“ಚಿತ್ರರಂಗ‌ ಮತ್ತು ಪ್ರೇಕ್ಷಕನ ಸಂಬಂಧ ಕಡಿದು ಹೋಗಿಲ್ಲ.. ಬದಲಾಗಿದೆ, ಮುಂದೆಯೂ ಬದಲಾಗುತ್ತೆ” | Kannada Film Industry and Audience Relationships Never End, but it Will Change

bredcrumb

Features

oi-Muralidhar S

By ವಿಜಯ್ ವಿ.

|

ಒಂದೆರಡು
ದಿನದ
ಹಿಂದೆ
ನಾನು
ಅಮೇಜಾನ್
ಪ್ರೈಮ್‌ನಲ್ಲಿ
ಕನ್ನಡದ
‘ಡೇರ್
ಡೆವಿಲ್
ಮುಸ್ತಫಾ

ಸಿನಿಮಾವನ್ನು
ನೋಡಿದೆ.ಹೆಚ್ಚು
ಗಲಾಟೆ,
ಬೇಡವೆನಿಸುವ
ಹಾಡು,
ಅಬ್ಬರ
ಏನು
ಇಲ್ಲದೆ
ಅಚ್ಚುಕಟ್ಟಾಗಿ
ಮಾಡಿರುವ
ಒಂದು
ಕನ್ನಡ
ಸಿನಿಮಾ.
ಅದು
ಕನ್ನಡದ
ಪ್ರಮುಖ
ಬರಹಗಾರರಾದ
ಪೂರ್ಣಚಂದ್ರ
ತೇಜಸ್ವಿಯವರ
‘ಅಬಚೂರಿನ
ಪೋಸ್ಟಾಫೀಸು’
ಕಥಾ
ಸಂಕಲನದಲ್ಲಿ
ಬರುವ
‘ಡೇರ್‌
ಡೆವಿಲ್
ಮುಸ್ತಫಾ’ದ
ಕಥೆಯನ್ನು
ಆಧರಿಸಿ
ಮಾಡಿದ್ದ
ಸಿನಿಮಾ.

ಸಿನಿಮಾದ‌‌
ತಾರಾಂಗಣದಲ್ಲಿ
ಹಿರಿಯ
ಕಲಾವಿದರಾದ
ಉಮೇಶ್
ಸರ್‌
ಮತ್ತು
ಮಂಡ್ಯ
ರಮೇಶರನ್ನು
ಬಿಟ್ಟರೆ
ಮಿಕ್ಕವರೆಲ್ಲ
ಹೊಸಬರೇ.
ಹಾಗಿದ್ದರೂ

ಸಿನಿಮಾವನ್ನು
ಮೆಚ್ಚುವಂತಹ
ರೀತಿಯಲ್ಲಿ
ಮಾಡಿದ್ದಾರೆ..

ಇಲ್ಲಿ
ಗಮನಿಸಬೇಕಾದ
ವಿಷಯ
ಅಂದ್ರೆ‌
ನಾನು

ಚಿತ್ರವನ್ನು
ನೋಡಿದ್ದು
ಓಟಿಟಿ
ಪ್ಲಾಟ್
ಫಾರ್ಮನಲ್ಲಿ.
ನನ್ನ
ಹಾಗೆ
ಹಲವಾರು
ಮಂದಿ
ಅದನ್ನು
ಚಿತ್ರಮಂದಿರದಲ್ಲಿ
ನೋಡದೆ
ಓಟಿಟಿಯಲ್ಲಿ
ನೋಡಿರುತ್ತಾರೆ
ಅನ್ನೋದು
ನಿಜ.
ಇದೇ
ವಿಷಯವಾಗಿ
ಸಿನಿಮಾ
ತಯಾರಕರು
ಚಿತ್ರಮಂದಿರಗಳಿಗೆ
ಪ್ರೇಕ್ಷಕರು
ಬರುತ್ತಿಲ್ಲ
ಅನ್ನೋ
ಅಳಲು
ತೋಡಿಕೊಳ್ಳುತ್ತಿದ್ದಾರೆ.
ಅದಕ್ಕೆ‌
ಕಾರಣವು
ಹಲವಾರು
ಇದೆ.

Kannada Film Industry and Audience Relationships Never End, but it Will Change

ಕನ್ನಡ
ಚಿತ್ರರಂಗದಲ್ಲಿ
2022ರಲ್ಲಿ
ತೆರಕಂಡ
ಸಿನಿಮಾಗಳ
ಸಂಖ್ಯೆ
210ಕ್ಕೂ
ಹೆಚ್ಚು.
ಡಿಸೆಂಬರ್
ಕೊನೆಯ
ವಾರ
ಅಂದ್ರೆ
ಡಿಸೆಂಬರ್
30ರಂದು
ಒಂದೇ‌
ದಿನ
9
ಸಿನಿಮಾ
ಬಿಡುಗಡೆಯಾಗಿದೆ.
ಅಷ್ಟು
ಸಿನಿಮಾ‌
ಯಾಕೆ‌
ಒಟ್ಟಿಗೆ
ಬಿಡುಗಡೆ
ಮಾಡಿದರು
ಅನ್ನೋದು

ಚಿತ್ರತಂಡಗಳಿಗೆ‌
ಬಿಟ್ಟಿದ್ದು.
ಇಲ್ಲಿ
ಪ್ರೇಕ್ಷಕನ
ಸ್ಥಿತಿಯನ್ನು
ನೋಡಿ.
ಮಧ್ಯಮ
ಅಥವಾ
ಕಡಿಮೆ
ಆದಾಯದ
ವರ್ಗದವರಿಗೆ
9
ಸಿನಿಮಾ
ನೋಡು
ಅಂದ್ರೆ,
ಅದು
ಒಂದೇ
ವಾರದಲ್ಲಿ
ಅವರು
ಯಾವುದನ್ನು
ತಾನೇ
ನೋಡಿಯಾರು!!

ಒಂದು
ಸಿನಿಮಾಗೆ
ಹೋಗಿಬರಬೇಕು
ಅಂದ್ರೆ
ಈಗ
1000ರೂ.ಗಿಂತ
ಕಮ್ಮಿ
ಖರ್ಚು
ಆಗಲ್ಲ.
ಹೋಗುವಾಗ
ಬರುವಾಗ
ತಮ್ಮದೇ
ವಾಹನ
ಇದ್ದರೆ
ಅದಕ್ಕೆ
ಇಂಧನ
ಹಾಕಿಸಬೇಕು.
ಆಟೋ,
ಓಲಾ‌,
ಊಬರ್
ಅಂದ್ರೆ
ಅವರು
ಹಾಕಿದಷ್ಟು
ದುಡ್ಡುಕೊಡಬೇಕು.
ಟಿಕೆಟ್‌
ದುಡ್ಡು,
ಪಾರ್ಕಿಂಗ್
ದುಡ್ಡು
,
ಮಧ್ಯಂತರದಲ್ಲಿ
ಚಿಪ್ಸ್
,
ಪಾಪ್‌
ಕಾರ್ನ್,
ಪೆಪ್ಸಿ
ಹೀಗೆ
ಖರ್ಚು
ಕಟ್ಟಿಟ್ಟ
ಬುತ್ತಿ.

ಹೌದು,
ಸಿಂಗಲ್
ಸ್ಕ್ರೀನ್‌
ಇರುವ
ಚಿತ್ರಮಂದಿರದಲ್ಲಿ
ಕಡಿಮೆ
ಆಗಬಹುದು.
ಆದ್ರೆ,
ಅಲ್ಲಿ
ಶೌಚಾಲಯಗಳು,
ಆಸನಗಳು
ಚೆನ್ನಾಗಿ
ಇರಲ್ಲ.
ಹೆಣ್ಣು
ಮಕ್ಕಳಂತೂ

ಶೌಚಾಲಯಗಳನ್ನು
ಉಪಯೋಗಿಸದೇ
ಇದ್ದರೇನೇ
ಒಳ್ಳೆಯದು.
ಹಳೇ
ಕಾಲದ
ಚಿತ್ರಮಂದಿರಗಳು
ಆಗಿರೋದ್ರಿಂದ
ಸರಿಯಾದ‌
ಪಾರ್ಕಿಂಗ್
ವ್ಯವಸ್ಥೆ
ಸಿಗಲ್ಲ.
ತಪ್ಪು
ಜಾಗದಲ್ಲಿ
ನಿಲ್ಲಿಸಿ
ಹೋದರೆ‌
ಆಗ
ಫ಼ೈನ್
ಕಟ್ಟಬೇಕು.
ಇಲ್ಲ
ವಾಹನಗಳನ್ನು
ಟ್ರಾಫಿಕ್
ಪೋಲಿಸ್
ಏನಾದ್ರೂ
ಎತ್ತಿಕೊಂಡು
ಹೋದ್ರೆ,
ಇನ್ನಷ್ಟು
ದುಡ್ಡು,
ಸಮಯ,
ಶ್ರಮ
ಎಲ್ಲ
ವ್ಯರ್ಥ.

Kannada Film Industry and Audience Relationships Never End, but it Will Change

ನಾವು
ಚಿಕ್ಕವರಿರುವಾಗ
ಪರ್ಯಾಯ
ವ್ಯವಸ್ಥೆ
ಇರಲಿಲ್ಲ.
ಈಗಿನ
ಕಾಲದಲ್ಲಿ
ಇಬ್ಬರು
,
ಮೂವರು
ದುಡಿಯುವ
ವಿಭಕ್ತ
ಕುಟುಂಬದಲ್ಲಿ
ಒಂದು
ನೂರು
ರುಪಾಯಿ
ಜಾಸ್ತಿ
ಆದ್ರೂ
ಪರವಾಗಿಲ್ಲ
ಗುಣಮಟ್ಟ
ಬೇಕು
ಅಂತ
ಜನರು
ಅಭಿಪ್ರಾಯಪಡುತ್ತಾರೆ.
ಅದಕ್ಕೆ‌
ಮಲ್ಟಿಪ್ಲೆಕ್ಸ್‌
ಕಡೆ
ಮುಖ
ಮಾಡುತ್ತಿದ್ದಾರೆ.

ಹಾಗಂತ
ಅವರೆಲ್ಲ
ದುಡ್ಡು
ಪೋಲು
ಮಾಡುತ್ತಾರೆ
ಅಂತ
ಅಲ್ಲ.
ಮುಂಚೆ
1000ರೂ.
ಖರ್ಚು
ಮಾಡಿ
10
ಸಿನಿಮಾ
ನೋಡುತ್ತಿದ್ದ‌
ಮಂದಿ
ಇದೀಗ
2000
ಖರ್ಚು
ಮಾಡಿ
5
ಸಿನಿಮಾವನ್ನು
ನೋಡುತ್ತಿದ್ದಾರೆ.
ಸಿನಿಮಾ‌
ರಿಲೀಸ್‌ಗೂ
ಮುಂಚೆಯೇ
ಯಾವುದನ್ನು
ನಾವು
ಚಿತ್ರಮಂದಿರದಲ್ಲಿ
ನೋಡುತ್ತೇನೆ,
ಯಾವುದನ್ನು
ನೋಡುವುದಿಲ್ಲ
ಅನ್ನೋದನ್ನ
ಪ್ರೇಕ್ಷಕರು
ನಿರ್ಧರಿಸಿ
ಬಿಡುತ್ತಾರೆ.

ಕೋವಿಡ್
ಪ್ರೇಕ್ಷಕನಿಗೆ
ಪರ್ಯಾಯ
ವ್ಯವಸ್ಥೆಯನ್ನು
ಮತ್ತಷ್ಟು
ಸುಲಭ
ಮಾಡಿತು.
ನಾನಾ
ವಿಧವಾದ‌
ಓಟಿಟಿಗಳು
ಮಾರುಕಟ್ಟೆಗೆ‌
ಲಗ್ಗೆ
ಇಟ್ಟಿತು.
ನಾನಾ‌
ವಿಧವಾದ‌,
ನಾನಾ
ಭಾಷೆಯ
ಸಿನಿಮಾಗಳು,
ಸೀರಿಯಲ್‌ಗಳು
ಸಾಮಾನ್ಯ
ಪ್ರೇಕ್ಷಕನಿಗೆ
ನೋಡಲು
ಸಿಕ್ಕಿತು.
ಇದರಿಂದ
ಪ್ರೇಕ್ಷಕನ
ಅಭಿರುಚಿ
ಬದಲಾದದ್ದು
ಮಾತ್ರವಲ್ಲ
ಅವನಿಗೆ
ಎಲ್ಲ
ಭಾಷೆಯ,
ಎಲ್ಲ
ಕಲಾವಿದರ
ಬಗ್ಗೆ‌
ತಿಳುವಳಿಕೆ
ಮೂಡಿತು.
ಡಬ್ಬಿಂಗ್‌
ಮತ್ತು
ಸಬ್
ಟೈಟಲ್‌ಗಳು
ಎಲ್ಲಾ
ಭಾಷೆಯ
ಸಿನಿಮಾ‌
ನೋಡಲು
ಅನುವು
ಮಾಡಿಕೊಡ್ತು.
ಇದರ‌
ನೇರ‌
ಪರಿಣಾಮ
ಅಂದ್ರೆ‌‌
ರೀಮೇಕ್
ಚಿತ್ರಗಳು
ಓಡದೇ
ಇರುವುದು.
ಯಾಕೆ
ಅಂದ್ರೆ‌,
ಪ್ರೇಕ್ಷಕನು
ಅದು
ರೀಮೇಕ್
ಸಿನಿಮಾ
ಅಂತ‌
ತಿಳಿದ
ಕೂಡಲೇ
ಮೂಲ
ಸಿನಿಮಾವನ್ನು
ಓಟಿಟಿಯಲ್ಲಿ
ನೋಡಿಬಿಡುತ್ತಾನೆ.

ಓಟಿಟಿಗೂ
ಶುಲ್ಕವನ್ನು
ಕೊಟ್ಟು
ನೋಡುತ್ತೇವೆ
ಅನ್ನೋ
ವಿಷಯವನ್ನು
ನೆನೆಪಿನಲ್ಲಿ
ಇಡಬೇಕಾಗತ್ತೆ.
ಕನಿಷ್ಠ
5
ಓಟಿಟಿ
ಕಂಪನಿಗಳು
ಇವೆ.
ಒಂದೊಂದರಲ್ಲಿ
ಒಂದೊಂದು
ಸಿನಿಮಾ/ಸೀರಿಸ್‌ಗಳು
ಬರುತ್ತವೆ.
ಹೀಗಿರುವಾಗ
ಓಟಿಟಿಗೂ
ದುಡ್ಡು
ಕೊಟ್ಟು,
ಚಿತ್ರಮಂದಿರದಲ್ಲೂ
ದುಡ್ಡು
ಕೊಟ್ಟು
ನೋಡುವುದು
ಜನರಿಗೆ‌
ದುಬಾರಿ
ಅನಿಸುತ್ತದೆ.

ಮೊದಲು
ಚಿತ್ರಮಂದಿರದಲ್ಲಿ
ಸಿನಿಮಾ‌
ಬಿಡುಗಡೆಯಾಗಿ
ವರ್ಷಗಳು
ಕಳೆದ
ಮೇಲೆ
ಟಿವಿಯಲ್ಲಿ
ಮೊದಲ
ಬಾರಿಗೆ‌
ಬರುವ
ಒಂದು
ಕಾಲವಿತ್ತು.
ಅದಕ್ಕೆ
ಜನರು
ಚೆನ್ನಾಗಿರುವ‌
ಸಿನಿಮಾವನ್ನು
ಚಿತ್ರಮಂದಿರದಲ್ಲಿ
ನೋಡಲೇ
ಬೇಕು
ಅನ್ನೋ
ಮನೋಭಾವದಲ್ಲಿ
ಇದ್ದರು.ಆದ್ರೆ‌
ಈಗಿನ
ವೇಗದ
ಜಗತ್ತಿನಲ್ಲಿ
ಚಿತ್ರ‌
ಬಿಡುಗಡೆಯಾದ
ಹತ್ತು
ಹದಿನೈದು
ದಿನದಲ್ಲಿ
ಓಟಿಟಿಯಲ್ಲಿ
ಬಿಡುಗಡೆಯಾದ
ನಿದರ್ಶನ
ಇದೆ.
ಆಗ
ಒಬ್ಬ
ಪ್ರೇಕ್ಷಕ
ಹದಿನೈದು
ದಿನ
ಕಾದರೆ‌
ಆಯ್ತು.
ಅಂತಹ
ವ್ಯತ್ಯಾಸ
ಆಗೋದಿಲ್ಲ
ಅನ್ನೋ
ಮನೋಭಾವದಲ್ಲಿ
ಇರ್ತಾನೆ.

ಹಲವು
ಬಾರಿ
ಸಿನಿಮಾದ
ಗುಣಮಟ್ಟ
ತುಂಬ
ಪ್ರಮುಖವಾಗುತ್ತೆ.
ಜನರು
ತಮ್ಮ
ನೆಚ್ಚಿನ
ನಾಯಕ
ನಟರ
ಸಿನಿಮಾ‌
ನೋಡಲು
ಮುಗಿಬೀಳ್ತಾರೆ.
ಆದ್ರೆ,‌
ಸಿನಿಮಾ‌
ಸುಮಾರು
ಅಥವಾ
ಕಳಪೆಯಾಗಿದ್ದರೆ‌
ಆಗ
ಅವರು
ಬೇರೆ
ಸಿನಿಮಾಗಳ
ಮೇಲೂ
ನಂಬಿಕೆ‌
ಕಳೆದುಕೊಳ್ತಾರೆ.
ದುಡ್ಡು
,
ಸಮಯ
,
ಶ್ರಮ
ಮತ್ತು
ಅವರ
ಮನೋರಂಜನೆಯ
ಅಭಿಲಾಷೆ
ಹಾಳಾಗಿದ್ದರಿಂದ

ಭಾಷೆಯ
ಚಿತ್ರಗಳನ್ನು
/ಆ
ಭಾಷೆಯ
ನಾಯಕ
ನಟರನ್ನು
ಬೈದು
ಸಿನಿಮಾಗೆ‌‌
ಹೋಗೋದು
ಕಡಿಮೆ
ಮಾಡ್ತಾರೆ.
ಮುಂದಿನ
ಸಿನಿಮಾಗಳಿಗೆ
ಹೋಗುವ
ಮೊದಲು
ರಿವ್ಯೂಗೆ
ಕಾಯ್ತಾರೆ.

ಮನಸ್ಥಿತಿಯಿಂದ
ದೊಡ್ಡ‌
ನಷ್ಟ
ಆಗೋದು
ಹೊಸಬರ
ಚಿತ್ರಕ್ಕೆ.
ಯಾಕೆ
ಅಂದ್ರೆ,
ಜನರ
ರಿವ್ಯೂ
ನೋಡಿ,
ವರ್ಡ್
ಆಫ್
ಮೌತ್‌ನಿಂದ
ಸಿನಿಮಾ
ಚೆನ್ನಾಗಿದೆ
ಅಂತ
ಗೊತ್ತಾಗಿ
ಹೆಚ್ಚು
ಪ್ರೇಕ್ಷಕರು
ಆ‌
ಸಿನಿಮಾ‌
ನೋಡಲು
ಬರುವುದಕ್ಕೆ
ಮುಂಚೆ

ಚಿತ್ರ‌
ಚಿತ್ರಮಂದಿರಗಳಿಂದ
ಎತ್ತಂಗಡಿ
ಆಗಿರುತ್ತೆ!

ಕೊನೆಯದಾಗಿ,
ಇತರೇ
ಖರ್ಚುಗಳು
ಕೂಡ
ಜಾಸ್ತಿ
ಆಗಿದೆ
ಮತ್ತು
ಆಗ್ತಿದೆ‌
ಅನ್ನೋದು
ಒಪ್ಪಲೇಬೇಕು.
ಕರೆಂಟು,
ನೀರು,
ಧವಸ
ಧಾನ್ಯ,
ಮನೆ
ಬಾಡಿಗೆ,
ಇಎಂಐ,
ಮಕ್ಕಳ
ಓದು,
ಆಸ್ಪತ್ರೆ
ಖರ್ಚು,
‌ದೇಶಿ/ವಿದೇಶಿ
ಪಯಣಗಳು
ಇತ್ಯಾದಿ.
ಇದೆಲ್ಲದರ
ಮಧ್ಯೆಯೂ
ಪ್ರೇಕ್ಷಕನು
ಸಿನಿಮಾ‌
ನೋಡುವುದನ್ನು
ಬಿಟ್ಟಿಲ್ಲ.ಆದ್ರೆ‌
ನೋಡುವುದರ‌
ಆಯ್ಕೆಯಲ್ಲಿ
ಜಾಣನಾಗಿದ್ದಾನೆ.

ಇಲ್ಲಿ
ಸಮಸ್ಯೆ‌
ಸಿನಿಮಾ‌
ಮಾಡುವವರು
ಅಲ್ಲ,
ನೋಡುವವರು
ಅಲ್ಲ.
ಹೇಗೆ
ಸಿನಿಮಾ
ಮಾಡುವವರು
ತಮ್ಮ
ಸಮಸ್ಯೆಗಳು,
ಇತಿ
ಮಿತಿಗಳಿಂದ
ಹೋದ
ಡಿಸೆಂಬರ್‌ನಲ್ಲಿ
ಒಂದೇ
ವಾರದಲ್ಲಿ
9
ಸಿನಿಮಾ‌
ಬಿಡುಗಡೆ
ಮಾಡಿದರೋ..
ಅದೇ
ರೀತಿ
ಸಿನಿ
ಪ್ರೇಕ್ಷಕನು
ಕೂಡ
ತನಗೆ‌
ಇರುವ
ಆಯ್ಕೆಗಳನ್ನು,
ಸಮಸ್ಯೆಗಳನ್ನು
ಅಳೆದು-
ತೂಗಿ
ಸಿನಿಮಾ‌
ನೋಡುತ್ತಿದ್ದಾನೆ.
ಚಿತ್ರರಂಗ‌
ಮತ್ತು
ಪ್ರೇಕ್ಷಕನ
ಸಂಬಂಧ
ಕಡಿದು
ಹೋಗಿಲ್ಲ,
ಬದಲಾಗಿದೆ,
ಮುಂದೆಯೂ
ಬದಲಾಗುತ್ತದೆ
ಅನ್ನೋದರಲ್ಲಿ
ಎರಡು
ಮಾತಿಲ್ಲ.

English summary

Kannada Film Industry and Audience Relationships Never End, but it Will Change, know more.

Monday, June 26, 2023, 21:50

Story first published: Monday, June 26, 2023, 21:50 [IST]

Source link