ಲಕ್ಷ್ಯ ಸೇನ್ ಒಂದು ಗಂಟೆ, 10 ನಿಮಿಷಗಳ ಸುದೀರ್ಘ ಹೋರಾಟದಲ್ಲಿ ಕಂಚಿನ ಪದಕದ ಪಂದ್ಯದಲ್ಲಿ ಸೋತಿದ್ದಾರೆ. ಭಾರತದ ಬ್ಯಾಡ್ಮಿಂಟನ್ ವಿಭಾಗದಲ್ಲಿ ಲಕ್ಷ್ಯ ಜೊತೆಗೆ ಪಿವಿ ಸಿಂಧು, ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ, ಅಶ್ವಿನಿ ಪೊನ್ನಪ್ಪ, ಎಚ್‌ಎಸ್ ಪ್ರಣೋಯ್ ಎಲ್ಲರೂ ಸಹ ಬರಿಗೈಲಿ ವಾಪಾಸ್ ಆಗಿದ್ದಾರೆ. ಕಳೆದ ಮೂರು ಒಲಿಂಪಿಕ್ಸ್ಗಳಲ್ಲಿ ಭಾರತ ಪದಕ ಗೆದ್ದಿತ್ತು. ಸಿಂಧು (2016 ಬೆಳ್ಳಿ, 2020 ಕಂಚು), ಸೈನಾ (2012 ಕಂಚು) ಈ ಹಿಂದೆ ಪದಕ ಗೆದ್ದ ಸಾಧಕರು.