ಗುಂಡ್ಲುಪೇಟೆ: ಬೈಕ್‌ ಮತ್ತು ಟಿಪ್ಪರ್‌ ನಡುವೆ ಭೀಕರ ಅಪಘಾತ, ಪಾರ್ವತಮ್ಮ ರಾಜ್‌ಕುಮಾರ್‌ ಅಳಿಯಗೆ ಗಂಭೀರ ಗಾಯ | Gundlupet: Accident between bike and lorry, Parvathamma Rajkumar’s son-in-law seriously injured

Chamarajanagar

lekhaka-Surendra S

By ಚಾಮರಾಜನಗರ ಪ್ರತಿನಿಧಿ

|

Google Oneindia Kannada News

ಚಾಮರಾಜನಗರ, ಜೂನ್‌, 25: ಟಿಪ್ಪರ್‌ ಲಾರಿ ಮತ್ತು ಬೈಕ್‌ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಬೇಗೂರು ಸಮೀಪದ ಹಿರಿಕಾಟಿ ಗೇಟ್ ಬಳಿ ನಡೆದಿದೆ. ಇನ್ನು ಘಟನೆಯಲ್ಲಿ ಪಾರ್ವತಮ್ಮ ರಾಜ್‌ಕುಮಾರ್‌ ಅಳಿಯ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಭೀಕರ ಅಪಫಾತದಲ್ಲಿ ತೀವ್ರವಾಗಿ ಗಾಯಗೊಂಡವರು ಪಾರ್ವತಮ್ಮ ರಾಜ್‌ಕುಮಾರ್‌ ಅಳಿಯನಾದ ಧೀರಜ್ (28) ಎಂದು ತಿಳಿದುಬಂದಿದೆ. ಧೀರಜ್‌ ರಾಯಲ್‌ ಎನ್‌ಫೀಲ್ಡ್‌ ಬೈಕ್‌ನಲ್ಲಿ ಮೈಸೂರಿನಿಂದ ಊಟಿಗೆ ಹೊರಟಿದ್ದರು. ಈ ವೇಳೆ ಬೈಕ್‌ಗೆ ಟಿಪ್ಪರ್‌ ಲಾರಿ ಡಿಕ್ಕಿ ಹೊಡೆದ ಪರಿಣಾಮ ಧೀರಜ್‌ ಗಂಭೀರವಾಗಿ ಗಾಯಗೊಂಡಿದ್ದಾರೆ.

Gundlupet: Accident between bike and lorry, Parvathamma Rajkumars son-in-law seriously injured

ಈ ಘಟನೆ ಶನಿವಾರ (ಜೂನ್‌ 24) ಮಧ್ಯಾಹ್ನ 3 ಗಂಟೆಗೆ ನಡೆದಿದ್ದು, ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಧೀರಜ್ ಅವರು ಸದ್ಯ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಧೀರಜ್‌ ಅವರು ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೊತೆ ಉತ್ತಮವಾದ ಸಂಬಂಧ ಹೊಂದಿದವರಾಗಿದ್ದರು. ಅಲ್ಲದೆ ದರ್ಶನ್‌ ನಟಿಸಿದ ಹಲವು ಸಿನಿಮಾಗಳಿಗೆ ನಿರ್ದೇಶನವನ್ನು ಕೂಡ ಮಾಡಿದ್ದಾರೆ ಎನ್ನಲಾಗಿದೆ.

English summary

Horrible accident between bike and lorry near Beguru of Gundlupete taluk, son-in-law of Parvathamma Rajkumar’s son-in-law Dheeraj seriously injured,

Source link