Haveri
oi-Shankrappa Parangi
ಹಾವೇರಿ, ಜುಲೈ 30: ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದರೆ ಮಾತ್ರ ಗ್ರಾಮ ಸ್ವರಾಜ್ಯ ಮಾಡಲು ಸಾಧ್ಯವಾಗಲಿದೆ. ಸರ್ಕಾರ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.
ಭಾನುವಾರ ಶಿಗ್ಗಾಂವಿ ಸವಣೂರು ಮತ ಕ್ಷೇತ್ರದಲ್ಲಿ ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯತ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ ನೇರವೆರಿಸಿ ಮಾತನಾಡಿದ ಅವರು, ಫೆಬ್ರವರಿ ತಿಂಗಳ ಬಜೆಟ್ ನಲ್ಲಿ ಶಿಗ್ಗಾವಿ ಸವಣೂರು ಕ್ಷೇತ್ರಕ್ಕೆ ಆರವತ್ತು ಲಕ್ಷಕ್ಕೂ ಹೆಚ್ಚು ಹಣ ನೀಡುವ ತಿರ್ಮಾನ ಮಾಡಿದ್ದೆವು. ಆದರೆ, ಈಗಿನ ಸರ್ಕಾರ ಅದನ್ನು ನಿಲ್ಲಿಸಿದೆ. ಗ್ರಾಮೀಣ ಪ್ರದೇಶದ ಅಭಿವೃದ್ದಿಗಾಗಿ ನೀಡಿರುವ ಅನುದಾನವನ್ನು ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ತಿಳಿಸಿದರು.
ನಿಜವಾದ ಭಾರತದ ಸ್ವರಾಜ್ಯ ಗ್ರಾಮದಲ್ಲಿದೆ ಎನ್ನುವ ಗಾಂಧಿಜಿಯವರು ಕನಸು ಕಂಡಂತೆ ಗ್ರಾಮಗಳು ಅಭಿವೃದ್ಧಿಯಾದರೆ ಮಾತ್ರ ಭಾರತ ದೇಶವು ಅಭಿವೃದ್ಧಿ ಆದಂತೆ. ನಮ್ಮ ಅವಧಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳ ನಿರ್ಮಾಣಕ್ಕೆ 250 ಕೋಟಿ ಅನುದಾನ ನೀಡಿದ್ದೇವು. ಆದರೆ, ಈ ಸರ್ಕಾರ ಆ ಅನುದಾನವನ್ನು ಸ್ಥಗಿತಗೊಳಿಸಿದೆ ಎಂದು ಕಿಡಿ ಕಾರಿದರು.
ರಾಜ್ಯದ ಪ್ರತಿ ಮನೆಗಳಿಗೆ ನಲ್ಲಿ ಮೂಲಕ ನೀರು ಒದಗಿಸಲು ನಾವು ಜಲಜೀವನ ಮಿಷನ್ ಜಾರಿ ಮಾಡಿದ್ದೆವು ಆದರೆ, ಈ ಸರ್ಕಾರ ಬಂದ ನಂತರ ಕುಂಠಿತಗೊಂಡಿದೆ. ನಾವು ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವು. ಆದರೆ, ಈ ಸರ್ಕಾರ ಮಂದಗತಿಯಲ್ಲಿದೆ ಹೆಚ್ಚಿನ ಪ್ರಮಾಣದ ಹಣವನ್ನು ಬಿಡುಗಡೆ ಮಾಡಿದರೆ ಮಾತ್ರ ಗ್ರಾಮೀಣ ಪ್ರದೇಶದ ಅಭಿವೃದ್ಧಿ ಸಾಧ್ಯ. ಅದನ್ನು ಸರ್ಕಾರ ಮಾಡಬೇಕು ಎಂದು ಹೇಳಿದರು.
ಹಾಲು ಉತ್ಪಾದಕರ ಬ್ಯಾಂಕ್ ಮಾಡಲು ಸಿಎಂ ಜತೆ ಮಾತುಕತೆ
ಹೈನುಗಾರಿಕೆ ರೈತರ ಅನೂಕೂಲಕ್ಕಾಗಿ ಹಾಲು ಉತ್ಪಾದಕರ ಬ್ಯಾಂಕ್ ಮಾಡಲು ರಾಜ್ಯ ಸರ್ಕಾರದ ಜೊತೆ ಚರ್ಚಿಸಲಾಗುವುದು. ಹಾಲು ಉತ್ಪಾದಕರ ಬ್ಯಾಂಕ್ ಮಾಡುವ ಕನಸು ಇತ್ತು. ಆದರೆ, ಮಾಡಲು ಆಗಲಿಲ್ಲ. ಹಾಲು ಉತ್ಪಾದನೆಯಿಂದ 20 ಸಾವಿರ ಕೋಟಿಗೂ ಅಧಿಕ ವ್ಯವಹಾರ ಆಗುತ್ತದೆ. ಹೆಚ್ಚು ಉತ್ಪಾದನೆ ಆಗಲೂ ಸಾಧ್ಯವಿದೆ ಎಂದು ಬಸವರಾಜ ಬೊಮ್ಮಾಯಿ ಹಾವೇರಿಯ ಸಮಾರಂಭವೊಂದರಲ್ಲಿ ತಿಳಿಸಿದರು.
ಹಾಲು ಉತ್ಪಾದಕರ ಬ್ಯಾಂಕ್ ಮಾಡುವ ಕನಸು ನನಸು ಮಾಡುವ ಉದ್ದೇಶ ಹೊಂದಿರುವ ಬಿಜೆಪಿ ಸರ್ಕಾರದ ಜೊತೆಗೆ ಚರ್ಚಿಸಲಿದ್ದೇವೆ. ಹೈನುಗಾರಿಕೆಯಲ್ಲಿ ದೊಡ್ಡ ಶಕ್ತಿ ಇದೆ. ಮನಸ್ಸು ಮುದಗೊಳಿಸುವ ಶಕ್ತಿ ಹಾಲಿನಲ್ಲಿದೆ. ಅಲ್ಕೊ ಹಾಲಿಗೆ ಕೊಡುವ ಆದ್ಯತೆಯನ್ನು ರೈತರ ಆರ್ಥಿಕ ಚೈತನ್ಯಕ್ಕೆ ಪೂರಕವಾಗುವ ಈ ಹಾಲಿಗೆ ದೊರೆಯಬೇಕು. ಹಾವೇರಿ ಜಿಲ್ಲೆಯ ಅಭಿವೃದ್ಧಿಯಲ್ಲಿ ನಾವೆಲ್ಲ ಪಾಲ್ಗೊಳ್ಳಬೇಕು ಎಂದ ಅವರು ಆಶಯ ವ್ಯಕ್ತಪಡಿಸಿದರು.
English summary
Karnataka Government more funding should be given for the development of rural areas, Urge by BJP Basavaraj bommai.
Story first published: Sunday, July 30, 2023, 20:18 [IST]