Karnataka
oi-Gururaj S
ಬೆಂಗಳೂರು, ಜೂನ್ 25; ಕರ್ನಾಟಕ ಸರ್ಕಾರ ಗ್ರಾಮ ಪಂಚಾಯಿತಿಯ ಶಿಸ್ತು ಪ್ರಾಧಿಕಾರ ನಿರ್ದಿಷ್ಟಪಡಿಸಿರುವ ಬಗ್ಗೆ ಆದೇಶವೊಂದನ್ನು ಹೊರಡಿಸಿದೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳಿಗೆ ಈ ಕುರಿತು ಸೂಚನೆ ನೀಡಲಾಗಿದೆ.
ನವೀನ್ ಕುಮಾರ್ ಬಿ. ಉಪ ನಿರ್ದೇಶಕರು ಹಾಗೂ ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ (ಗ್ರಾ.ಪಂ) ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ ಈ ಕುರಿತು ಆದೇಶ ಹೊರಡಿಸಿದ್ದಾರೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳಿಗೆ ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರ ನಿರ್ದಿಷ್ಟಪಡಿಸಿರುವ ಬಗ್ಗೆ ಎಂಬ ವಿಷಯವನ್ನು ಆದೇಶ ಒಳಗೊಂಡಿದೆ.
ಪಿಡಿಒ ನೇಮಕಾತಿ; ಶೀಘ್ರವೇ ಅಧಿಸೂಚನೆ ಪ್ರಕಟ
ಸರ್ಕಾರದ ಅಧಿಸೂಚನೆ 3/10/2017. ಸರ್ಕಾರದ ಸುತ್ತೋಲೆ 18/01/2020 ಉಲ್ಲೇಖ ಮಾಡಿ ಈ ಆದೇಶ ಹೊರಡಿಸಲಾಗಿದೆ. ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳಿಗೆ ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿ(ಅಭಿವೃದ್ಧಿ) ಇವರುಗಳನ್ನು ನೇಮಕಾತಿ ಮತ್ತು ಶಿಸ್ತು ಪ್ರಾಧಿಕಾರಗಳನ್ನಾಗಿ ಪರಿಗಣಿಸಿದ್ದು, ಈ ನೌಕರರಿಗೆ ಇಲಾಖಾ ವಿಚಾರಣೆಯ ನಂತರ ಕಠಿಣ ದಂಡನೆ ವಿಧಿಸುವ ಅಧಿಕಾರವನ್ನು ಜಿಲ್ಲಾ ಪಂಚಾಯಿತಿಯ ಉಪಕಾರ್ಯದರ್ಶಿ (ಅಭಿವೃದ್ಧಿ) ಇವರುಗಳಿಗೆ ಪ್ರತ್ಯಾಯೋಜಿಸಲಾಗಿದೆ ಎಂದು ಹೇಳಿದೆ.
ಗ್ರಾಮ ಪಂಚಾಯಿತಿ ಸದಸ್ಯ ಅತಿಥಿ ಶಿಕ್ಷಕನಾಗಿ ನೇಮಕವಾಗಬಹುದೇ?
ಸರ್ಕಾರಕ್ಕೆ ಮೇಲ್ಮನವಿ; ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮೇಲ್ಮನವಿ ಪ್ರಾಧಿಕಾರದ ಅಧಿಕಾರ ಪ್ರತ್ಯಾಯೋಜಿಸಲಾಗಿದೆ. ಸುತ್ತೋಲೆಯ ಉಲ್ಲೇಖದಂತೆ ಜಿಲ್ಲಾ ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳಿಗೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಶಿಸ್ತು ಪ್ರಾಧಿಕಾರವಾಗಿ ದಂಡನೆ ವಿಧಿಸುತ್ತಿದ್ದು, ಇದರಿಂದ ಬಾಧಿತರಾದ ನೌಕರರು ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸುತ್ತಿದ್ದಾರೆ.
20 ವರ್ಷಗಳಿಂದ ಉಚಿತ ವಿದ್ಯುತ್ ಪಡೆಯುತ್ತಿದೆ ಈ ಗ್ರಾಮ
ಈ ಪ್ರಕರಣಗಳಲ್ಲಿ ಸರ್ಕಾರವು ಮೇಲ್ಮನವಿ ಪ್ರಾಧಿಕಾರವಾಗಿರುವುದಿಲ್ಲ. ಆದುದರಿಂದ ಇನ್ನೂ ಮುಂದೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಉಪಕಾರ್ಯದರ್ಶಿಗಳು ಸರ್ಕಾರದ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿರುವ ಅಧಿಕಾರದಂತೆ ಮಾತ್ರ ಶಿಸ್ತು ಪ್ರಾಧಿಕಾರಿಯ ಕರ್ತವ್ಯವನ್ನು ನಿರ್ವಹಿಸುವಂತೆ, ತಪ್ಪಿದಲ್ಲಿ ಅಂತಹ ಆದೇಶಗಳನ್ನು ಸರ್ಕಾರದ ಹಂತದಲ್ಲಿ ರದ್ದುಗೊಳಿಸಲಾಗುವುದೆಂದು ತಿಳಿಸಲಾಗಿತ್ತು.
ಸರ್ಕಾರದ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿರುವ ಅಧಿಕಾರದಂತೆ ಮಾತ್ರ ಶಿಸ್ತು ಪ್ರಾಧಿಕಾರಿಯ ಕರ್ತವ್ಯವನ್ನು ನಿರ್ವಹಿಸುವಂತೆ, ತಪ್ಪಿದಲ್ಲಿ ಅಂತಹ ಆದೇಶಗಳನ್ನು ಸರ್ಕಾರದ ಹಂತದಲ್ಲಿ ರದ್ದುಗೊಳಿಸಲಾಗುವುದೆಂದು ಸುತ್ತೋಲೆಯಲ್ಲಿ ತಿಳಿಸಲಾಗಿದ್ದರೂ ಸಹ, ಹಲವಾರು ಜಿಲ್ಲಾ ಪಂಚಾಯಿತಿಗಳಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-2 ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರುಗಳಿಗೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಶಿಸ್ತು ಪ್ರಾಧಿಕಾರವಾಗಿ ದಂಡನೆ ವಿಧಿಸುತ್ತಿದ್ದು, ಇದರಿಂದ ಬಾಧಿತರಾದ ನೌಕರರು ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ.
ಈ ಪುಕರಣಗಳಲ್ಲಿ ಸರ್ಕಾರವು ಮೇಲ್ಮನವಿ ಪ್ರಾಧಿಕಾರವಾಗಿರುವುದಿಲ್ಲ. ಆದುದರಿಂದ ಇನ್ನೂ ಮುಂದೆ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಉಪಕಾರ್ಯದರ್ಶಿಗಳು ಸರ್ಕಾರದ ಅಧಿಸೂಚನೆಯಲ್ಲಿ ನಿರ್ದಿಷ್ಟಪಡಿಸಿರುವ ಅಧಿಕಾರದಂತೆ ಮಾತ್ರ ಶಿಸ್ತು ಪ್ರಾಧಿಕಾರಿಯ ಕರ್ತವ್ಯವನ್ನು ನಿರ್ವಹಿಸುವಂತೆ, ತಪ್ಪಿದಲ್ಲಿ ಅಂತಹ ಆದೇಶಗಳನ್ನು ಸರ್ಕಾರದ ಹಂತದಲ್ಲಿ ರದ್ದುಗೊಳಿಸಲಾಗುವುದೆಂದು ಮತ್ತೊಮ್ಮೆ ತಿಳಿಸಿದೆ ಎಂದು ಸ್ಪಷ್ಟಪಡಿಸಲಾಗಿದೆ.
English summary
Karnataka government order on disciplinary authority for gram panchayat secretary grade -1, grade – 2 and second division clerk salary.