Karnataka
oi-Reshma P

ಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿ ಚುನಾಯಿತ ಪ್ರತಿನಿಧಿಗಳು ಸದನದ ಒಳಗೂ ಹೋರಾಟ ಮಾಡಲಿದ್ದಾರೆ. ಕಾಂಗ್ರೆಸ್ ಪಕ್ಷವು ಮನೆಮನೆಗೆ ಹೋಗಿ ಸಿದ್ದರಾಮಯ್ಯ, ಶಿವಕುಮಾರ್ ಅವರು ಸಹಿ ಮಾಡಿ ಕೊಟ್ಟ ಗ್ಯಾರಂಟಿ ಕಾರ್ಡಿನ ಅಂಶಗಳನ್ನು ಚಾಚೂತಪ್ಪದೆ ಅನುಷ್ಠಾನಕ್ಕೆ ತರಲು ಅವರು ಆಗ್ರಹಿಸಿದರು. ಈ ಕುರಿತು ಪಕ್ಷದ ಮುಖಂಡರ ಸಭೆಯಲ್ಲಿ ಚರ್ಚಿಸಿದ್ದಾಗಿ ವಿವರಿಸಿದರು.
ಕಾಂಗ್ರೆಸ್ ನವರು ಭರವಸೆ ಕೊಟ್ಟಂತೆ 10 ಕೆಜಿ ಅಕ್ಕಿ ಕೊಡಬೇಕು, ಎಲ್ಲ ಪದವೀಧರ ನಿರುದ್ಯೋಗಿಗಳಿಗೆ 3 ಸಾವಿರ ಭತ್ಯೆ, ಡಿಪ್ಲೊಮಾ ಮಾಡಿ ನಿರುದ್ಯೋಗಿ ಆಗಿರುವವರಿಗೆ 1500 ರೂ. ಕೊಡಬೇಕು, 200 ಯೂನಿಟ್ ಕರೆಂಟ್ ಕೊಡಲೇಬೇಕು, 80 ಯೂನಿಟ್ ಎಂಬ ಕಂಡಿಷನ್ ರದ್ದು ಮಾಡಬೇಕೆಂದು ಆಗ್ರಹಿಸಿದರು.

ಭರವಸೆ ನೀಡಿದಂತೆ ಎಲ್ಲ ಮಹಿಳೆಯರಿಗೆ 2 ಸಾವಿರ ರೂ. ಕೊಡಬೇಕು. ಕರೆಂಟ್ ಬಿಲ್ ತೀವ್ರವಾಗಿ ಹೆಚ್ಚಾಗಿದ್ದು, ದರ ಏರಿಕೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸುವುದಾಗಿ ತಿಳಿಸಿದರು. 4ರಂದು ಸದನದ ಒಳಗೆ ಮತ್ತು ಹೊರಗಡೆ ನಾನು ಮತ್ತು ಪಕ್ಷದ ಪ್ರಮುಖರು ಧರಣಿ ನಡೆಸಲಿದ್ದೇವೆ. ಪಕ್ಷಕ್ಕೆ ಮುಜುಗರ ಆಗುವ ಹೇಳಿಕೆಗಳನ್ನು ಯಾರೂ ಕೊಡಬಾರದು. ಯಾರು ಆ ರೀತಿ ಮಾತನಾಡಿದ್ದಾರೋ ಅವರ ಜೊತೆ ಚರ್ಚಿಸಿ ಇನ್ನು ಮುಂದೆ ಇಂಥ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಸೂಕ್ತ ಕ್ರಮವನ್ನು ಕೈಗೊಳ್ಳುವ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.
ಇನ್ನೂ ಈ ವೇಳೆ ವಿಧಾನ ಪರಿಷತ್ ಸದಸ್ಯ ರವಿ ಕುಮಾರ್ ಮಾತನಾಡಿ, ಪಕ್ಷ ಬಲವರ್ಧನೆಗೆ ನಾವು ಇದ್ದೇವೆ. ಹೀಗಾಗಿ ಸಭೆ ಕರೆದು ಮಾತುಕತೆ ನಡೆಸಿ ಎಂದು ಹೇಳಿದ್ದಾರೆ, ರಾಜ್ಯಾಧ್ಯಕ್ಷರು,ಮಾಜಿ ಸಿಎಂ ಯಡಿಯೂರಪ್ಪ ಹೊರಗಡೆ ಮಾತನಾಡದಂತೆ ಸೂಚಿಸಿದ್ದಾರೆ. ಪಕ್ಷದ ಸಂಘಟನೆ ಪರವಾಗಿ ಇರ್ತಿವಿ ಎಂದು ಹೇಳಿದ್ದಾರೆ. ಪ್ರಭುಚೌಹನ್,ಮುರುಗೇಶ ನಿರಾಣಿ,ಈಶ್ವರ್ ಸಿಂಗ್ ಠಾಕೂರ್, ರಮೇಶ್ ಜಿಗಜಿಣಗಿ,ರೇಣುಕಾಚಾರ್ಯ ಇಂದಿನ ಸಭೆ ಮುಂದೆ ಬಂದಿಲ್ಲ. ಬಳಿಕ ಬಂದು ವಿವರಣೆ ಕೊಡ್ತೀವಿ ಎಂದು ಹೇಳಿದ್ದಾರೆ
ಚುನಾವಣೆಯಲ್ಲಿ ಬಿಜೆಪಿ ಯಾಕೆ ಸೋತಿದೆ ಎಂದು ಕೆಲವರು ಬಹಿರಂಗ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ, ಪಕ್ಷ ವಿರುದ್ಧ ಹೇಳಿಕೆ ನೀಡಿರುವ ಆಡಿಯೋ ವಿಡಿಯೋ ಮುಂದಿಟ್ಟಿಕೊಂಡು ಸಭೆ ಮಾಡಿದ್ದಾರೆ. ಪಕ್ಷದ ವಿರುದ್ಧ ಹೇಳಿಕೆ ನೀಡಿದವರನ್ನು ಸಭೆಗೆ ಕರೆಯಲಾಗಿತ್ತು. 11 ಜನ ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದಾರೆ. ಸಭೆಗೆ 11 ಜನರಿಗೆ ಕರೆದಿದ್ವಿ ಅದರಲ್ಲಿ 5 ಜನ ಸಭೆಗೆ ಬಂದಿಲ್ಲ, ಸಭೆಗೆ ರೇಣುಕಾಚಾರ್ಯ ಕೂಡ ಬಂದಿಲ್ಲ.
ಇನ್ನೂ ಪಕ್ಷದ ವಿರುದ್ದ ಸ್ವಪಕ್ಷದ ನಾಯಕರ ಅಸಮಾಧಾನದ ವಿಚಾರವಾಗಿ ಸಿ ಟಿ ರವಿ ಮಾತನಾಡಿ, ಕೆಲವು ವಿಚಾರ ಎಲ್ಲಿ ಮಾತಾಡಬೇಕೆಂಬ ಪರಿಜ್ಙಾನ ಇರಬೇಕು. ಹೊರಗಿನ ವಿಷಯಗಳು ಬಂದಾಗ ಹೊರಗೆ ಮಾತಾಡಬೇಕು, ಒಳಗಿನ ವಿಷಯ ಪಕ್ಷದ ಒಳಗೆ ಮಾತಾಡಬೇಕು ಎಂದರು.
ತನಿಖೆಯ ಆರೋಪ ಪ್ರತ್ಯಾರೋಪ ವಿಚಾರವಾಗಿ ಮಾತನಾಡಿ, ನಮಗೆ ಇದ್ದ ಅವಕಾಶ ಹೋಗಿದೆ. ಈಗ ಕಾಂಗ್ರೆಸ್ ನವರು ಪ್ರಮಾಣೀಕರು ಅಲ್ವಾ..? ಅವರು ಪ್ರಾಮಾಣಿಕತೆ ಸಾಬೀತು ಪಡಿಸಿಕೊಳ್ಳಬೇಕು, ಇಲ್ಲವಾದಲ್ಲಿ ಅವರು ಪರಮ ಭ್ರಷ್ಟರು ಎಂದು ಸಾಬೀತು ಆಗುತ್ತದೆ. ಒಂದು ತಿಂಗಳಲ್ಲಿ ಅರ್ಕಾವತಿ ಹಗರಣದ ಆರೋಪಿಗಳನ್ನು ಜೈಲಿಗೆ ಕಳುಹಿಸಲಿ, 8000 ಕೋಟಿ ಹಣವನ್ನು ಅವರ ಬೊಕ್ಕಸಕ್ಕೆ ತುಂಬಿಸಿಕೊಳ್ಳಲಿ, ಈಗ ಅವರ ಸಾಮರ್ಥ್ಯವನ್ನು ತೋರಿಸಲಿ ಎಂದು ಸವಾಲು ಹಾಕಿದರು.
English summary
BJP Leader BS Yediyurappa Said That Protest Against Congress Govt In Front Of Vidhana Soudha