Tamil
oi-Narayana M
‘ಕೈದಿ’
ಸಿನಿಮಾ
ಮೂಲಕ
ಸಂಚಲನ
ಸೃಷ್ಟಿಸಿದ
ತಮಿಳು
ನಿರ್ದೇಶಕ
ಲೋಕೇಶ್
ಕನಕರಾಜ್
ಶಾಕಿಂಗ್
ನ್ಯೂಸ್
ಕೊಟ್ಟಿದ್ದಾರೆ.
ಆದಷ್ಟು
ಬೇಗ
ಚಿತ್ರರಂಗಕ್ಕೆ
ಗುಡ್‌ಬೈ
ಹೇಳುವುದಾಗಿ
ಸುಳಿವು
ನೀಡಿದ್ದಾರೆ.
ಸದ್ಯ
ಇಳಯ
ದಳಪತಿ
ವಿಜಯ್
ನಟನೆಯ
‘ಲಿಯೋ’
ಚಿತ್ರಕ್ಕೆ
ಲೋಕೇಶ್
ಆಕ್ಷನ್
ಕಟ್
ಹೇಳುತ್ತಿದ್ದಾರೆ.
ನಂತರ
ತಲೈವಾ
171
ಚಿತ್ರ
ನಿರ್ದೇಶಿಸುವ
ಬಗ್ಗೆ
ಗುಸುಗುಸು
ಕೇಳಿಬರ್ತಿದೆ.
2017ರಲ್ಲಿ
‘ಮಾನಗರಂ’
ಚಿತ್ರದಿಂದ
ಲೋಕೇಶ್
ಸ್ವತಂತ್ರ
ನಿರ್ದೇಶಕರಾಗಿದ್ದರು.
ಬಳಿಕ
‘ಕೈದಿ’,
‘ಮಾಸ್ಟರ್’
ಹಾಗೂ
ಕಮಲ್
ಹಾಸನ್
ನಟನೆಯ
‘ವಿಕ್ರಂ’
ಸಿನಿಮಾಗಳಿಂದ
ಬಾಕ್ಸಾಫೀಸ್
ಶೇಕ್
ಮಾಡಿದ್ದರು.
ಇದೀಗ
ದಕ್ಷಿಣ
ಭಾರತದ
ಚಿತ್ರರಂಗದ
ಬಹು
ಬೇಡಿಕೆಯ
ಫಿಲ್ಮ್
ಮೇಕರ್
ಎನಿಸಿಕೊಂಡಿದ್ದಾರೆ.
ಆದರೆ
ಲೋಕೇಶ್
ಇನ್ನು
4
ಸಿನಿಮಾಗಳ
ಬಳಿಕ
ಚಿತ್ರರಂಗದಿಂದ
ದೂರಾಗುತ್ತಾರೆ
ಎನ್ನುವ
ಸುದ್ದಿ
ಕಾಲಿವುಡ್‌ನಲ್ಲಿ
ಹರಿದಾಡುತ್ತಿದೆ.
ಸ್ವತಃ
ಲೋಕೇಶ್
ಕನಕರಾಜ್
ಈ
ಬಗ್ಗೆ
ಮಾತನಾಡಿದ್ದಾರೆ.
ಆ
4
ಸಿನಿಮಾಗಳಲ್ಲಿ
ರಜನಿಕಾಂತ್-
ಯಶ್
ಸಿನಿಮಾ
ಇದ್ಯಾ?
ಎನ್ನುವ
ಪ್ರಶ್ನೆ
ಎದ್ದಿದೆ.

ವಿಜಯ್
ನಟನೆಯ
‘ಲಿಯೋ’
ಸಿನಿಮಾ
ಭಾರೀ
ನಿರೀಕ್ಷೆ
ಹುಟ್ಟಾಕ್ಕಿದೆ.
ಈ
ಕಥೆ
ಕೂಡ
ಲೋಕೇಶ್
ಕನಕರಾಜ್
ಸಿನಿಮ್ಯಾಟಿಕ್
ಯೂನಿವರ್ಸ್‌ನಲ್ಲಿ
ಇದೆ
ಎನ್ನಲಾಗ್ತಿದೆ.
ತ್ರಿಶಾ,
ಪ್ರಿಯಾ
ಆನಂದ್,
ಮನ್ಸೂರ್
ಅಲಿಖಾನ್,
ಸಂಜಯ್
ದತ್
ಸೇರಿದಂತೆ
ಘಟಾನುಘಟಿ
ಕಲಾವಿದರು
ಈ
ಆಕ್ಷನ್
ಎಂಟರ್‌ಟೈನರ್
ಚಿತ್ರದಲ್ಲಿ
ನಟಿಸುತ್ತಿದ್ದಾರೆ.
ಪ್ರೀ
ರಿಲೀಸ್
ಬ್ಯುಸಿನೆಸ್‌ನಿಂದಲೇ
ಸಿನಿಮಾ
ಸಿಕ್ಕಾಪಟ್ಟೆ
ಸದ್ದು
ಮಾಡ್ತಿದೆ.
ಚಿತ್ರರಂಗಕ್ಕೆ
ಲೋಕೇಶ್
ಗುಡ್‌ಬೈ?
ಬಹುಬೇಡಿಕೆಯ
ಸಿನಿಮಾ
ನಿರ್ದೇಶಕ
ಲೋಕೇಶ್
ಕನಕರಾಜ್
10
ಸಿನಿಮಾಗಳ
ಬಳಿಕ
ಚಿತ್ರರಂಗಕ್ಕೆ
ಗುಡ್
ಬೈ
ಹೇಳುವುದಾಗಿ
ಹೇಳಿಕೊಂಡಿದ್ದಾರೆ.
“ನನ್ನ
ಕರಿಯರ್‌ನಲ್ಲಿ
ಹೆಚ್ಚು
ಸಿನಿಮಾ
ಮಾಡಬೇಕು
ಎನ್ನುವ
ಪ್ಲ್ಯಾನ್
ನನಗೆ
ಇಲ್ಲ.
ಚಿತ್ರರಂಗದಲ್ಲಿ
ಏನಾದರೂ
ಮಾಡೋಣ
ಅಂತ
ನಾನು
ಇಲ್ಲಿಗೆ
ಬಂದೆ
ಅಷ್ಟೇ.
ಲೋಕೇಶ್
ಸಿನಿಮ್ಯಾಟಿಕ್
ಯೂನಿವರ್ಸ್
ಸಾಧ್ಯವಾಗಿದ್ದು
ನಿರ್ಮಾಪಕರ
ನಂಬಿಕೆ
ಮತ್ತು
ಸಹಾಯದಿಂದ.
ಹಾಗಾಗಿ
ನಾನು
ನಿರ್ಮಾಪಕರಿಗೆ
ಮತ್ತು
ಎಲ್ಲ
ನಟರ
ಅಭಿಮಾನಿಗಳಿಗೆ
ಕೃತಜ್ಞನಾಗಿ
ಇರುತ್ತೇನೆ.
ನಾನು
10
ಸಿನಿಮಾ
ಮಾಡಿದ
ಬಳಿಕ
ಚಿತ್ರರಂಗ
ತೊರೆಯುತ್ತೇನೆ”
ಎಂದು
ಮಾತನಾಡಿದ್ದಾರೆ.

5ನೇ
ಸಿನಿಮಾ
‘ಲಿಯೋ’
ಲೋಕೇಶ್
ಕನಕರಾಜ್
ಹೇಳಿದ್ದನ್ನು
ಕೇಳಿದರೆ
ಸದ್ಯ
4
ಸಿನಿಮಾಗಳನ್ನು
ಕಂಪ್ಲೀಟ್
ಆಗಿದೆ.
ಎಲ್ಲಾ
ಸಿನಿಮಾಗಳು
ಗೆದ್ದಿದೆ.
ಇದೀಗ
5ನೇ
ಸಿನಿಮಾ
‘ಲಿಯೋ’
ಶೂಟಿಂಗ್
ಹಂತದಲ್ಲಿದೆ.
ಬಹಳ
ವೇಗವಾಗಿ
ಸಿನಿಮಾ
ಚಿತ್ರೀಕರಣ
ನಡೀತಿದ್ದು
ಆದಷ್ಟು
ಬೇಗ
ಸಿನಿಮಾಗಳನ್ನು
ಮಾಡಿ
ಮುಗಿಸುತ್ತಿದ್ದಾರೆ.
ಬೇರೆ
ಸ್ಟಾರ್
ನಿರ್ದೇಶಕರ
ರೀತಿ
ಲೋಕೇಶ್
ಸಿನಿಮಾ
ಮಾಡಲು
ಹೆಚ್ಚು
ಸಮಯ
ತೆಗೆದುಕೊಳ್ಳುವುದಿಲ್ಲ.
‘ಲಿಯೋ’
ಚಿತ್ರವನ್ನು
ಅಕ್ಟೋಬರ್
19ಕ್ಕೆ
ತೆರೆಗೆ
ತರುವ
ಪ್ರಯತ್ನ
ನಡೀತಿದೆ.
ರಜನಿ-
ಯಶ್
ಚಿತ್ರಕ್ಕೆ
ಆಕ್ಷನ್
ಕಟ್?
ಎಲ್ಲಾ
ಫಿಲ್ಮ್
ಮೇಕರ್ಸ್‌ಗೂ
ರಜನಿಕಾಂತ್
ಜೊತೆ
ಸಿನಿಮಾ
ಮಾಡುವ
ಆಸೆ
ಇರುತ್ತೆ.
ಲೋಕೇಶ್
ಕನಕರಾಜ್
–
ತಲೈವಾ
ಕಾಂಬಿನೇಷನ್
ಸಿನಿಮಾ
ಬಗ್ಗೆ
ಗುಸುಗುಸು
ಕೇಳಿಬರುತ್ತಿದೆ.
ರಜನಿ
ಈಗಾಗಲೇ
168
ಸಿನಿಮಾಗಳನ್ನು
ಮುಗಿಸಿದ್ದಾರೆ.
169ನೇ
ಸಿನಿಮಾ
‘ಲಾಲ್
ಸಲಾಂ’
ಚಿತ್ರೀಕರಣ
ನಡೀತಿದೆ.
ನಂತರ
ಜ್ಞಾನವೇಲ್
ನಿರ್ದೇಶನದ
ಚಿತ್ರಕ್ಕೆ
ಗ್ರೀನ್
ಸಿಗ್ನಲ್
ಕೊಟ್ಟಿದ್ದಾರೆ.
ಇದೀಗ
ತಲೈವಾ171
ಸಿನಿಮಾ
ಬಗ್ಗೆ
ಕ್ರೇಜಿ
ನ್ಯೂಸ್‌ವೊಂದು
ಹರಿದಾಡ್ತಿದೆ.
ಈ
ಚಿತ್ರಕ್ಕೆ
ಲೋಕೇಶ್
ಕನಕರಾಜ್
ಆಕ್ಷನ್
ಕಟ್
ಹೇಳಲಿದ್ದು
ಯಶ್
ಗೆಸ್ಟ್
ಅಪಿಯರೆನ್ಸ್
ಮಾಡ್ತಾರೆ
ಎನ್ನಲಾಗ್ತಿದೆ.
ಆದರೆ
ಇದು
ಎಷ್ಟರಮಟ್ಟಿಗೆ
ನಿಜ
ಎನ್ನುವುದನ್ನು
ಕಾದು
ನೋಡಬೇಕಿದೆ.
ಪ್ರತಿಭಾನ್ವಿತ
ವಿದ್ಯಾರ್ಥಿನಿಗೆ
ಡೈಮಂಡ್
ನೆಕ್ಲೆಸ್:’ಅಸುರನ್’
ಡೈಲಾಗ್
ಹೇಳಿ
ಪೊಲಿಟಿಕಲ್
ಎಂಟ್ರಿ
ಸುಳಿವು
ಕೊಟ್ರಾ
ದಳಪತಿ??
ಕ್ವಿಂಟಿನ್
ಹಾದಿಯಲ್ಲಿ
ಲೋಕೇಶ್
ನಿರ್ದೇಶಕ
ಲೋಕೇಶ್
ಕನಕರಾಜ್
ಹಾಲಿವುಡ್
ಫಿಲ್ಮ್
ಮೇಕರ್ಸ್
ಕ್ವಿಂಟಿನ್
ಟೆರೆಂಟಿನೊ
ಸಿನಿಮಾಗಳಿಂದ
ಹೆಚ್ಚು
ಪ್ರಭಾವಿತರಾಗಿದ್ದಾರೆ.
ಅದನ್ನು
ಖುದ್ದು
ಲೋಕೇಶ್
ಸಂದರ್ಶನಗಳಲ್ಲಿ
ಹೇಳಿಕೊಂಡಿದ್ದಾರೆ.
ದಶಕದ
ಹಿಂದೆ
ಕ್ವಿಂಟಿನ್
ಟೆರೆಂಟಿನೊ
ಕೂಡ
10
ಸಿನಿಮಾಗಳ
ನಂತರ
ಚಿತ್ರರಂಗಕ್ಕೆ
ಗುಡ್‌ಬೈ
ಹೇಳುವುದಾಗಿ
ಹೇಳಿದ್ದರು.
ಅದೇ
ರೀತಿಯಲ್ಲಿ
ಲೋಕೇಶ್
ಕೂಡ
ಈಗ
ಸುಳಿವು
ನೀಡಿದಂತೆ
ಕಾಣುತ್ತಿದೆ.
ಹಾಗಾದರೆ
ಲೋಕೇಶ್
ನಿರ್ದೇಶಿಸುವ
ಇನ್ನುಳಿದ
5
ಸಿನಿಮಾಗಳು
ಯಾವ್ದು?
ಎನ್ನುವ
ಕುತೂಹಲ
ಮೂಡಿದೆ.
English summary
Leo Director Lokesh Kanagaraj planning to quit after 10 films. Yash may act with Rajinikanth in Lokesh Kanagaraj Directional Thalaivar171. know more.
Tuesday, June 20, 2023, 9:20
Story first published: Tuesday, June 20, 2023, 9:20 [IST]