ಗೃಹಜ್ಯೋತಿ: ಕೆಲವೇ ದಿನಗಳಲ್ಲೆ ಮೈಲಿಗಲ್ಲು ಸಾಧಿಸಿದ ಗೃಹಜ್ಯೋತಿ ಯೋಜನೆ | Gruha Jyoti: 51 Lakh Consumer Registrations For Gruha Jyothi Scheme

Karnataka

oi-Naveen Kumar N

|

Google Oneindia Kannada News

ಪ್ರತಿ ತಿಂಗಳು 200 ಯೂನಿಟ್ ವರೆಗೆ ವಿದ್ಯುತ್ ಪಡೆಯುವ ಗೃಹ ಜ್ಯೋತಿ ಯೋಜನೆಗೆ ಅಭೂತಪೂರ್ವ ಜನಸ್ಪಂದನೆ ವ್ಯಕ್ತವಾಗಿದೆ. ಜೂನ್ 18ರಂದು ಗೃಹಜ್ಯೋತಿ ಯೋಜನೆ ಫಲಾನುಭವಿಗಳಾಗಲು, ನೋಂದಣಿ ಪ್ರಕ್ರಿಯೆ ಆರಂಭವಾಗಿತ್ತು. ಈಗ ಕೇವಲ 7 ದಿನಗಳಲ್ಲಿ ನೋಂದಣಿ ಮಾಡಿಕೊಂಡ ಗ್ರಾಹಕರ ಸಂಖ್ಯೆ 50 ಲಕ್ಷ ದಾಟಿದೆ.

ಜೂನ್ 25ರಂದು ಸಂಜೆ ವೇಳೆಗೆ ರಾಜ್ಯಾದ್ಯಂತ ಗೃಹಜ್ಯೋತಿ ಯೋಜನೆಗಾಗಿ ನೋಂದಣಿ ಮಾಡಿಕೊಂಡ ಗ್ರಾಹಕರ ಸಂಖ್ಯೆ 51 ಲಕ್ಷ ದಾಟಿಗೆ ಎಂದು ಬೆಸ್ಕಾಂ ವ್ಯವಸ್ಥಾಪ ನಿರ್ದೇಶಕರು ಟ್ವಿಟ್ ಮಾಡಿದ್ದಾರೆ. ಆರಂಭದಲ್ಲಿ ಕೆಲವು ಸಮಸ್ಯೆಗಳು ಎದುರಾದ ಕಾರಣ ನೋಂದಣಿ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿತು, ನಂತರ ಇಲಾಖೆ ಹಲವು ಸುಧಾರಣೆಗಳನ್ನು ತಂದಿದ್ದು, ಈಗ ನೋಂದಣಿ ಪ್ರಕ್ರಿಯೆ ಇನ್ನೂ ಸುಲಭವಾಗಿದೆ.

Gruha Jyoti

ಮೊದಲ ದಿನವೇ ಸರ್ವರ್ ಕೈಕೊಟ್ಟಿದ್ದರಿಂದ ನೋಂದಣಿ ಪ್ರಕ್ರಿಯೆ ನಿಧಾನವಾಗಿ ನಡೆದಿತ್ತು. ಈಗಲೂ ಕೂಡ ಕೆಲವೊಮ್ಮೆ ಸರ್ವರ್ ಸಮಸ್ಯೆಯಾಗುತ್ತಿದೆ. ಅಧಿಕ ಪ್ರಮಾಂದಲ್ಲಿ ಗ್ರಾಹಕರು ನೋಂದಣಿ ಪ್ರಕ್ರಿಯೆ ಮಾಡಿಕೊಳ್ಳುತ್ತಿರುವುದಿರಂದ ಕೆಲವೊಮ್ಮೆ ಸರ್ವರ್ ಸಮಸ್ಯೆ ಉಂಟಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಕಲಿ ಲಿಂಕ್‌ಗಳ ಎಚ್ಚರಿಕೆ ವಹಿಸಲು ಮನವಿ

ಇನ್ನು ಸೈಬರ್ ಕಳ್ಳರು ಗೃಹಜ್ಯೋತಿ ಯೋಜನೆ ಹೆಸರಿನಲ್ಲಿ ಗ್ರಾಹಕರ ಮಾಹಿತಿಗೆ ಕನ್ನ ಹಾಕಲು ಪ್ರಯತ್ನ ಮಾಡುತ್ತಿದ್ದು ಈ ಬಗ್ಗೆ ಎಚ್ಚರ ವಹಿಸುವಂತೆ ಬೆಸ್ಕಾಂ ಮನವಿ ಮಾಡಿದೆ. ಗೃಹಜ್ಯೋತಿ ಹೆಸರಲಿನಲ್ಲಿ ಹಲವು ನಕಲಿ ಲಿಂಕ್‌ಗಳನ್ನು ಹರಿಬಿಟ್ಟಿದ್ದು ಅವುಗಳ ಮೇಲೆ ಕ್ಲಿಕ್ ಮಾಡಿದರೆ, ನಿಮ್ಮ ಆಧಾರ್ ಮಾಹಿತಿಯನ್ನು ಕದಿಯುವ ಅಪಾಯವಿದೆ ಎಂದು ಹೇಳಿದ್ದಾರೆ.

ಗೃಹಜ್ಯೋತಿ ಮಾತ್ರವಲ್ಲದೆ, ಗೃಹಲಕ್ಷ್ಮಿ, ಯುವನಿಧಿ ಯೋಜನೆ ಹೆಸರಿನಲ್ಲಿ ಕೂಡ ಹಲವು ಅಪ್ಲಿಕೇಷನ್ ಮತ್ತು ನಕಲಿ ಲಿಂಕ್‌ಗಳನ್ನು ಹಂಚಿಕೊಳ್ಳಲಾಗುತ್ತಿದ್ದೆ ಎಚ್ಚರಿಕೆ ವಹಿಸಲು ಕೋರಿದೆ. ಗೃಹಲಕ್ಷ್ಮಿ, ಯುವ ನಿಧಿ ಯೋಜನೆಯಲ್ಲಿ ಹಣ ಪಡೆಯಲು ಫಲಾನುಭವಿಗಳು ಬ್ಯಾಂಕ್ ಖಾತೆ ಮಾಹಿತಿ ಕೂಡ ನಮೂದಿಸಬೇಕಾಗಿದ್ದು, ನಕಲಿ ಲಿಂಕ್‌ಗಳಲ್ಲಿ ಈ ಮಾಹಿತಿಯನ್ನು ಹಂಚಿಕೊಂಡರೆ ನಿಮ್ಮ ಬ್ಯಾಂಕ್‌ ಖಾತೆಗೆ ಕನ್ನ ಬೀಳುವ ಅಪಾಯ ಇದೆ. ಆದ್ದರಿಂದ ಸರ್ಕಾರ ನೀಡುವ ಅಧಿಕೃತ ಲಿಂಕ್‌ಗಳನ್ನು ಬಳಸಿಕೊಂಡು ನೋಂದಣಿ ಮಾಡಿಕೊಳ್ಳಲು ಕೇಳಿದೆ.

ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ವಿದ್ಯುತ್ ಇಲಾಖೆ ಕಚೇರಿಗಳಲ್ಲಿ ಕೂಡ ನೋಂದಣಿ ಮಾಡಲಾಗುತ್ತಿದೆ. ಇದಕ್ಕೆ ಯಾವುದೇ ಶುಲ್ಕ ಕೂಡ ವಿಧಿಸುತ್ತಿಲ್ಲ, ಉಚಿತವಾಗಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವವರು ಯಾವುದೇ ಬಾಡಿಗೆ ಕರಾರು ಪತ್ರವನ್ನು ನೀಡುವಂತಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.

“ನೋಂದಣಿ ಪ್ರಕ್ರಿಯೆ ಸರಳವಾಗಿದ್ದು, ವಿದ್ಯುತ್ ಬಿಲ್‌ನಲ್ಲಿರುವ ಖಾತೆ ಸಂಖ್ಯೆ, ಗ್ರಾಹಕರ ಆಧಾರ್ ಸಂಖ್ಯೆ, ಹಾಗೂ ಮೊಬೈಲ್ ನಂಬರ್ ಬಳಸಿಕೊಂಡು ನೋಂದಣಿ ಮಾಡಬಹುದಾಗಿದೆ. www.sevasindhugs.karnataka.gov.in ವೆಬ್‌ಸೈಟ್‌ಗೆ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ.

English summary

51 Lakh Consumer Registrations for Gruha Jyothi Scheme Across Karnataka; Registration Process Eased with No Documents Required After Initial Challenges.

Story first published: Sunday, June 25, 2023, 21:58 [IST]

Source link