ನವದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ‘ವುಮೆನ್ ಇನ್ ಬ್ಲೂ’ ಅತ್ಯುತ್ತಮ ದಾಳಿ ಮತ್ತು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿ ಮಾಸ್ಟರ್ ಕ್ಲಾಸ್ ಪ್ರದರ್ಶನ ನೀಡಿತು. 66-16 ಅಂಕಗಳಿಂದ ಪ್ರವಾಸಿಗರನ್ನು ಮಣಿಸಿದ ಭಾರತೀಯ ನಾರಿಯರು, ಚೊಚ್ಚಲ ಟ್ರೋಫಿ ಗೆಲ್ಲುವ ಕನಸಿನಲ್ಲಿದ್ದಾರೆ. ಪಂದ್ಯದ ಆರಂಭದಿಂದ ಕೊನೆಯ ತನಕ ಭಾರತದ ಮಹಿಳಾ ತಂಡ ಪ್ರಬಲ ಹೋರಾಟ ನಡೆಸಿತು. ಆದರೆ, ದಕ್ಷಿಣ ಆಫ್ರಿಕಾ ಯಾವುದೇ ಹಂತದಲ್ಲೂ ಪ್ರತಿರೋಧ ತೋರಲಿಲ್ಲ. ಪರಿಣಾಮ ಸೋಲಿಗೆ ಶರಣಾಯಿತು. ಮತ್ತೊಂದು ಸೆಮಿಫೈನಲ್ನಲ್ಲಿ ನೇಪಾಳದ ಮಹಿಳೆಯರು ಉಗಾಂಡಾ ತಂಡವನ್ನು 89-18ರಿಂದ ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆದರು.