Gossips
oi-Muralidhar S
By ಫಿಲ್ಮಿಬೀಟ್ ಡೆಸ್ಕ್
|
ಧನುಷ್
ತಮಿಳು
ಚಿತ್ರರಂಗದ
ಮೋಸ್ಟ್
ಸಕ್ಸಸ್‌ಫುಲ್
ಸ್ಟಾರ್
ನಟ.
ಅಲ್ಲದೆ
ಅತೀ
ಹೆಚ್ಚು
ಸಿನಿಮಾಗಳನ್ನು
ಒಪ್ಪಿಕೊಳ್ಳುತ್ತಿರುವ
ನಟ
ಕೂಡ
ಇವರೇನೆ.
ತಮಿಳು,
ತೆಲುಗು,
ಬಾಲಿವುಡ್
ಹಾಗೂ
ಹಾಲಿವುಡ್
ಸಿನಿಮಾಗಳಲ್ಲೂ
ನಟಿಸುತ್ತಿರುವ
ಧನುಷ್
ಫ್ಯಾನ್
ಫಾಲೋವಿಂಗ್
ಏನೂ
ಕಮ್ಮಿಯಿಲ್ಲ.
ಭಾರತೀಯ
ಚಿತ್ರರಂಗದಲ್ಲಿ
ಧನುಷ್
ನಟಿಸೋ
ಸಿನಿಮಾಗಳಿಗಿರೋ
ಕ್ರೇಜ್
ಬೇರೆನೇ.
ಇಂತಹ
ನಟ
ನಾಳೆ
(ಜುಲೈ
28)
40ನೇ
ವರ್ಷದ
ಹುಟ್ಟುಹಬ್ಬವನ್ನು
ಆಚರಿಸಿಕೊಳ್ಳುತ್ತಿದ್ದಾರೆ.
ಈ
ಹುಟ್ಟುಹಬ್ಬದ
ಸಂದರ್ಭದಲ್ಲಿಯೇ
ಧನುಷ್
50ನೇ
ಸಿನಿಮಾವನ್ನು
ಆರಂಭಿಸಿದ್ದು,
ತಾವೇ
ನಿರ್ದೇಶನವನ್ನು
ಮಾಡುತ್ತಿದ್ದಾರೆ.
ವೃತ್ತಿ
ಬದುಕಿನಲ್ಲಿ
ಸಿಕ್ಕಾಪಟ್ಟೆ
ಯಶಸ್ಸು
ಸಿಕ್ಕಿದೆ.
ಆದರೆ,
ವೈಯಕ್ತಿಕ
ಬದುಕು
ಮಾತ್ರ
ತಳ
ಹಿಡಿದಿದೆ.
ಇತ್ತ
ಪತ್ನಿ
ಐಶ್ವರ್ಯಾಗೆ
ವಿಚ್ಛೇದನ
ನೀಡಿದ್ದಾರೆ.
ಅತ್ತ
ಧನುಷ್
ಮೇಲೆ
ಒಂದಲ್ಲ
ಒಂದು
ಆರೋಪಗಳು
ಕೇಳಿ
ಬರುತ್ತಲೇ
ಇರುತ್ತೆ.
ಇತ್ತೀಚೆಗೆ
ತಮಿಳು
ನಟ
ಹಾಗೂ
ಸಿನಿಮಾ
ಕ್ರಿಟಿಕ್
ಬೈಲ್ವಾನ್
ರಂಗನಾಥನ್
ನಟ
ಧನುಷ್
ವಿರುದ್ಧ
ಮತ್ತೊಂದು
ಆರೋಪ
ಮಾಡಿದ್ದರು.
ಅದೂ
ತಮಿಳು
ಚಿತ್ರರಂಗದಲ್ಲಿ
ಸಿಕ್ಕಾಪಟ್ಟೆ
ಚರ್ಚೆಯಾಗುತ್ತಿದೆ.
ವಿವಾದಗಳ
ಸರದಾರ
ಧನುಷ್
ಧನುಷ್
ಬಗ್ಗೆ
ವಿವಾದಗಳಿಗೇನು
ಕಮ್ಮಿಯಿಲ್ಲ.
ಇತ್ತೀಚೆಗೆ
ಧನುಷ್
ವಿರುದ್ಧ
ತಮಿಳು
ನಟ
ಹಾಗೂ
ಸಿನಿಮಾ
ಕ್ರಿಟಿಕ್
ಬೈಲ್ವಾನ್
ರಂಗನಾಥನ್
ಗಂಭೀರ
ಆರೋಪ
ಮಾಡಿದ್ದರು.
ಈ
ಆರೋಪದ
ವಿರುದ್ಧ
ಧನುಷ್
ಆಭಿಮಾನಿಗಳು
ಕಿಡಿಕಾರುತ್ತಿದ್ದಾರೆ.
ಆ
ಆರೋಪದ
ಬಗ್ಗೆನೇ
ಈಗ
ಸೋಶಿಯಲ್
ಮೀಡಿಯಾದಲ್ಲಿ
ಸಿಕ್ಕಾಪಟ್ಟೆ
ಚರ್ಚೆಯಾಗುತ್ತಿದೆ.
ಬೈಲ್ವಾನ್
ರಂಗನಾಥ್
ಆರೋಪ
ಮಾಡಿರುವ
ಪ್ರಕಾರ,
ತಮಿಳು
ಗಾಯಕಿ
ಸುಚಿತ್ರಾ
ಮೇಲೆ
ಧನುಷ್‌ಗೆ
ಲವ್
ಆಗಿತ್ತು
ಎಂದು
ಆರೋಪ
ಮಾಡಿದ್ದಾರೆ.
ಬೈಲ್ವಾನ್
ರಂಗನಾಥ್
ಆರೋಪವೇನು?
ಬೈಲ್ವಾನ್
ರಂಗನಾಥ್
ತನ್ನ
ಯೂಟ್ಯೂಬ್
ಚಾನೆಲ್‌ನಲ್ಲಿ
ಧನುಷ್
ಬಗ್ಗೆ
ಗಂಭೀರ
ಆರೋಪ
ಮಾಡಿದ್ದಾರೆ.
“ಧನುಷ್
ಹಾಗೂ
ಸುಚಿತ್ರಾ
ಇಬ್ಬರೂ
ಹತ್ತಿರದ
ಸಂಬಂಧ
ಹೊಂದಿದ್ದರು.
ಆದರೆ,
ಒಂದು
ದಿನ
ಇದ್ದಕ್ಕಿದ್ದ
ಹಾಗೇ
ಗಾಯಕಿಯಿಂದ
ಧನುಷ್
ಅಂತರ
ಕಾಯ್ದುಕೊಂಡಿದ್ದರು.
ಇದನ್ನು
ಸುಚಿತ್ರಾಗೆ
ತಡೆದುಕೊಳ್ಳೋಕೆ
ಆಗಿಲ್ಲ.
ಇದು
ಸುಚಿತ್ರಾ
ಅವರ
ಮಾನಸಿಕ
ಸಮಸ್ಯೆಗೆ
ಎಡೆ
ಮಾಡಿಕೊಟ್ಟಿತ್ತು.
ಆ
ಬಳಿಕ
ಸುಚಿತ್ರಾ
ಮಧ್ಯಪಾನ
ಶುರು
ಮಾಡಿದ್ದರು”
ಎಂದು
ಬೈಲ್ವಾನ್
ರಂಗನಾಥ್
ಯೂಟ್ಯೂಬ್
ಚಾನೆಲ್‌ನಲ್ಲಿ
ತಿಳಿಸಿದ್ದಾರೆ.
ಸುಚಿ
ಲೀಕ್ಸ್‌ನಲ್ಲಿ
ಧನುಷ್
ಹೆಸರು
2017ರಲ್ಲಿ
ಸುಚಿ
ಲೀಕ್ಸ್
ಹೆಸರಲ್ಲಿ
ಧನುಷ್
ವಿರುದ್ಧ
ಇಂತಹದ್ದೇ
ಆರೋಪ
ಮಾಡಿದ್ದರು.
ಧನುಷ್
ವಿರುದ್ಧ
ಫೋಟೊಗಳು
ಹಾಗೂ
ವಿಡಿಯೋಗಳನ್ನು
ಸುಚಿತ್ರಾ
ಅವರ
ಟ್ವಿಟರ್
ಅಕೌಂಟ್
ಮೂಲಕವೇ
ರಿಲೀಸ್
ಮಾಡಲಾಗಿತ್ತು.
ಬಳಿಕ
ಸುಚಿತ್ರಾ
ತನ್ನ
ಟ್ವಿಟರ್
ಅಕೌಂಟ್
ಹ್ಯಾಕ್
ಆಗಿದ್ದು,
ಯಾರೋ
ಫೋಟೊ
ಹಾಗೂ
ವಿಡಿಯೋವನ್ನು
ಲೀಕ್
ಮಾಡುತ್ತಿದ್ದಾರೆಂದು
ನೀಡಿದ
ದೂರಿನಲ್ಲಿ
ತಿಳಿಸಿದ್ದರು.
ಆದರೆ,
ಧನುಷ್
ಅವರದ್ದು
ಎನ್ನಲಾದ
ಖಾಸಗಿ
ಫೋಟೊ
ಹಾಗೂ
ವಿಡಿಯೋವನ್ನು
ರಿವೀಲ್
ಮಾಡಲಾಗಿತ್ತು.
Captain
Miller:
ಶಿವಣ್ಣ,
ಧನುಷ್
ನಟನೆಯ
‘ಕ್ಯಾಪ್ಟನ್
ಮಿಲ್ಲರ್’
ಟೀಸರ್
ಬಿಡುಗಡೆ
ದಿನಾಂಕ,
ಸಮಯ
ಪ್ರಕಟ
ಸುಚಿತ್ರಾಗೆ
ಮಾನಸಿಕ
ಸಮಸ್ಯೆ?
ವಿವಾದದ
ಬಳಿಕ
ಸುಚಿತ್ರಾ
ಮಾನಸಿಕ
ಸಮಸ್ಯೆಯಿಂದ
ಬಳಲುತ್ತಿದ್ದರು
ಎನ್ನಲಾಗಿದ್ದು,
ಚಿಕಿತ್ಸೆಗಾಗಿ
ಲಂಡನ್‌ಗೆ
ಪಯಣ
ಬೆಳೆಸಿದ್ದರು.
ಕಾರ್ತಿಕ್
ಜೊತೆ
ಗಾಯಕಿ
ಸುಚಿತ್ರಾ
ವಿಚ್ಛೇದನ
ಕೂಡ
ಆಗಿದೆ.
ಇದೇ
ವೇಳೆ
ಬೈಲ್ವಾನ್
ರಂಗನಾಥ್
ಮಾಡಿರುವ
ಆರೋಪವೀಗ
ಮತ್ತೆ
ಚರ್ಚೆಯಾಗುತ್ತಿದೆ.
English summary
Viral Bayilvan Ranganathan blamed Dhanush for Suchitra-Karthik divorce
Thursday, July 27, 2023, 19:16