ಕ್ಯಾನ್ಸರ್‌ನಿಂದ ಬಳಲುತ್ತಿರುವ ಸರ್ಕಾರಿ ನೌಕರರಿಗೆ ವಿಶೇಷ ರಜೆ | Special Occasional Leave For Karnataka Govt Employee Who Suffering From Cancer

Karnataka

oi-Gururaj S

|

Google Oneindia Kannada News

ಬೆಂಗಳೂರು, ಜುಲೈ 13; ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಸರ್ಕಾರಿ ನೌಕರರಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ನೀಡುವ ಕುರಿತು ಆದೇಶ ಹೊರಡಿಸಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಮನವಿಯನ್ನು ಪರಿಶೀಲಿಸಿ ಈ ಕುರಿತು ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಉಪಕಾರ್ಯದರ್ಶಿ ಆರ್ಥಿಕ ಇಲಾಖೆ (ಸೇವೆಗಳು-1) ಬಿ. ಎಸ್. ಸುವರ್ಣ ಈ ಕುರಿತು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪತ್ರ ದಿನಾಂಕ 26/8/2020 ಉಲ್ಲೇಖ ಮಾಡಿದ್ದಾರೆ.

ರಾಜ್ಯದಲ್ಲಿ ಮುಟ್ಟಿನ ರಜೆ ಬೇಡಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?ರಾಜ್ಯದಲ್ಲಿ ಮುಟ್ಟಿನ ರಜೆ ಬೇಡಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

Special Occasional Leave For Karnataka Govt Employee Who Suffering From Cancer

ಈ ಆದೇಶವು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಸರ್ಕಾರಿ ನೌಕರರು ವೈದ್ಯರ ಸಲಹೆಯ ಮೇರೆಗೆ ಒಳಪಡುವ ಕಿಮೋ/ ರೇಡಿಯೋಥೆರಪಿ ಚಿಕಿತ್ಸೆಯ ಪ್ರಕರಣಗಳಲ್ಲಿ ವಿಶೇಷ ಸಾಂದರ್ಭಿಕ ರಜೆಯ ಮಂಜೂರಾತಿ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

Government employee; ಆರೋಗ್ಯ ಸಂಜೀವಿನಿ ಯೋಜನೆ ಅಪ್‌ಡೇಟ್‌ Government employee; ಆರೋಗ್ಯ ಸಂಜೀವಿನಿ ಯೋಜನೆ ಅಪ್‌ಡೇಟ್‌

ಪ್ರಸ್ತಾವನೆ ಏನಿತ್ತು?; ರಾಜ್ಯದಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಕೆಲವು ಸರ್ಕಾರಿ ನೌಕರರು ಕ್ಯಾನ್ಸರ್ ಕಾಯಿಲೆಗೆ ಸಂಬಂಧಿಸಿದಂತೆ ವೈದ್ಯರ ಸಲಹೆಯ ಮೇರೆಗೆ ಕಿಮೋ/ ರೇಡಿಯೋ ಥೆರಪಿಯಂತಹ ಚಿಕಿತ್ಸೆಗೆ ಒಳಪಡಬೇಕಿದ್ದು, ಆ ನಿಮಿತ್ತವಾಗಿ ಕಡ್ಡಾಯವಾಗಿ ವಿಶ್ರಾಂತಿಯನ್ನು ಪಡೆಯಬೇಕಿರುವ ಅವಶ್ಯಕತೆ ಇರುತ್ತದೆ.

Government employee; ಹಳೆ ಪಿಂಚಣಿ ಯೋಜನೆ ಬಗ್ಗೆ ಸಿಎಂ ಹೇಳಿದ್ದೇನು? Government employee; ಹಳೆ ಪಿಂಚಣಿ ಯೋಜನೆ ಬಗ್ಗೆ ಸಿಎಂ ಹೇಳಿದ್ದೇನು?

ಈ ಚಿಕಿತ್ಸೆ ಪಡೆಯುವಾಗ ವಿಶ್ರಾಂತಿಯ ಅಗತ್ಯತೆಯಿಂದಾಗಿ ಕಛೇರಿಗೆ ಹಾಜರಾಗಲು ಕಷ್ಟ ಸಾಧ್ಯವಾಗುತ್ತದೆ. ಆದ್ದರಿಂದ ಈ ಅವಧಿಯನ್ನು ಸಕ್ಷಮ ವೈದ್ಯಕೀಯ ಪ್ರಾಧಿಕಾರವು ನೀಡುವ ಪ್ರಮಾಣಪತ್ರವನ್ನು ಹಾಜರು ಪಡಿಸುವ ಷರತ್ತಿಗೊಳಪಟ್ಟ ವಿಶೇಷ ಸಾಂದರ್ಭಿಕ ರಜೆಯನ್ನಾಗಿ ಪರಿಗಣಿಸುವಂತೆ ಮನವಿ ಮಾಡಲಾಗಿತ್ತು.

ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕಬ್ಬನ್ ಪಾರ್ಕ್, ಬೆಂಗಳೂರು ಇವರು ಈ ಕುರಿತು ಕೋರಿದ್ದರು. ಈ ವಿಷಯವನ್ನು ಸರ್ಕಾರವು ಪರಿಶೀಲಿಸಿದ್ದು, ಅದರಂತೆ ಈ ಆದೇಶವನ್ನು ಹೊರಡಿಸಲಾಗಿದೆ.

ಸರ್ಕಾರದ ಆದೇಶ; ಸರ್ಕಾರದ ಆದೇಶ ದಿನಾಂಕ 22/06/2021 ಅಡಿ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ಅನಬಂಧ-ಬಿ ರಲ್ಲಿನ ನಿಯಮ 11(ಐ)ರ ನಂತರದಲ್ಲಿ, ಈ ಆದೇಶವನ್ನು ಹೊರಡಿಸಿದ ದಿನಾಂಕದಿಂದ ಜಾರಿಗೊಳ್ಳುವಂತೆ ನಿಯಮ 11(ಜೆ) ಎಂಬ ಹೊಸ ನಿಯಮವನ್ನು ಸೇರ್ಪಡೆಗೊಳಿಸಿದೆ.

ಕೆಎಸ್ಆರ್‌ಟಿಸಿ ಸುತ್ತೋಲೆ; ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) 3/7/2023ರಂದು ಸುತ್ತೋಲೆಯೊಂದನ್ನು ಹೊರಡಿಸಿದೆ. ವ್ಯವಸ್ಥಾಪಕ ನಿರ್ದೇಶಕರು ವಿ. ಅನ್ಬುಕುಮಾರ್ ಹೆಸರಿನಲ್ಲಿ ಈ ಸುತ್ತೋಲೆ ಪ್ರಕಟವಾಗಿದೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ನಿಗಮದ ಅಧಿಕಾರಿ/ ನೌಕರರು ವೈದ್ಯರ ಸಲಹೆಯ ಮೇರೆಗೆ ಒಳಪಡುವ ಕಿಮೋ/ ರೇಡಿಯೋಥೆರಪಿ ಚಿಕಿತ್ಸೆಯ ಪ್ರಕರಣಗಳಲ್ಲಿ ವಿಶೇಷ ಸಾಂದರ್ಭಿಕ ರಜೆ ನೀಡುವ ಕುರಿತು ಎಂಬ ವಿಷಯವನ್ನು ಸುತ್ತೋಲೆ ಒಳಗೊಂಡಿದೆ.

ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸಾ ತಜ್ಞರು ರೂಪಿಸುವ ಯೋಜನೆಯನುಸಾರ ಪಡೆಯುವ ಕಿಮೋ/ ರೇಡಿಯೋ ಥೆರಪಿ ಚಿಕಿತ್ಸೆ ಮತ್ತು ಸಂಬಂಧದಲ್ಲಿ ಅಗತ್ಯವಾಗುವ ವಿಶ್ರಾಂತಿಯ ಅವಧಿಯ ದಿನಗಳಿಗೆ, ಸಕ್ಷಮ ವೈದ್ಯಕೀಯ ಪ್ರಾಧಿಕಾರದಿಂದ ಪ್ರಮಾಣ ಪತ್ರವನ್ನು ಪಡೆದು ಒದಗಿಸುವ ಷರತ್ತಿಗೊಳಪಟ್ಟು, ಈ ಚಿಕಿತ್ಸೆಯ ಅವಧಿಯಲ್ಲಿ ಮಾತ್ರ ಗರಿಷ್ಠ 6 ತಿಂಗಳುಗಳ ಮಿತಿಗೊಳಪಟ್ಟು ಪ್ರಸ್ತುತ ಕ್ಯಾನ್ಸರ್‌ನಿಂದ ಬಳಲುತ್ತಿರುವ ಪ್ರಕರಣಗಳನ್ನು ಒಳಗೊಂಡಂತೆ ವಿಶೇಷ ಸಾಂದರ್ಭಿಕ ರಜೆಯನ್ನು ಸರ್ಕಾರದಲ್ಲಿರುವಂತೆ ನಿಗಮದ ಅಧಿಕಾರಿ/ ನೌಕರರಿಗೆ ನೀಡುವ ಪ್ರಸ್ತಾವನೆಗೆ ನಿಗಮದ ನಿರ್ದೇಶಕರ ಮಂಡಳಿಯು ಠರಾವುದಿನಾಂಕ 27/6/2023 ರನ್ವಯ ಒಪ್ಪಿಗೆ ನೀಡಿರುತ್ತದೆ.

ಸಂಬಂಧಪಟ್ಟವರೂ ಮೇಲಿನ ಒಪ್ಪಿಗೆಯನ್ನು ಮನದಟ್ಟು ಮಾಡಿಕೊಂಡು ಅದರಂತೆ ಕ್ರಮ ಕೈಗೊಳ್ಳತಕ್ಕದ್ದು ಎಂದು ಸೂಚನೆ ನೀಡಲಾಗಿದೆ.

English summary

Special occasional leave for Karnataka government employee who suffering from Cancer and undergo for radio and chemotherapy treatment.

Source link