‘ಚಂದ್ರಯಾನ -3’ ಉಡಾವಣೆಗೆ ಕೌಂಟ್‌ಡೌನ್: ಶುರುವಾಯ್ತು ಢವಢವ! | ISRO started preparation for Chandrayaan 3 launch

India

oi-Malathesha M

|

Google Oneindia Kannada News

ನವದೆಹಲಿ: ಚಂದ್ರಯಾನ-3 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇನ್ನೇನು ಕೆಲವೇ ದಿನದಲ್ಲಿ ಭಾರತ ಬಾಹ್ಯಾಕಾಶ ಲೋಕದಲ್ಲಿ ಮತ್ತೊಂದು ಮೈಲಿಗಲ್ಲು ಮುಟ್ಟಲಿದೆ. ಇದೇ ರಣಕ್ಕೆ ಇಸ್ರೋ ವಿಜ್ಞಾನಿಗಳು ಸಿದ್ಧತೆ ನಡೆಸುತ್ತಿದ್ದು, ‘ಚಂದ್ರಯಾನ -3’ರ ಬಾಹ್ಯಾಕಾಶ ನೌಕೆ ಹೊಂದಿರುವ ಪೇಲೋಡ್ ಫೇರಿಂಗ್ ಜಿಯೋಸಿಂಕ್ರೊನಸ್ ಲಾಂಚ್ ವೆಹಿಕಲ್ ಮಾರ್ಕ್ III (GSLV Mk-III) ಜೊತೆಗೆ ಜೋಡಣೆ ಮಾಡಲಾಗಿದೆ. ಅಂದರೆ ಉಡಾವಣೆಗೆ ಅಧಿಕೃತ ಸಿದ್ಧತೆ ಶುರುವಾಗಿದೆ.

ಹೌದು, ‘ಚಂದ್ರಯಾನ -3’ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-III ಮೂಲಕ ಲಾಂಚ್ ಆಗಲಿದೆ. ಇಸ್ರೋ ಸಂಸ್ಥೆ ಜುಲೈ 13ರ ಮಧ್ಯಾಹ್ನ 2.30ಕ್ಕೆ ಮುಹೂರ್ತ ಫಿಕ್ಸ್ ಮಾಡಿದೆ. ಅತ್ಯಂತ ಸೂಕ್ಷ್ಮ ತಂತ್ರಜ್ಞಾನ ಬಳಸಿರುವ ಚಂದ್ರಯಾನ ನೌಕೆ ಹಲವು ವಿಶೇಷತೆ ಹೊಂದಿದೆ. ಬಾಹ್ಯಾಕಾಶ ವಿಜ್ಞಾನಿಗಳ ಕುತೂಹಲದ ಕೇಂದ್ರ ಬಿಂದುವಾಗಿರುವ ಚಂದ್ರನ ದಕ್ಷಿಣ ಧ್ರುವದ ಅಧ್ಯಯನ ನಡೆಸುವುದೇ ಈ ಯೋಜನೆಯ ಟಾರ್ಗೆಟ್. ಹೀಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತ ಉಡಾಯಿಸುವ ಚಂದ್ರಯಾನ-3 ನೌಕೆ ಲ್ಯಾಂಡ್ ಆಗಲಿದೆ. ಹೀಗಾಗಿ ಇನ್ನೇನು ಕೆಲವೇ ದಿನ ಬಾಕಿ ಇದ್ದಾಗ ಉಡಾವಣೆಗೆ ಬೇಕಾದ ಅಂತಿಮ ಹಂತದ ಸಿದ್ಧತೆಗಳು ಅಬ್ಬರದಿಂದ ಸಾಗಿವೆ (Chandrayaan 3 Launch).

preparation for Chandrayaan 3 launch

ಉಡಾವಣೆ ದಿನಾಂಕ ಮುಂದಕ್ಕೆ ಹೋಗುತ್ತಾ?

ಇನ್ನು ‘ಯುಆರ್ ರಾವ್’ ಉಪಗ್ರಹ ಕೇಂದ್ರದಲ್ಲಿ 3900 ಕಿಲೋ ತೂಕವಿರುವ ಬಾಹ್ಯಾಕಾಶ ನೌಕೆಯನ್ನು ರಾಕೆಟ್‌ನ ಪೇಲೋಡ್ ಫೇರಿಂಗ್‌ನಲ್ಲಿ ಅಳವಡಿಸಲಾಯಿತು. ನಂತರ ಭೂಮಿಯ ಕಕ್ಷೆ ಹೊರಗೆ ತಳ್ಳುವ ರಾಕೆಟ್‌ನಲ್ಲಿ ಸಂಯೋಜಿಸಲು ಸ್ಥಳಾಂತರ ಮಾಡಲಾಗಿದೆ. ಈ ರಾಕೆಟ್​ ಭೂಮಿಯಿಂದ ಸುಮಾರು 3,84,000 ಕಿಲೋಮೀಟರ್ ದೂರದಲ್ಲಿರುವ ನೈಸರ್ಗಿಕ ಉಪಗ್ರಹ ಚಂದ್ರನತ್ತ ಹಾರಲಿದೆ. ಹೀಗಾಗಿ ಅಗತ್ಯವಿರುವ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ ಇಸ್ರೋ. ಆದರೆ ಈ ಸಂದರ್ಭದಲ್ಲಿ ಮತ್ತೊಂದು ಚರ್ಚೆಯೂ ಶುರುವಾಗಿದ್ದು, ಉಡಾವಣೆ ದಿನಾಂಕ ಮುಂದಕ್ಕೆ ಹೋಗುತ್ತಾ? ಅಂತಾ. ಆ ಬಗ್ಗೆ ಇಸ್ರೋ ಅಧ್ಯಕ್ಷರೇ ಮಾಹಿತಿ ನೀಡಿದ್ದಾರೆ.

‘ಚಂದ್ರಯಾನ -3’ಕ್ಕೆ ವಾತಾವರಣ ಕೈಕೊಡುತ್ತಾ?

ಹೌದು, ಸಾಮಾನ್ಯವಾಗಿ ಒಂದು ವಿಮಾನ ಹಾರಬೇಕು ಎಂದರೆ ಎಷ್ಟೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇನ್ನು ಬಾಹ್ಯಾಕಾಶ ನೌಕೆ ಹಾರುವಾಗ ಪರಿಸ್ಥಿತಿ ಹೇಗೆ ಇರಬೇಡ? ನೀವೆ ಯೋಚಿಸಿ. ಈ ಕಾರಣಕ್ಕೆ ಇಸ್ರೋ ಕೇವಲ ಒಂದೇ ದಿನಾಂಕವನ್ನ ಫಿಕ್ಸ್ ಮಾಡಿಲ್ಲ. ಅಕಸ್ಮಾತ್ ಹವಾಮಾನ ವೈಪರಿತ್ಯ ಕಾರಣ ಏನಾದರೂ ಏರುಪೇರು ಎದುರಾಗಿ ಉಡಾವಣೆ ಸಾಧ್ಯವಾಗದಿದ್ದರೆ, ಇನ್ನೂ 6 ದಿನಗಳ ಡೇಟ್ ಬಾಕಿ ಇಟ್ಟುಕೊಂಡಿದೆ. ಇದನ್ನ ಇಸ್ರೋ ಅಧ್ಯಕ್ಷರೇ ತಿಳಿಸಿದ್ದಾರೆ. ಹಾಗಾದರೆ ಅಕಸ್ಮಾತ್ ‘ಚಂದ್ರಯಾನ -3’ ಉಡಾವಣೆಯ ದಿನಾಂಕ ಮುಂದೆ ಹೋದರೆ, ಹೊಸ ಡೇಟ್ ಯಾವಾಗ ಇರುತ್ತೆ? ಈ ಮಾಹಿತಿ ಇಲ್ಲಿದೆ.

preparation for Chandrayaan 3 launch

ಎಚ್ಚರ ತಪ್ಪಿದರೆ ಅಪಾಯ ಪಕ್ಕಾ!

ಅಂದಹಾಗೆ ಇಸ್ರೋ ಅಧ್ಯಕ್ಷರಾದ ಎಸ್.ಸೋಮನಾಥ್ ನೀಡಿರುವ ಮಾಹಿತಿಯ ಪ್ರಕಾರ, ‘ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಬೇಕಿದೆ. ಚಂದ್ರಯಾನ -3 ಉಡಾವಣೆಗೆ ಜುಲೈ 13 ಮೊದಲ ಸಂಭವನೀಯ ದಿನ ಹಾಗೇ ಇದನ್ನ ಬಿಟ್ಟರೆ ಉಡಾವಣೆ ದಿನಾಂಕ 19 ರವರೆಗೆ ಮುಂದೆ ಹೋಗಬಹುದು’ ಎಂದಿದ್ದಾರೆ. ಆದರೆ ಬಹುತೇಕ ಜುಲೈ 13ಕ್ಕೆ ಉಡಾವಣೆ ಡೇಟ್ ಫೈನಲ್ ಎನ್ನಬಹುದು. ಹಿಂದೆ ಹೇಳಿಕೆ ನೀಡಿದ್ದ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಜುಲೈ 12 ರಿಂದ ಜುಲೈ 19 ರ ನಡುವಿನ ಅವಧಿಯು ಉಡಾವಣೆಗೆ ಸೂಕ್ತ ಎಂದಿದ್ದರು. ಹೀಗೆ ಪರಿಸ್ಥಿತಿ ಅವಲೋಕನ ಮಾಡಿ ಇಸ್ರೋ ವಿಜ್ಞಾನಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ.

ಏನೆಲ್ಲಾ ಅಧ್ಯಯನ ನಡೆಸಲಿದೆ ಗೊತ್ತಾ?

ಅಂದಹಾಗೆ ‘ಚಂದ್ರಯಾನ-1’ ಮತ್ತು ‘ಚಂದ್ರಯಾನ-2’ಗೆ ಹೋಲಿಕೆ ಮಾಡಿದರೆ ಇದೀಗ ‘ಚಂದ್ರಯಾನ-3’ ಸಾಕಷ್ಟು ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ. ಚಂದ್ರನ ಸುತ್ತಲೂ ಅವರಿಸಿರುವ ಶಿಲಾ ಪದರದ ಮೇಲಿನ ಗಟ್ಟಿಗೊಂಡಿಲ್ಲದ ಘನಪದಾರ್ಥ ಅಧ್ಯಯನ ನಡೆಸುವ ಲೂನಾರ್ ರಿಗೊಲಿತ್, ಭೂಕಂಪನ ಅಧ್ಯಯನ ಮಾಡುವ ಲೂನಾರ್ ಸೆಸಿಮಿಸಿಟಿ, ಹೊರ ಆವರಣದ ಪ್ಲಾಸ್ಮಾ, ಬಾಹ್ಯಾಕಾಶ ನೌಕೆ ಇಳಿದ ಪ್ರದೇಶದಲ್ಲಿ ಧಾತುರೂಪದ ಸಂಯೋಜನೆ ಮುಂತಾದ ವಿಚಾರಗಳ ಅಧ್ಯಯನಕ್ಕೆ ಇಸ್ರೋ ಸಂಸ್ಥೆಯು ಸಜ್ಜಾಗಿದೆ. ಚಂದ್ರಯಾನ-3ರ ಇನ್ನೊಂದು ವಿಶೇಷತೆ ಏನೆಂದರೆ, ಬಾಹ್ಯಾಕಾಶ ನೌಕೆ ಜೊತೆಗೆ ರೋವರ್ ಕೂಡ ಚಂದ್ರನ ಅಂಗಳಕ್ಕೆ ಎಂಟ್ರಿ ಕೊಡಲಿದೆ (Chandrayan 3 Launch).

Chandrayan 3 Launch: ಚಂದ್ರಯಾನ-3 ಉಡಾವಣೆಗೆ ಡೇಟ್ ಫಿಕ್ಸ್: ಬಾಹ್ಯಾಕಾಶದಲ್ಲಿ ರಾರಾಜಿಸಲಿದೆ ಭಾರತದ ಬಾವುಟ!Chandrayan 3 Launch: ಚಂದ್ರಯಾನ-3 ಉಡಾವಣೆಗೆ ಡೇಟ್ ಫಿಕ್ಸ್: ಬಾಹ್ಯಾಕಾಶದಲ್ಲಿ ರಾರಾಜಿಸಲಿದೆ ಭಾರತದ ಬಾವುಟ!

ಚಂದ್ರ & ಭೂಮಿಯ ಸಂಬಂಧವೇ ಮಧುರ!

ಭೂಮಿ ಮತ್ತು ಚಂದ್ರನ ನಡುವೆ ಹೃದಯ ಹಾಗೂ ಮಿದುಳಿನ ಸಂಬಂಧ ಇದೆ. ಯಾಕೆ ಎಂಬ ಪ್ರಶ್ನೆಗೆ ಉತ್ತರ, ಚಂದ್ರನ ಚಲನೆಗಳೇ ಭೂಮಿಯ ಮೇಲೆ ಭೂಕಂಪನ ಸೇರಿದಂತೆ ಸಮುದ್ರದ ಉಬ್ಬರ ಇಳಿತಗಳನ್ನು ನಿರ್ಧರಿಸಲಿದೆ. ಇದೇ ಕಾರಣಕ್ಕೆ ‘ಚಂದ್ರಯಾನ-3’ರಲ್ಲಿ ಅತ್ಯಾಧುನಿಕ ಉಪಕರಣ ಅಳವಡಿಸಿ ಅಧ್ಯಯನ ನಡೆಸಲು ಇಸ್ರೋ ಸಿದ್ಧವಾಗಿದೆ. ಜೊತೆಗೆ ಭೂಮಿಯಿಂದ ಹೊಮ್ಮುವ ಬೆಳಕಿನ ಧ್ರುವೀಕರಣವನ್ನು ಚಂದ್ರನ ಕಕ್ಷೆಯಿಂದ ಅಧ್ಯಯನ ಮಾಡಲು ಪ್ಲ್ಯಾನ್ ರೂಪಿಸಲಾಗಿದೆ. ಹೀಗೆ ಕಾಲಕ್ಕೆ ತಕ್ಕಂತೆ ನಮ್ಮ ಇಸ್ರೋ ಸಂಸ್ಥೆ ಕೂಡ ಹೈಫೈ ತಂತ್ರಜ್ಞಾನ ಅಳವಡಿಸಿ ‘ಚಂದ್ರಯಾನ-3’ ಲಾಂಚ್ ಮಾಡುತ್ತಿದೆ.

English summary

ISRO started preparation for Chandrayaan 3 launch.

Story first published: Wednesday, July 5, 2023, 20:00 [IST]

Source link