ ಮಾತನಾಡಿದ್ದ ಕಿಮ್ ಜಾಂಗ್ ಉನ್ ರಷ್ಯಾ ಪರ ಉಕ್ರೇನ್ ನಿಲ್ಲಲಿದೆ ಎಂಬ ಸಂದೇಶ ನೀಡಿದ್ದ. ಅಲ್ಲದೆ ರಷ್ಯಾ ನಡೆಸುತ್ತಿರುವ ಯುದ್ಧವನ್ನು ಕಿಮ್ ಜಾಂಗ್ ಉನ್ ಬಹಿರಂಗವಾಗಿ ಸಮರ್ಥಿಸಿದ್ದ. ಎಲ್ಲಾ ಬೆಳವಣಿಗೆ ನಡುವೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿತ್ತು. ರಷ್ಯಾ ರಕ್ಷಣ ಸಚಿವರೇ ನೇರ ಉ.ಕೊರಿಯಾಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದರು. ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾದ ತಿಕ್ಕಾಟ ಜೋರಾಗಿರುವ ಸಂದರ್ಭದಲ್ಲೇ ಇಂತಹ ಬೆಳವಣಿಗೆ ನಡೆದಿದ್ದು ಭಾರಿ ಅಚ್ಚರಿ ಮೂಡಿಸಿತ್ತು.

ಈ ಎಲ್ಲಾ ಘಟನೆಗಳನ್ನ ನೋಡುತ್ತಿದ್ದರೆ ಜಗತ್ತು ಮೆಲ್ಲಗೆ ಇಬ್ಭಾಗವಾಗುತ್ತಾ ಸಾಗುತ್ತಿರುವ ಮುನ್ಸೂಚನೆ ಸಿಗುತ್ತಿದೆ. ಅದ್ರಲ್ಲೂ ಅಮೆರಿಕ ಅಂದ್ರೆ ಕೆಂಡ ಕಾರುವ ಕಿಮ್ ಜಾಂಗ್ ಉನ್ ಚೀನಾ & ರಷ್ಯಾ ಜೊತೆಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾನೆ. ಕಳೆದ 1 ವರ್ಷದಲ್ಲಿ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಸಮುದ್ರಕ್ಕೆ ಉಡಾಯಿಸಿರುವ ಉತ್ತರ ಕೊರಿಯಾ ಸರ್ವಾಧಿಕಾರಿ, ತಾನು ಯುದ್ಧಕ್ಕೆ ಸಿದ್ಧ ಎಂಬ ಸಂದೇಶವನ್ನು ಪದೇ ಪದೆ ನೀಡುತ್ತಿದ್ದಾನೆ.

North Korea developing their relationship with China and Russia more than ever

ಅತ್ತ ರಷ್ಯಾ ಹಾಗೂ ಉಕ್ರೇನ್ ನಡುವೆ ಭೀಕರ ಕಾಳಗ ನಡೆಯುತ್ತಿದ್ದು, ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲೂ ಪರಿಸ್ಥಿತಿ ಕೈಮೀರುವ ಸ್ಥಿತಿ ನಿರ್ಮಾಣವಾಗಿದೆ. ಅತ್ತ ಅಮೆರಿಕ ಕೂಡ ಉತ್ತರ ಕೊರಿಯಾಗೆ ಸಿಟ್ಟು ತರಿಸುವ ಕೆಲಸ ಮಾಡುತ್ತಿದೆ, ಉತ್ತರ ಕೊರಿಯಾ ಕೂಡ ಅಮೆರಿಕಗೆ ವಿರುದ್ಧವಾದ ಕೆಲಸವನ್ನೇ ಮಾಡುತ್ತಿದೆ. ಆದರೆ ತಪ್ಪೇ ಮಾಡದ ಅಮಾಯಕ ರಾಷ್ಟ್ರಗಳು ಯುದ್ಧ ಭೀತಿ ಎದುರಿಸುವಂತಾಗಿದ್ದು ದುರಂತವೇ ಸರಿ.

English summary

North Korea developing their relationship with China and Russia more than ever

Story first published: Sunday, July 30, 2023, 17:47 [IST]

Source link