ಗೃಹಜ್ಯೋತಿ ಯೋಜನೆ; ಹೊಸ ಅಪ್‌ಡೇಟ್‌ ಕೊಟ್ಟ ಸರ್ಕಾರ | How to Apply For Gruha Jyoti Scheme At Bapuji Seva Kendra

Karnataka

oi-Gururaj S

|

Google Oneindia Kannada News

ಬೆಂಗಳೂರು, ಜುಲೈ 12; ಕರ್ನಾಟಕ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳಲ್ಲಿ ಒಂದು ‘ಗೃಹಜ್ಯೋತಿ’ ಯೋಜನೆ. ಈಗಾಗಲೇ ಯೋಜನೆಗೆ ಅರ್ಜಿ ಸಲ್ಲಿಕೆ ನಡೆಯುತ್ತಿದೆ. ಈ ಯೋಜನೆ ಆಗಸ್ಟ್‌ನಲ್ಲಿ ಜಾರಿಗೆ ಬರಲಿದ್ದು, ಯೋಜನೆ ಫಲಾನುಭವಿಯಾಗಲು ನೋಂದಣಿ ಕಡ್ಡಾಯವಾಗಿದೆ.

ಇಂಧನ ಇಲಾಖೆ ಜೂನ್ 18ರ ಭಾನುವಾರದಿಂದ ‘ಗೃಹಜ್ಯೋತಿ’ ಯೋಜನೆಗೆ ಅರ್ಜಿ ಸಲ್ಲಿಕೆ ಆರಂಭಿಸಿದೆ. ರಾಜ್ಯದ ಗೃಹಬಳಕೆಯ ಗ್ರಾಹಕರಿಗೆ 200 ಯೂನಿಟ್‌ಗಳ ತನಕ ಉಚಿತ ವಿದ್ಯುತ್ ನೀಡುವ ಯೋಜನೆಗೆ ಜನರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.

ಗೃಹಲಕ್ಷ್ಮಿ, ಗೃಹ ಜ್ಯೋತಿ ಅರ್ಜಿದಾರರೇ ಗಮನಿಸಿ: ನೀವು ಮೋಸ ಹೋಗಬಹುದು ಹುಷಾರ್! ಗೃಹಲಕ್ಷ್ಮಿ, ಗೃಹ ಜ್ಯೋತಿ ಅರ್ಜಿದಾರರೇ ಗಮನಿಸಿ: ನೀವು ಮೋಸ ಹೋಗಬಹುದು ಹುಷಾರ್!

Gruha Jyoti Scheme At Bapuji Seva Kendra

‘ಗೃಹಜ್ಯೋತಿ’ ಯೋಜನೆಯ ಫಲಾನುಭವಿಯಾಗಲು ಆನ್‌ಲೈನ್‌ ಮೂಲಕ ಸೇವಾ ಸಿಂಧು ಪೋರ್ಟಲ್‌ಗೆ ಭೇಟಿ ನೀಡಿ (https://sevasindhugs.karnataka.gov.in/) ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಇದಲ್ಲದೇ ಹತ್ತಿರದ ವಿದ್ಯುತ್ ಕಚೇರಿ, ಬೆಂಗಳೂರು ಒನ್, ಗ್ರಾಮ್ ಒನ್ ಮತ್ತು ಕರ್ನಾಟಕ ಒನ್ ಕೇಂದ್ರದಲ್ಲಿಯೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಈಗ ಸರ್ಕಾರ ಯೋಜನೆ ನೋಂದಣಿಗೆ ಮತ್ತೊಂದು ಅಪ್‌ಡೇಟ್‌ ನೀಡಿದೆ.

ಗೃಹಜ್ಯೋತಿ ಯೋಜನೆ; ಅರ್ಜಿ ಸಲ್ಲಿಕೆಗೆ ಲಿಂಕ್, ವಿವರಗಳು, ಸಹಾಯವಾಣಿ ಗೃಹಜ್ಯೋತಿ ಯೋಜನೆ; ಅರ್ಜಿ ಸಲ್ಲಿಕೆಗೆ ಲಿಂಕ್, ವಿವರಗಳು, ಸಹಾಯವಾಣಿ

ಬಾಪೂಜಿ ಸೇವಾ ಕೇಂದ್ರ; ‘ಗೃಹಜ್ಯೋತಿ’ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಯೋಜನೆಯ ನೋಂದಣಿಗಾಗಿ ಅರ್ಜಿಗಳನ್ನು ಗ್ರಾಮೀಣ ಪ್ರದೇಶದ ಫಲಾನುಭವಿಗಳು ಜಿಲ್ಲೆಯ ಗ್ರಾಮ ಪಂಚಾಯತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರದಲ್ಲಿಯೂ ಸಲ್ಲಿಸಲು ಅವಕಾಶ ನೀಡಿದೆ. ಈ ಕೇಂದ್ರದಲ್ಲಿ ಅರ್ಜಿಗಳನ್ನು ಸಲ್ಲಿಸಲು ಪ್ರತಿ ಅರ್ಜಿಗೆ 20 ರೂ. ಗಳ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಗೃಹಜ್ಯೋತಿ; ಹೊಸ ಲಿಂಕ್ ಬಿಡುಗಡೆ, ನೋಂದಣಿಗೆ ಡೆಡ್‌ಲೈನ್ ಇಲ್ಲ ಗೃಹಜ್ಯೋತಿ; ಹೊಸ ಲಿಂಕ್ ಬಿಡುಗಡೆ, ನೋಂದಣಿಗೆ ಡೆಡ್‌ಲೈನ್ ಇಲ್ಲ

ಯಾವುದೇ ಹೆಚ್ಚುವರಿ ಶುಲ್ಕವನ್ನು ಸಂದಾಯ ಮಾಡದೇ ಫಲಾನುಭವಿಗಳು ತಮ್ಮ ಸ್ಥಳೀಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಬಾಪೂಜಿ ಸೇವಾ ಕೇಂದ್ರದಲ್ಲಿ ‘ಗೃಹಜ್ಯೋತಿ’ ಯೋಜನೆಯಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಮನವಿ ಮಾಡಲಾಗಿದೆ.

‘ಗೃಹಜ್ಯೋತಿ’ ಯೋಜನೆಯ ನೋಂದಣಿಗಾಗಿಯೇ ಗ್ರಾಮ ಪಂಚಾಯತಿಗಳಿಗೆ ಸೇವಾಸಿಂಧು ಪೋರ್ಟ್‌ಲ್‌ನ ಲಾಗಿನ್‍ಗಳನ್ನು ನೀಡಲಾಗಿದೆ. ಜನರು ಇದರ ಸದುಪಯೋಗ ಪಡೆದುಕೊಂಡು ನೋಂದಣಿ ಮಾಡಿಸಿಕೊಳ್ಳಬಹುದು.

ನೋಂದಣಿ ಮಾಡುವುದು ಸುಲಭ; ‘ಗೃಹಜ್ಯೋತಿ’ ಯೋಜನೆ 2023ರ ಆಗಸ್ಟ್ 1 (ಜುಲೈ ತಿಂಗಳ ವಿದ್ಯುಚ್ಛಕ್ತಿ ಬಳಕೆ ಬಿಲ್‌ನಿಂದ) ಜಾರಿಗೆ ಬರಲಿದೆ. ಯೋಜನೆಯ ಅರ್ಹತೆಯ ಮಿತಿಯಲ್ಲಿದ್ದ ಫಲಾನುಭವಿಗಳು ಆಗಸ್ಟ್ 1 ರಿಂದ ಶೂನ್ಯ ಬಿಲ್ ಪಡೆಯಲಿದ್ದಾರೆ. ಫಲಾನುಭವಿಯಾಗಲು ನೋಂದಣಿ ಕಡ್ಡಾಯ.

ಯೋಜನೆ ಕುರಿತು ಮಾತನಾಡಿರುವ ಇಂಧನ ಸಚಿವ ಕೆ. ಜೆ. ಜಾರ್ಜ್‌, “ಗೃಹಜ್ಯೋತಿ ಯೋಜನೆ ಫಲಾನುಭವಿಯಾಗಲು ನೋಂದಣಿ ಮಾಡಲು ಯಾವುದೇ ಗಡುವು ಇಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಜನರು ‘ಗೃಹಜ್ಯೋತಿ’ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವಾಗ ಆಧಾರ್ ಕಾರ್ಡ್, ಗ್ರಾಹಕರ ID ಗಳ ಮಾಹಿತಿಗಳನ್ನು (ವಿದ್ಯುಚ್ಛಕ್ತಿ ಬಿಲ್‌ನಲ್ಲಿ ಇರುವಂತೆ) ನೀಡಬೇಕಾಗುತ್ತದೆ. ನೋಂದಣಿಯನ್ನು ಸುಲಭವಾಗಿ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಜನರು ನೋಂದಣಿ ಮಾಡುವಾಗ

* ಎಸ್ಕಾಂ ಹೆಸರು

* ಖಾತೆ ಸಂಖ್ಯೆ

* ಖಾತೆದಾರರ ಹೆಸರು ಎಸ್ಕಾಂ ನಲ್ಲಿರುವಂತೆ

* ಖಾತೆದಾರರ ವಿಳಾಸ ಎಸ್ಕಾಂ ನಲ್ಲಿರುವಂತೆ

* ಎಸ್ಕಾಂ ಹೆಸರು1

* ಬಳಕೆದಾರರ ವಿಧ (ಇಲ್ಲಿ ಎರಡು ಆಯ್ಕೆಗಳಿದ್ದು ಬಾಡಿಗೆದಾರರು/ ಮಾಲೀಕರು) ಎಂದಿದೆ

* ಆಧಾರ್ ಸಂಖ್ಯೆ

* ಅರ್ಜಿದಾರರ ಹೆಸರು

* ಸಂವಹನಕ್ಕಾಗಿ ದೂರವಾಣಿ ಸಂಖ್ಯೆ ವಿವರವನ್ನು ನಮೂದು ಮಾಡಬೇಕು. ಆಧಾರ್‌ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್‌ ನಂಬರ್‌ಗೆ ಬರುವ ಓಟಿಪಿ ನಮೂದು ಮಾಡಿ ನೋಂದಣಿ ಮಾಡಿಕೊಳ್ಳಬೇಕು.

English summary

Now Karnataka government allowed to submit application for the Gruha Jyoti scheme at Bapuji Seva Kendra at gram panchayat level.

Source link