ಕೊಪ್ಪಳ; ಜೂನ್ 23ರಂದು ಮಿನಿ ಉದ್ಯೋಗ ಮೇಳ | Job Fair In Koppal Employment Exchange Office On June 23

Jobs

oi-Gururaj S

|

Google Oneindia Kannada News

ಕೊಪ್ಪಳ, ಜೂನ್ 22; ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಮಿನಿ ಉದ್ಯೋಗ ಮೇಳವನ್ನು ಜೂನ್ 23ರಂದು ಆಯೋಜನೆ ಮಾಡಲಾಗಿದೆ. ಮೇಳದಲ್ಲಿ 18 ರಿಂದ 32 ವರ್ಷ ವಯೋಮಿತಿಯ ಯುವಕ ಮತ್ತು ಯುವತಿಯರು ಪಾಲ್ಗೊಳ್ಳಬಹುದು.

ಜೂನ್ 23ರ ಶುಕ್ರವಾರ ಬೆಳಗ್ಗೆ 10.30 ರಿಂದ 2.30ರ ತನಕ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಮಿನಿ ಉದ್ಯೋಗ ಮೇಳ ನಡೆಯಲಿದೆ. ಈ ಮೇಳದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ, ಎಲ್ಲರಿಗೂ ಪ್ರವೇಶ ಉಚಿತವಾಗಿರುತ್ತದೆ.

ಮೈಸೂರು; ರೈಲ್ವೆ ಸಹಕಾರ ಬ್ಯಾಂಕ್‌ನಲ್ಲಿ 21 ಹುದ್ದೆಗೆ ಅರ್ಜಿ ಆಹ್ವಾನ ಮೈಸೂರು; ರೈಲ್ವೆ ಸಹಕಾರ ಬ್ಯಾಂಕ್‌ನಲ್ಲಿ 21 ಹುದ್ದೆಗೆ ಅರ್ಜಿ ಆಹ್ವಾನ

Job Fair In Koppal Employment Exchange Office On June 23

ಉದ್ಯೋಗ ಮೇಳದಲ್ಲಿ ಶ್ರೀರಾಮ ಲೈಫ್ ಇನ್ಸೂರೆನ್ಸ್ ಹುಬ್ಬಳ್ಳಿ, ವಿಸ್ಟ್ರಾನ್ ನರಸಾಪುರ ಇಂಡಸ್ಟ್ರೀಯಲ್ ಏರಿಯಾ, ಕೋಲಾರ. ದೇಶಪಾಂಡೆ ಫೌಂಡೇಶನ್ ಹುಬ್ಬಳ್ಳಿ, ಕೆಪಿಎಫ್ ಕೊಪ್ಪಳ ಇವರು ತಮ್ಮಲ್ಲಿನ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದ್ದಾರೆ.

 Indian Railways: ಭಾರತೀಯ ರೈಲ್ವೇ ನೇಮಕಾತಿ 2023: ಯಾವ ಪೋಸ್ಟ್, ಅರ್ಹತೆ ಏನು, ಅರ್ಜಿ ಸಲ್ಲಿಕೆ ಹೇಗೆ ತಿಳಿಯಿರಿ Indian Railways: ಭಾರತೀಯ ರೈಲ್ವೇ ನೇಮಕಾತಿ 2023: ಯಾವ ಪೋಸ್ಟ್, ಅರ್ಹತೆ ಏನು, ಅರ್ಜಿ ಸಲ್ಲಿಕೆ ಹೇಗೆ ತಿಳಿಯಿರಿ

ಮೇಳದಲ್ಲಿ ಎಸ್. ಎಸ್. ಎಲ್. ಸಿ, ಪಿಯುಸಿ, ಐಟಿಐ (ಆಲ್ ಟ್ರೇಡ್) ಹಾಗೂ ಡಿಪ್ಲೋಮಾ, ಯಾವುದೇ ಪದವಿ ಅಭ್ಯರ್ಥಿಗಳನ್ನು ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಕೊಪ್ಪಳ; ಅತಿಥಿ ಶಿಕ್ಷಕರ ನೇಮಕ, ಜೂ. 26ರೊಳಗೆ ಅರ್ಜಿ ಹಾಕಿ ಕೊಪ್ಪಳ; ಅತಿಥಿ ಶಿಕ್ಷಕರ ನೇಮಕ, ಜೂ. 26ರೊಳಗೆ ಅರ್ಜಿ ಹಾಕಿ

ಆಸಕ್ತ ಯುವಕ ಮತ್ತು ಯುವತಿಯರು ತಮ್ಮ ವಿದ್ಯಾರ್ಹತೆಯ ಎಲ್ಲಾ ಪ್ರಮಾಣ ಪತ್ರಗಳು ಮತ್ತು ಆಧಾರ್ ಕಾರ್ಡ್‌ನ ಪ್ರತಿ, ರೆಸ್ಯೂಮ್ ಹಾಗೂ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳೊಂದಿಗೆ ಭಾಗವಹಿಸಿ, ಉದ್ಯೋಗದ ನೆರವನ್ನು ಪಡೆಯಬಹುದಾಗಿದೆ ಎಂದು ಪ್ರಕಟಣೆ ಹೇಳಿದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾ ಆಡಳಿತ ಭವನ, ಮೊದಲನೇ ಮಹಡಿ, ಕೊಪ್ಪಳ ಇವರನ್ನು ಸಂಪರ್ಕಿಸಬಹುದು. ಕರೆ ಮಾಡಲು ದೂರವಾಣಿ ಸಂಖ್ಯೆಗಳು 08539-220859, 9916825943, 7975653554, 8105693234 ಹಾಗೂ 6361143422.

ಕಲಬುರಗಿಯಲ್ಲಿ ನೇರ ಸಂದರ್ಶನ; ಜೂನ್ 23ರ ಶುಕ್ರವಾರ ಕಲಬುರಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ. ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ನೇರ ಸಂದರ್ಶನ ನಡೆಯಲಿದ್ದು, ಪ್ರವೇಶ ಉಚಿತ.

ಎಮ್.ಪಿ. ಗಾರ್ಡಿಂಗ್ ಸೊಲ್ಯೂಷನ್ ಪ್ರೈ.ಲಿ. ಟೆಕ್ನಿಷಿಯನ್ ಹುದ್ದೆಗೆ ಐಟಿಐ/ ಡಿಪ್ಲೋಮಾ (ಇ ಆಂಡ್ ಇ, ಇ ಆಂಡ್ ಸಿ) ವಿದ್ಯಾರ್ಹತೆ ಹೊಂದಿರುವ 18 ರಿಂದ 28 ವರ್ಷದ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ.

ವಾಲ್ವಾಯ್ಲ್ ಫ್ಲೂಯ್ಡ್ ಪವರ್‍ಇಂಡಿಯಾ ಪ್ರೈ.ಲಿ. ಟ್ರೈನಿ ಹುದ್ದೆಗೆ ಐಟಿಐ/ ಡಿಪ್ಲೋಮಾ ಪಾಸಾದ 18 ರಿಂದ 28 ವರ್ಷದೊಳಗಿನ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ.

ನೀಡ್ಸ್ ಮ್ಯಾನ್ ಪವರ್ ಸಪೋರ್ಟ್ ಸರ್ವಿಸಸ್ ಪ್ರೈ.ಲಿ.ದಲ್ಲಿ ಟೆಕ್ನಿಷಿಯನ್ ಹುದ್ದೆಗೆ ಐಟಿಐ/ ಡಿಪ್ಲೋಮಾ ಪಾಸಾದ 18 ರಿಂದ 28 ವರ್ಷದೊಳಗಿನ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳುತ್ತಿದೆ.

ಆಸಕ್ತರು ಅಂಕಪಟ್ಟಿಗಳ ಜೆರಾಕ್ಸ್, ರೆಸ್ಯೂಮ್, ಭಾವಚಿತ್ರಗಳು ಹಾಗೂ ಆಧಾರ್ ಕಾರ್ಡ್‍ ಜೊತೆಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ಅಥವ 08472-274846, 9620095270 ಸಂಖ್ಯೆಗೆ ಕರೆ ಮಾಡಬಹುದು.

English summary

Koppal district employment exchange office organized job fair on June 23. Candidates 18 to 32 age group can attend the job fair.

Source link