ಗೃಹ ಜ್ಯೋತಿ : ಜುಲೈ 1ರಿಂದ ಉಚಿತ ವಿದ್ಯುತ್: ನೀವು ತಿಳಿಯಬೇಕಾದ ಪ್ರಮುಖ ಮಾಹಿತಿ | Gruha jyoti : Free Electricity From July 1st, Know the Details About Scheme

Karnataka

oi-Naveen Kumar N

|

Google Oneindia Kannada News

ಬೆಂಗಳೂರು, ಜೂನ್ 30: ಪ್ರತಿ ತಿಂಗಳು 200 ಯೂನಿಟ್‌ವರೆಗೆ ಮನೆ ಬಳಕೆಗೆ ಉಚಿತ ವಿದ್ಯುತ್ ಪಡೆಯುವ ಮಹತ್ವದ ಯೋಜನೆ ಗೃಹ ಜ್ಯೋತಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ರಾಜ್ಯಾದ್ಯಂತ 80 ಲಕ್ಷಕ್ಕೂ ಹೆಚ್ಚು ಗ್ರಾಹಕರು ಈಗಾಗಲೇ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಜುಲೈ 1ರಿಂದಲೇ ಯೋಜನೆ ಜಾರಿಗೆ ಬರಲಿದೆ.

ಗೃಹಜ್ಯೋತಿ ಯೋಜನೆಯ ಫಲಾನುಭವಿಗಳಾಗಲು ಜೂನ್ 18ರಂದು ಆನ್‌ಲೈನ್‌ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಆರಂಭಿಕ ದಿನಗಳಲ್ಲಿ ಹಲವು ಗೊಂದಗಳಿದ್ದು ಅದನ್ನು ಸರಿಪಡಿಸಿದ ಬಳಿಕ ನೋಂದಣಿ ಪ್ರಕ್ರಿಯೆ ಸರಾಗವಾಗಿ ನಡೆಯುತ್ತಿದೆ.

Free Electricity From July 1st

ಅರ್ಜಿ ನೋಂದಣಿ ಮಾಡಿಕೊಂಡಿರುವವರು ಜುಲೈ 1ರಿಂದಲೇ ಉಚಿತ ವಿದ್ಯುತ್ ಪಡೆಯಬಹುದಾಗಿದೆ. ಆಗಸ್ಟ್ ತಿಂಗಳಿನಲ್ಲಿ ನೀವು ವಿದ್ಯುತ್ ಬಿಲ್ ಕಟ್ಟುವ ಅವಶ್ಯಕತೆ ಇರುವುದಿಲ್ಲ. ಆದರೆ, ಉಚಿತ ವಿದ್ಯುತ್ ಪಡೆಯಲು ಸರ್ಕಾರ ಷರತ್ತುಗಳನ್ನು ವಿಧಿಸಿದ್ದು ಅದಕ್ಕೆ ಅನುಗುಣವಾಗಿ ವಿದ್ಯುತ್ ಬಳಕೆ ಮಾಡಿದರೆ ಮಾತ್ರ ನೀವು ಉಚಿತ ವಿದ್ಯುತ್ ಪಡೆಯಬಹುದು, ಯಾಮಾರಿದರೆ ನೀವು ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ.

ಏನೆಲ್ಲಾ ಷರತ್ತುಗಳಿವೆ ಗೊತ್ತಾ?

ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತ ಎಂದಿದೆ ಎಂದು ನೀವು 200 ಯುನಿಟ್ ವಿದ್ಯುತ್ ಬಳಕೆ ಮಾಡಿದರೆ ನಿಮಗೆ ವಿದ್ಯುತ್ ಬಿಲ್ ಹೊರೆಯಾಗಲಿದೆ. ಕಳೆದ 12 ತಿಂಗಳಿನಲ್ಲಿ ನೀವು ಬಳಕೆ ಮಾಡಿದ ವಿದ್ಯುತ್ ಸರಾಸರಿ ಆಧಾರದ ಮೇಲೆ ನಿಮಗೆ ವಿದ್ಯುತ್ ಸಿಗಲಿದೆ.

ಉದಾಹಣರೆಗೆ : ಕಳೆದ 12 ತಿಂಗಳಿನಲ್ಲಿ ನೀವು 100 ಯುನಿಟ್ ವಿದ್ಯುತ್ ಬಳಸಿದ್ದರೆ, ನಿಮಗೆ ಈಗ 110 ಯುನಿಟ್‌ವರೆಗೆ ಮಾತ್ರ ಉಚಿತ ವಿದ್ಯುತ್ ಬಳಸಲು ಅವಕಾಶ ಇರುತ್ತದೆ. ಉಚಿತ ಇದೆ ಎಂದು ಮಿತಿ ಮೀರಿ ಬಳಕೆ ಮಾಡಿದರೆ ನಿಮಗೆ ವಿದ್ಯುತ್ ಬಿಲ್ ಬರಲಿದೆ. ಈ ವಿಚಾರದಲ್ಲಿ ಇನ್ನೂ ಸಾಕಷ್ಟು ಗೊಂದಲಗಳಿದ್ದು ವಿದ್ಯುತ್ ಇಲಾಖೆ ಯೋಜನೆಯನ್ನು ಹೇಗೆ ಜಾರಿಗೊಳಿಸಲಿದೆ ಎನ್ನುವುದು ಆಗಸ್ಟ್ ತಿಂಗಳು ಬಿಲ್ ಬಂದ ನಂತರ ಸ್ಪಷ್ಟವಾಗಲಿದೆ.

Gruha Jyothi Scheme Online: ಗೃಹ ಜ್ಯೋತಿ ಯೋಜನೆಗೆ ಕರ್ನಾಟಕದಲ್ಲಿ ಭರ್ಜರಿ ರೆಸ್ಪಾನ್ಸ್!Gruha Jyothi Scheme Online: ಗೃಹ ಜ್ಯೋತಿ ಯೋಜನೆಗೆ ಕರ್ನಾಟಕದಲ್ಲಿ ಭರ್ಜರಿ ರೆಸ್ಪಾನ್ಸ್!

ಬಾಕಿ ವಿದ್ಯುತ್ ಬಿಲ್ ಕಟ್ಟಬೇಕು

ಇನ್ನು ನೀವು ಉಚಿತ ವಿದ್ಯುತ್ ಪಡೆಯಬೇಕು ಎಂದರೆ ಬಾಕಿ ಇರುವ ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ. ಸರ್ಕಾರ ಸೆಪ್ಟೆಂಬರ್ ವರೆಗೆ ಇದಕ್ಕೆ ಸಮಯ ನೀಡಿದ್ದು, ಉಚಿತ್ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸಿದವರು ಬಾಕಿ ಇರುವ ವಿದ್ಯುತ್ ಶುಲ್ಕವನ್ನು ಪಾವತಿ ಮಾಡಬೇಕು.

ಇನ್ನು ಒಂದು ತಿಂಗಳು ನೀವು 200 ಯುನಿಟ್‌ಗಿಂದ ಅಥವಾ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ವಿದ್ಯುತ್ ಬಳಸಿದರೆ ಆ ತಿಂಗಳ ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ. ಮತ್ತು ಮುಂದಿನ ತಿಂಗಳಿನಿಂದ ನೀವು ಸರಾಸರಿಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡಿದರೆ ಉಚಿತ ವಿದ್ಯುತ್ ಸಿಗಲಿದೆ.

ಸದ್ಯ ರಾಜ್ಯದಲ್ಲಿ 80 ಲಕ್ಷಕ್ಕೂ ಹೆಚ್ಚು ಗ್ರಾಹಕರು ನೋಂದಣಿ ಮಾಡಿಕೊಂಡಿದ್ದು, 1.33 ಕೋಟಿ ಗ್ರಾಹಕರು ನೋಂದಣಿ ಮಾಡಿಕೊಳ್ಳಬೇಕಿದೆ. ಬಾಡಿಗೆ ಮನೆಯಲ್ಲಿ ಇರುವವರೆಗೂ ಉಚಿತ ವಿದ್ಯುತ್ ಸಿಗಲಿದೆ.

https://sevasindhugs.karnataka.gov.in/ ಈ ವೆಬ್‌ಸೈಟ್‌ಗೆ ತೆರಳಿ ನೀವು ನೋಂದಣಿ ಮಾಡಿಕೊಳ್ಳಬಹುದು. ಅಥವಾ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಎಸ್ಕಾಂ ಕಚೇರಿಗಳಲ್ಲಿ ಕೂಡ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಉಚಿತವಾಗಿದ್ದು, ಯಾವುದೇ ಹಣ ನೀಡುವ ಅಗತ್ಯವಿಲ್ಲ. ನಿಮ್ಮ ಮೊಬೈಲ್ ನಂಬರ್, ಆಧಾರ್ ನಂಬರ್, ಗ್ರಾಹಕರ ಐಡಿ ನೋಂದಣಿಗೆ ಕಡ್ಡಾಯವಾಗಿ ನೀಡಬೇಕು.

English summary

Karnataka residents can avail of free electricity under the Gruhajyoti scheme, providing up to 200 units, starting from July 1st. Over 75 lakh customers have registered across Karnataka to benefit from this initiative. how to Apply for Gruhajyoti scheme details inside.

Story first published: Friday, June 30, 2023, 12:38 [IST]

Source link