‘ಗ್ಯಾರಂಟಿ’ ಅನುಷ್ಠಾನ:ಹೆಚ್ಚುವರಿ ಸಾಲ, ಹೆಚ್ಚಿನ ಆದಾಯದ ಗುರಿ, ತೆರಿಗೆ ಏರಿಕೆ ಸಿದ್ದು ಸರ್ಕಾರಕ್ಕೆ ಅನಿವಾರ್ಯ- ಅಂಕಿಅಂಶ, ವಿವರ | Additional borrowings, higher revenue target, tax increase is necessary for Karnataka govt

Karnataka

oi-Ravindra Gangal

|

Google Oneindia Kannada News

ಬೆಂಗಳೂರು, ಜುಲೈ 07: ಮುಖ್ಯಮಂತ್ರಿ ಸಿದ್ದರಾಮಯ್ಯನವರು 14 ನೇ ಬಜೆಟ್‌ ಅನ್ನು ಮಂಡಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಅತಿ ಬಜೆಟ್‌ ಅನ್ನು ಮಂಡಿಸಿದ ಹಣಕಾಸು ಸಚಿವರೆಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಕಳೆದ ಎಲ್ಲ ಬಜೆಟ್‌ಗಳಿಗಿಂತ ಈ ಸಾರಿಯ ಬಜೆಟ್‌ ಸಿದ್ದರಾಮಯ್ಯನವರಿಗೆ ಕಠಿಣ ಸವಾಲನ್ನು ಒಡ್ಡಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

‘ಕೈಗೆಟುಕುವಿಕೆಯ ಆಧಾರದ ಮೇಲೆ ಸಾಲ ಪಡೆಯಬೇಕೇ ಹೊರತು ಲಭ್ಯತೆಯ ಆಧಾರದ ಮೇಲೆ ಅಲ್ಲ’ ಎಂಬ ಮಾತನ್ನು 2005-2006ರ ರಾಜ್ಯ ಬಜೆಟ್ ಮಂಡನೆ ವೇಳೆ ಸಿದ್ದರಾಮಯ್ಯ ಹೇಳಿದ್ದರು. ಆದರೆ, ಲಭ್ಯತೆಯ ಆಧಾರದ ಮೇಲೆ ಸಾಲ ಪಡೆಯುವ ಪರಿಸ್ಥಿತಿ ಬಗ್ಗೆ ಸಿದ್ದರಾಮಯ್ಯನವರಿಗೆ ಬಂದೊದಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

Additional borrowings, higher revenue target, tax increase is necessary for Karnataka govt

ಸಿದ್ದರಾಮಯ್ಯ ನೇತೃತ್ವ ಹಿಂದಿನ ಸರ್ಕಾರ ಸೇರಿದಂತೆ ಉಳಿದೆಲ್ಲ ಸರ್ಕಾರಗಳು 2002ರ ಕರ್ನಾಟಕ ಹಣಕಾಸಿನ ಹೊಣೆಗಾರಿಕೆ ಕಾಯಿದೆ (ಎಫ್‌ಆರ್‌ಎ)ಗೆ ಬದ್ಧವಾಗಿರುವ ನಿಟ್ಟಿನಲ್ಲಿ ಅಪಾರ ಬದ್ದತೆಯನ್ನು ತೋರುತ್ತಲೇ ಬಂದಿವೆ. ಆದರೆ, ಈ ಬಾರಿಯ ಸಿದ್ದರಾಮಯ್ಯ ಸರ್ಕಾರಕ್ಕೆ ಈ ಬದ್ದತೆಯನ್ನು ಮೀರಿ ನಿಲ್ಲಬೇಕಿರುವ ಅನಿವಾರ್ಯತೆ ಇದೆ. ಇದಕ್ಕೆ ಕಾರಣವಾಗಿದರುವುದು ಚುನಾವಣಾಪೂರ್ವ ಕಾಂಗ್ರೆಸ್‌ ನೀಡಿರುವ ಐದು ಗ್ಯಾರಂಟಿಗಳೆಂದು ಪಂಡಿತರು ಹೇಳಿದ್ದಾರೆ.

ಸಿದ್ದರಾಮಯ್ಯ ಬಜೆಟ್ ಡಿ ಕೆ‌ ಶಿವಕುಮಾರ್‌ ಗೂ ನಿರಾಶೆ ಆಗಿದೆ: ಬಿ. ವೈ. ವಿಜಯೇಂದ್ರ ಸಿದ್ದರಾಮಯ್ಯ ಬಜೆಟ್ ಡಿ ಕೆ‌ ಶಿವಕುಮಾರ್‌ ಗೂ ನಿರಾಶೆ ಆಗಿದೆ: ಬಿ. ವೈ. ವಿಜಯೇಂದ್ರ

ಇತ್ತೀಚಿನ ವರ್ಷಗಳಲ್ಲಿ ಅಂದರೆ, ಕೋವಿಡ್-19 ಸಾಂಕ್ರಾಮಿಕ ಸಮಯದ ಎರಡು ವರ್ಷಗಳನ್ನು ಹೊರತುಪಡಿಸಿ ಕರ್ನಾಟಕವು ಯಾವಾಗಲೂ ಆದಾಯದ ಹೆಚ್ಚುವರಿ ಬಜೆಟ್ ಅನ್ನು ಕಂಡಿದೆ.

ಆದಾಯ ಹೆಚ್ಚುವರಿ ಎಂದರೆ ರಾಜ್ಯದ ಆದಾಯದ ಸ್ವೀಕೃತಿಗಳ ಮೇಲಿನ ಹೆಚ್ಚುವರಿ ಹಣವಾಗಿದೆ. ಅಂದರೆ, ಸ್ವಂತ ತೆರಿಗೆಗಳು, ತೆರಿಗೆಯೇತರ ಆದಾಯಗಳು, ಕೇಂದ್ರ ಅನುದಾನಗಳು ಮತ್ತು ಕೇಂದ್ರ ತೆರಿಗೆಗಳಿಂದ ಬಂದ ಹಣದ ಮೌಲ್ಯವೇ ಆದಾಯದ ಸ್ವೀಕೃತಿಗಳಾಗಿವೆ. ಇದರಲ್ಲಿ ಸಂಬಳ, ಬಡ್ಡಿ ಪಾವತಿಗಳು, ಪಿಂಚಣಿಗಳು, ಸಬ್ಸಿಡಿಗಳು, ಕಲ್ಯಾಣವನ್ನು ಒಳಗೊಂಡಿರುವ ಬದ್ಧ ವೆಚ್ಚಗಳನ್ನು ಸರ್ಕಾರ ಭರಿಸಬೇಕಿದೆ. ಇದು ರಾಜ್ಯದ ಆದಾಯ ವೆಚ್ಚವನ್ನು ಮೀರುತ್ತದೆ. ಇದಕ್ಕೆ ಆದಾಯ ಹೆಚ್ಚುವರಿ ಎಂದು ಹೇಳಲಾಗುತ್ತದೆ.

Additional borrowings, higher revenue target, tax increase is necessary for Karnataka govt

ಯೋಜನೆಗಳಿಗೆ ಹಣ ನೀಡಲು ಹೆಚ್ಚುವರಿ ಹಣವಿಲ್ಲ

ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ವೋಟ್ ಆನ್ ಅಕೌಂಟ್ ಪ್ರಕಾರ, 2023-2024ರ ಅಂದಾಜು ಆದಾಯ ₹2,25,910 ಕೋಟಿ (₹2.25 ಲಕ್ಷ ಕೋಟಿ) ಎಂದು ಅಂದಾಜಿಸಲಾಗಿದೆ.

ಈ ರಾಜಸ್ವ ಸ್ವೀಕೃತಿಯಲ್ಲಿ, ಕರ್ನಾಟಕವು ಅಸ್ತಿತ್ವದಲ್ಲಿರುವ ಸಬ್ಸಿಡಿಗಳು, ಯೋಜನೆಗಳು ಇತ್ಯಾದಿಗಳನ್ನು ಒಳಗೊಂಡಂತೆ ಸುಮಾರು ₹2,07,837 ಕೋಟಿಗಳ ವೆಚ್ಚವನ್ನು ಭರಿಸುತ್ತದೆ. ಇದು ಒಟ್ಟು ಆದಾಯದ 92 ಪ್ರತಿಶತವನ್ನು ಹೊಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಂದಾಜಿನ ಪ್ರಕಾರ, ಐದು ಖಾತರಿಗಳನ್ನು ಅನುಷ್ಠಾನಗೊಳಿಸುವುದರಿಂದ ಬೊಕ್ಕಸಕ್ಕೆ ವಾರ್ಷಿಕ ₹ 50,000 ಕೋಟಿಯಿಂದ ₹ 52,000 ಕೋಟಿ ವೆಚ್ಚವಾಗಬಹುದು. ಪರಿಷ್ಕೃತ ಅಂದಾಜಿನ ಪ್ರಕಾರ, ವಾರ್ಷಿಕವಾಗಿ ₹ 60,000 ಕೋಟಿಯಿಂದ ₹ 65,000 ಕೋಟಿಗಳ ನಡುವೆ ಈ ಸಂಖ್ಯೆ ಇದೆ.

Additional borrowings, higher revenue target, tax increase is necessary for Karnataka govt

ಪ್ರತಿ ಖಾತರಿಯ ವೆಚ್ಚ

ಪ್ರಾಥಮಿಕ ಅಂದಾಜಿನ ಪ್ರಕಾರ, ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಶೂನ್ಯ ಟಿಕೆಟ್ ಬಸ್ ಪ್ರಯಾಣವನ್ನು ಖಾತರಿಪಡಿಸುವ ಶಕ್ತಿ ಯೋಜನೆಯು ₹ 4,050 ಕೋಟಿ ವೆಚ್ಚವಾಗಬಹುದು. ಬಡತನ ರೇಖೆಗಿಂತ ಕೆಳಗಿನ ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ ಪ್ರತಿ ತಿಂಗಳು 10 ಕೆಜಿ ಉಚಿತ ಅಕ್ಕಿಯನ್ನು ನೀಡುವ ಉದ್ದೇಶವನ್ನು ಅನ್ನ ಭಾಗ್ಯ ಹೊಂದಿದೆ. ಇದಕ್ಕೆ ₹ 10,092 ಕೋಟಿ ವೆಚ್ಚವಾಗಬಹುದು.

ಯುವಕರಿಗೆ ಯುವ ನಿಧಿ ನಿರುದ್ಯೋಗ ಸ್ಟೈಫಂಡ್‌ನ ಅಂದಾಜು ವೆಚ್ಚ ₹ 1,274 ಕೋಟಿ ಆಗಿದ್ದರೆ, ಗೃಹ ಜ್ಯೋತಿಗೆ ( 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಯೋಜನೆ) ₹ 13,000 ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ.

ಮನೆಯ ಮಹಿಳಾ ಮುಖ್ಯಸ್ಥರಿಗೆ ₹2,000 ಮಾಸಿಕ ಮೂಲ ಆದಾಯದ ಭರವಸೆ ನೀಡಿರುವುದು ಕಾಂಗ್ರೆಸ್‌ನ ದೊಡ್ಡ ಗ್ಯಾರಂಟಿ ಯೋಜನೆಯಾಗಿದೆ. ಗೃಹ ಲಕ್ಷ್ಮಿಗೆ ಅಂದಾಜು ₹39,000 ಕೋಟಿ ವೆಚ್ಚವಾಗಬಹುದು ಎಂದು ಹೇಳಲಾಗುತ್ತಿದೆ.

ಖಾತರಿಗಳು ಸಮಾಜ ಕಲ್ಯಾಣ ಯೋಜನೆಗಳಾಗಿರುವುದರಿಂದ, ಅವುಗಳನ್ನು ಆದಾಯ ವೆಚ್ಚ ಅಥವಾ ಬದ್ಧ ವೆಚ್ಚ ಎಂದು ಪರಿಗಣಿಸಲಾಗುತ್ತದೆ.

ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಸಿದ್ದರಾಮಯ್ಯನವರು ಹಣವನ್ನು ಹೊಂದಿಸಬಹುದು. ಅಬಕಾರಿ, ಆಸ್ತಿ ಮತ್ತು ವೃತ್ತಿಪರ ತೆರಿಗೆಗಳಿಂದ ಆದಾಯವನ್ನು ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳಬಹುದು. ಇದರ ಹೊರತು ಕಾಂಗ್ರೆಸ್‌ ಖಾತರಿಗಳಿಗೆ ಹಣ ನೀಡಲು ಸಿದ್ದರಾಮಯ್ಯ ಸರ್ಕಾರಕ್ಕೆ ಸಾಕಷ್ಟು ಆದಾಯದ ಮೂಲಗಳಿಲ್ಲವೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಾಣಿಜ್ಯ ತೆರಿಗೆಗಳು, ನೋಂದಣಿ, ಸಾರಿಗೆ ಅಥವಾ ಇಂಧನದ ಮೇಲಿನ ಮಾರಾಟ ತೆರಿಗೆಯಿಂದ ಹೆಚ್ಚು ಆದಾಯವನ್ನು ಪಡೆಯುವುದು ಬಿಟ್ಟಿ ಸಿದ್ದರಾಮಯ್ಯನವರಿಗೆ ಬೇರೆ ದಾರಿಯಿಲ್ಲ ಎಂದು ಹೇಳಲಾಗುತ್ತಿದೆ.

ಇಷ್ಟೆಲ್ಲ ಕಸರತ್ತು ಮಾಡಿದರೂ ಸಿದ್ದರಾಮಯ್ಯನವರಿಗೆ ಹಣದ ಕೊರತೆ ಎದುರಾಗಲಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ. ಉತ್ತಮ ಹಣಕಾಸು ಸಚಿವರೆಂದೇ ಹೆಸರುವಾಸಿಯಾಗಿರುವ ಸಿದ್ದರಾಮಯ್ಯನವರು ಒಂದು ವೇಳೆ ತೆರಿಗೆಗಳನ್ನು ಹೆಚ್ಚಿದರೆ, ಸಾರ್ವಜನಿಕರ ಟೀಕೆಗೆ ಗುರಿಯಾಗಬೇಕಾಗುತ್ತದೆ. ಹೆಚ್ಚಸದೇ ಹೋದರೆ, ಗ್ಯಾರಂಟಿಗಳಿಗೆ ಹಣ ಹೊಂದಿಸಲು ಪರದಾಡಬೇಕಾಗುತ್ತದೆ. ಒಂದು ವೇಳೆ, ಗ್ಯಾರಂಟಿಗಳಿಗೆ ಹಣ ವ್ಯಯಿಸಿದರೆ, ರಾಜ್ಯದ ನೀರಾವರಿ, ರಸ್ತೆ ಸೇರಿದಂತೆ ಹಲವು ಯೋಜನೆಗಳ ಮೇಲೆ ಹೊಡೆತ ಬೀಳುತ್ತದೆ. ಎಲ್ಲವನ್ನೂ ಅಳೆದೂ ತೂಗಿ ನೋಡಿದರೆ, ಸಿದ್ದರಾಮಯ್ಯನವರು ತಮ್ಮ ಜೀವನದ ಅತೀ ಸಂಕಷ್ಟದ ಆಡಳಿತವನ್ನು ಎದುರಿಸಲಿದ್ದಾರೆ ಎಂಬುದಂತೂ ಸತ್ಯ.

English summary

Karnataka Budget 2023: Economic experts have opined that this budget has posed a tougher challenge to Siddaramaiah than all previous budgets,

Story first published: Friday, July 7, 2023, 18:32 [IST]

Source link