Features
oi-Narayana M
ಕಳೆದೆರಡು
ವಾರಗಳಿಂದ
ಕನ್ನಡ
ಚಿತ್ರರಂಗ
ಹೊಸ
ಹುರುಪಿನಲ್ಲಿದೆ.
‘ಹಾಸ್ಟೆಲ್
ಹುಡುಗರು
ಬೇಕಾಗಿದ್ದಾರೆ’,
‘ಆಚಾರ್
ಅಂಡ್
ಕೋ’,
‘ಕೌಸಲ್ಯ
ಸುಪ್ರಜಾ
ರಾಮ’
ಸಿನಿಮಾಗಳು
ಪ್ರೇಕ್ಷಕರ
ಮನಗೆದ್ದಿದೆ.
ಅಶ್ವಿನಿ
ಪುನೀತ್
ರಾಜ್ಕುಮಾರ್
ನಿರ್ಮಾಣದ
‘ಆಚಾರ್
ಅಂಡ್
ಕೋ’
ಸಿನಿಮಾ
ಫ್ಯಾಮಿಲಿ
ಪ್ರೇಕ್ಷಕರನ್ನು
ಸೆಳೆಯುವಲ್ಲಿ
ಯಶಸ್ವಿಯಾಗಿದೆ.
ಈ
ಚಿತ್ರದ
ಪ್ರಚಾರದ
ವೇಳೆ
ಅಶ್ವಿನಿ
ತಮ್ಮ
ಬಾಲ್ಯ
ನೆನೆದಿದ್ದಾರೆ.
ಮೊದಲಿನಿಂದಲೂ
ಅಶ್ವಿನಿ
ಪುನೀತ್
ರಾಜ್ಕುಮಾರ್
ಕ್ಯಾಮರಾಗಳಿಗೆ
ದೂರವೇ
ಉಳಿದಿದ್ದರು.
ಬಹಳ
ಹಿಂದೆ
ಅಪ್ಪು
ಜೊತೆ
ಜಾಹೀರಾತು
ಭಾಗವಾಗಿ
ಒಮ್ಮೆ
ಸಂದರ್ಶನದಲ್ಲಿ
ಭಾಗಿ
ಆಗಿದ್ದರು.
ಆ
ಬಳಿಕ
ಎಂದೂ
ಕ್ಯಾಮರಾ
ಮುಂದೆ
ಕೂತವರಲ್ಲ.
ಅಪ್ಪು
ಅಗಲಿಕೆಯ
ಬಳಿಕ
ಪಿಆರ್ಕೆ
ಪ್ರೊಡಕ್ಷನ್ಸ್
ಜವಾಬ್ದಾರಿ
ವಹಿಸಿಕೊಂಡಿರುವ
ದೊಡ್ಮನೆ
ಸೊಸೆ
ಒಳ್ಳೆ
ಸಿನಿಮಾಗಳನ್ನು
ಪ್ರೇಕ್ಷಕರಿಗೆ
ನೀಡುವ
ಪಣ
ತೊಟ್ಟಿದ್ದಾರೆ.
ಅಪ್ಪು
ಕೇಳಿದ್ದ
ಕಥೆಗಳಲ್ಲಿ
‘ಆಚಾರ್
ಅಂಡ್
ಕೋ’
ಕೂಡ
ಒಂದಾಗಿದೆ.
ಜುಲೈ
28ರಂದು
ಸಿನಿಮಾ
ಬಿಡುಗಡೆಯಾಗಿ
ಉತ್ತಮ
ಪ್ರದರ್ಶನ
ಕಾಣುತ್ತಿದೆ.
ಅನುಶ್ರೀ
ಆಂಕರ್
ಯೂಟ್ಯೂಬ್
ಸಂದರ್ಶನದಲ್ಲಿ
‘ಆಚಾರ್
ಅಂಡ್
ಕೋ’
ಚಿತ್ರತಂಡ
ಭಾಗಿ
ಆಗಿದೆ.
ಅಶ್ವಿನಿ
ಪುನೀತ್
ರಾಜ್ಕುಮಾರ್
ಕೂಡ
ಸಾಕಷ್ಟು
ವಿಚಾರಗಳ
ಬಗ್ಗೆ
ಮಾತನಾಡಿದ್ದಾರೆ.
ಈ
ಚಿತ್ರದಲ್ಲಿ
60ರ
ದಶಕದ
ಕಥೆ
ಇದೆ.
ಎಲ್ಲರನ್ನೂ
50
ವರ್ಷ
ಹಿಂದಕ್ಕೆ
ಕರೆದುಕೊಂಡು
ಹೋಗುವ
ಸಿನಿಮಾ.
ಈ
ಬಗ್ಗೆ
ಮಾತನಾಡುತ್ತಾ
ಅಶ್ವಿನಿ
ತಮ್ಮ
ಬಾಲ್ಯದ
ದಿನಗಳಿಗೆ
ಜಾರಿದ್ದಾರೆ.
ಮಾತು,
ತಮಾಷೆ,
ಹರಟೆ
ಒಟ್ಟಾರೆ
ಇಡೀ
ಸಂದರ್ಶನ
ಸಖತ್
ಮಜವಾಗಿದೆ.
ಕೂಡು
ಕುಟುಂಬದ
ಕಥೆ
‘ಆಚಾರ್
ಅಂಡ್
ಕೋ’
ಚಿತ್ರದಲ್ಲಿದೆ.
ಹಾಗಾಗಿ
ಸಂದರ್ಶನದಲ್ಲಿ
ಮಾತನಾಡುತ್ತಾ
ಅಶ್ವಿನಿ
ಪುನೀತ್
ರಾಜ್ಕುಮಾರ್
ತಮ್ಮ
ಬಾಲ್ಯವನ್ನು
ನೆನೆದಿದ್ದಾರೆ.
“ಬಾಲ್ಯ
ಅಂದಾಕ್ಷಣ
ತೊಡುತ್ತಿದ್ದ
ಬಟ್ಟೆ,
ಅಜ್ಜಿ
ಮನೆಗೆ
ಹೋಗುವ
ಅನುಭವ.
ಮನೆ
ತುಂಬಾ
ಜನ.
ತಿಂಡಿಗಳು.
ಆ
ತಿಂಡಿಗಳನ್ನು
ಕದಿಯುವುದು
ಎಲ್ಲವೂ
ನೆನಪಾಗುತ್ತದೆ.
ನಾನು
ಕೂಡ
ತಿಂಡಿಗಳನ್ನು
ಕದಿಯುತ್ತಿದ್ದೆ.
ನಾನು
ಎಲ್ಲರಿಗಿಂತ
ದೊಡ್ಡವಳು.
ಹಾಗಾಗಿ
ನಾನೇ
ಕದ್ದಿದ್ದು
ಅಂತ
ಗೊತ್ತಾಗುತ್ತಿತ್ತು.
ಸುಮಾರಿ
ಬಾರಿ
ಕದ್ದು
ಸಿಕ್ಕಿಹಾಕಿಕೊಂಡಿದ್ದೆ”
ಎಂದಿದ್ದಾರೆ.
ಚಿಕ್ಕಂದಿನಲ್ಲಿ
ಟಿಪ್ಸ್
ಅಂದ್ರೆ
ಬಹಳ
ಇಷ್ಟಪಡುತ್ತಿದ್ದೆ.ಮದುವೆ
ಕಾರ್ಯಕ್ರಮಗಳಿಗೆ
ಹೋಗೋದು
ಬಹಳ
ಇಷ್ಟವಾಗುತ್ತಿತ್ತು.
ಆದರೆ
ಅಲಂಕಾರ
ಎಲ್ಲಾ
ಮಾಡಿಕೊಳ್ಳೋದು
ಇರುತ್ತಿರಲಿಲ್ಲ.
ನಾನು
ಸದಾ
ಟಾಮ್ಬಾಯ್
ರೀತಿ
ಇರುತ್ತಿದ್ದೆ.
ಆದರೆ
ಕಜೀನ್ಸ್
ಎಲ್ಲಾ
ಸೇರಿ
ಎಂಜಾಯ್
ಮಾಡುತ್ತಿದ್ದೆವು.
ಎಲ್ಲರೂ
ಸೇರಿ
ಚೌಕಾಬಾರ
ಆಡುತ್ತಿದ್ದೆವು.
ಇವತ್ತಿಗೂ
ನಮ್ಮ
ಮಕ್ಕಳ
ಜೊತೆ
ಆಡುತ್ತೇನೆ.
ಅಜ್ಜಿ
ಕಥೆ
ಹೇಳುತ್ತಿದ್ದರು.
ಅವರು
ಅಂದ್ರೆ
ಇಷ್ಟ
ಇರ್ತಿತ್ತು.
ನಾವು
ಕಜೀನ್ಸ್
ಎಲ್ಲಾ
ಸೇರಿ
ನಾವು
35
ಜನ
ಮಕ್ಕಳು
ಇರ್ತಿದ್ವಿ.”
“ಚಿಕ್ಕಮಗಳೂರನಲ್ಲಿ
ನಮ್ಮ
ಅಜ್ಜಿ
ಮನೆ.
ಎಲ್ಲರೂ
ಅಲ್ಲಿ
ಸೇರುತ್ತಿದ್ದೆವು.
ಆಟ
ಆಡುತ್ತಾ
ಎಂಜಾಯ್
ಮಾಡುತ್ತಿದ್ದೆವು.
ಇವತ್ತಿಗೂ
ಎಲ್ಲರೂ
ಟಚ್ನಲ್ಲಿ
ಇದ್ದೀವಿ.
ಗಣಿತ
ಅಂದರೆ
ಬಹಳ
ಕಷ್ಟವಾಗುತ್ತಿತ್ತು.
ಗಣಿತ
ಹೋಂವರ್ಕ್
ಮಾಡುತ್ತಿರಲಿಲ್ಲ.
ನಮ್ಮ
ಆಂಟಿನೇ
ಪ್ರಿನ್ಸಿಪಲ್
ಆಗಿದ್ದರು.
ಇದರಿಂದ
ಬಹಳ
ಸಮಸ್ಯೆ
ಆಗುತ್ತಿತ್ತು.
ಬಳಿಕ
ಕಲಿಯಲು
ಆರಂಭಿಸಿದೆ.
ಗಣಿತ
ಪುಸ್ತಕ
ನೋಡಿದರೆ
ಶಾಲೆಗೆ
ಹೋಗೋದು
ಬೇಡ
ಎನಿಸುತ್ತಿತ್ತು.
ಬ್ಯಾಡ್ಮಿಟನ್
ಬಹಳ
ಆಡುತ್ತಿದ್ದೆ”
ಎಂದು
ತಮ್ಮ
ಬಾಲ್ಯದ
ನೆನಪುಗಳನ್ನು
ಬಿಚ್ಚಿಟ್ಟಿದ್ದಾರೆ.
English summary
Achar and co Promotion: Ashwini Puneeth Rajkumar recalls her childhood memories. know more.
Sunday, July 30, 2023, 8:54
Story first published: Sunday, July 30, 2023, 8:54 [IST]