ಚಾಂಪಿಯನ್ಸ್ ಟ್ರೋಫಿಯಲ್ಲಿ ಹೆಚ್ಚು ಪ್ರಯಾಣ ಬೆಳೆಸಿದ ಟೀಮ್ ಯಾವುದು? ಜರ್ನಿಯೇ ಮಾಡದ ತಂಡ ಭಾರತ!

ಕ್ರಿಕ್ ಟ್ರಾಕರ್ ವರದಿಯ ಪ್ರಕಾರ, ಟೀಮ್ ಇಂಡಿಯಾ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಒಂದೇ ಸ್ಥಳದಲ್ಲಿ ಆಡಿದ್ದರಿಂದ ಪ್ರಯಾಣಿಸಲೇ ಇಲ್ಲ. ಹೋಟೆಲ್​ನಿಂದ ಮೈದಾನ, ಮೈದಾನದಿಂದ ಹೋಟೆಲ್​ಗಷ್ಟೇ ಪ್ರಯಾಣಿಸಿತ್ತು. ಟೂರ್ನಿಯಲ್ಲಿ ನ್ಯೂಜಿಲೆಂಡ್ ಹೆಚ್ಚು ಪ್ರಯಾಣಿಸಿದ ತಂಡ ಎನಿಸಿಕೊಂಡಿದೆ. ನ್ಯೂಜಿಲೆಂಡ್ 7,048 ಕಿಲೋಮೀಟರ್ ಪ್ರಯಾಣಿಸಿದೆ. ದುಬೈನಲ್ಲಿ ಭಾರತ ವಿರುದ್ಧ 2 ಪಂದ್ಯಗಳನ್ನು ಆಡಿರುವ ನ್ಯೂಜಿಲೆಂಡ್, ಪಾಕಿಸ್ತಾನದಲ್ಲಿ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್​ನಲ್ಲೂ ಪಂದ್ಯಗಳನ್ನು ಆಡಿದೆ. ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ. ಈ ತಂಡವು ಒಟ್ಟು ಸುಮಾರು 3,286 ಕಿಲೋಮೀಟರ್ ಪ್ರಯಾಣಿಸಿದೆ. ಇದು ಕರಾಚಿ, ರಾವಲ್ಪಿಂಡಿ ಮತ್ತು ದುಬೈ ನಡುವೆ ಪ್ರಯಾಣ ಬೆಳೆಸಿತ್ತು. ವಾಸ್ತವವಾಗಿ, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕೊನೆಯ ಲೀಗ್ ಪಂದ್ಯದ ಸಮಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ದುಬೈಗೆ ಹೋಗಬೇಕಾಗಿತ್ತು. ಒಂದು ವೇಳೆ ಭಾರತ ಕೊನೆಯ ಲೀಗ್ ಪಂದ್ಯದಲ್ಲಿ ಸೋತಿದ್ದರೆ, ಸೆಮಿಫೈನಲ್​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಬೇಕಿತ್ತು.

Source link